Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಫೆಬ್ರವರಿ 18ಕ್ಕೆ ಐಪಿಎಲ್-14 ಆಟಗಾರರ ಹರಾಜು

IPL 2021: BCCI to host IPL 14 Auction on February 18

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ನಡೆಯಲಿದೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಈ ಸಂಗತಿಯನ್ನು ಪಿಟಿಐಗೆ ಶುಕ್ರವಾರ (ಜನವರಿ 22) ಖಾತರಿಪಡಿಸಿದೆ.

'14 ಆವೃತ್ತಿಯ ಐಪಿಎಲ್‌ನ ಆಟಗಾರರ ಹರಾಜು ಫೆಬ್ರವರಿ 18ರಂದು ನಡೆಯಲಿದೆ. ತಾಣ ಇನ್ನಷ್ಟೇ ನಿರ್ಧಾರವಾಗಬೇಕಿದೆ,' ಎಂದು ಬಿಸಿಸಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2020ರ ಐಪಿಎಲ್ ಹರಾಜು 'ಖುಷಿಯ ಸಿಟಿ' ಕೋಲ್ಕತ್ತಾದಲ್ಲಿ ನಡೆದಿತ್ತು.

ಇಂಗ್ಲೆಂಡ್ vs ಭಾರತ ದ್ವಿತೀಯ ಟೆಸ್ಟ್‌ ಫೆಬ್ರವರಿ 17ಕ್ಕೆ ಮುಗಿಯಲಿದೆ. ಈ ಟೆಸ್ಟ್ ಬಳಿಕ ನಗದು ಅದ್ದೂರಿ ಟೂರ್ನಿ ಐಪಿಎಲ್‌ಗಾಗಿ ಆಟಗಾರರ ಹರಾಜು ನಡೆಯಲಿದೆ. ಇಂಗ್ಲೆಂಡ್-ಭಾರತ ಆರಂಭಿಕ ಎರಡು ಟೆಸ್ಟ್ ಪಂದ್ಯಗಳು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿವೆ.

ಕಳೆದ ಬಾರಿ ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿತ್ತು. ಅದೂ ಕೂಡ ಕೊರೊನಾ ವೈರಸ್ ಕಾರಣದಿಂದಾಗಿ ಮಾರ್ಚ್‌ಗೆ ಬದಲಾಗಿ ಸೆಪ್ಟೆಂಬರ್‌ನಲ್ಲಿ ಟೂರ್ನಿ ಆರಂಭವಾಗಿತ್ತು. ಈ ಬಾರಿಯ ಟೂರ್ನಿ ಎಲ್ಲಿ ನಡೆಯಲಿದೆ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಬಲ್ಲ ಮಾಹಿತಿಯ ಪ್ರಕಾರ ಏಪ್ರಿಲ್-ಮೇನಲ್ಲಿ ಟೂರ್ನಿ ಆರಂಭಗೊಳ್ಳಲಿದೆ.

Story first published: Friday, January 22, 2021, 21:11 [IST]
Other articles published on Jan 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+