Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಬಬಲ್‌ನಿಂದ ಬಬಲ್‌ಗೆ ಪಯಣಿಸಲು ಬಿಸಿಸಿಐನಿಂದ ಅನುಮತಿ

IPL 2021: BCCI permits Bubble to Bubble transfers

ನವದೆಹಲಿ: ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗೆ ಸಂಬಂಧಿಸಿ ಆಟಗಾರರು ಬಯೋ ಬಬಲ್‌ನಿಂದ ಬಯೋ ಬಬಲ್‌ಗೆ ಪ್ರಯಾಣಿಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅನುಮತಿ ನೀಡಿದೆ. ಏಪ್ರಿಲ್ 9ರಿಂದ ಮೇ 30ರ ವರೆಗೆ 14ನೇ ಆವೃತ್ತಿಯ ಐಪಿಎಲ್ ನಡೆಯಲಿದೆ.

ಆಟಗಾರರು ಅವರವರ ರಾಷ್ಟ್ರೀಯ ತಂಡಗಳ ಬಯೋ ಬಬಲ್‌ನಿಂದ ಐಪಿಎಲ್ ಫ್ರಾಂಚೈಸಿಗಳ ಬಯೋಬಬಲ್‌ಗೆ ನೇರವಾಗಿ ಪ್ರವೇಶಿಸಬಹುದು ಎಂದು ಬಿಸಿಸಿಐನ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (SOPs) ಮತ್ತು ಜೈವಿಕ ಸುರಕ್ಷಿತ ಪ್ರೋಟೋಕಾಲ್‌ಗಳನ್ನು ಪಟ್ಟಿ ಮಾಡಿರುವ ವಿಸ್ತೃತ ದಾಖಲೆಯಲ್ಲಿ ಹೇಳಲಾಗಿದೆ.

ಸದ್ಯ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಸರಣಿ ಮುಕ್ತಾಯದ ಬಳಿಕ ಇಂಗ್ಲೆಂಡ್ ಮತ್ತು ಭಾರತೀಯ ಆಟಗಾರರು ಕ್ವಾರಂಟೈನ್‌ ಪಾಲಿಸದೆಯೇ ಅವರವರ ಐಪಿಎಲ್ ಬಯೋ ಬಬಲ್‌ ಒಳಗೆ ನೇರವಾಗಿ ಪ್ರವೇಶಿಸಬಹುದು ಎಂದು ಬಿಸಿಸಿಐ ತಿಳಿಸಿದೆ.

ರಾಷ್ಟ್ರೀಯ ತಂಡದ ಬಯೋ ಬಬಲ್ ಒಳಗೆ ಇಲ್ಲದ ಹೊರತಾಗಿ ಉಳಿದ ಎಲ್ಲರೂ, ಅಂದರೆ ಆಟಗಾರರು, ಮಾಲೀಕರು, ಫ್ರಾಂಚೈಸಿ ನಿರ್ವಹಣಾ ಸದಸ್ಯರು, ಕಾಮೆಂಟೇಟರ್ ಅಥವಾ ಮ್ಯಾಚ್ ಅಫೀಷಿಯಲ್ಸ್ 7 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಬೇಕೆಂದು ಬಿಸಿಸಿಐ ಸೂಚಿಸಿದೆ.

Story first published: Saturday, March 20, 2021, 15:51 [IST]
Other articles published on Mar 20, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+