Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ : ಪೂಜಾರ ಆಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬ್ರೆಟ್ ಲೀ

IPL 2021 : Brett Lee expressed doubts about Cheteshwar Pujaras batting in IPL

2014ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕೊನೆಯ ಐಪಿಎಲ್ ಪಂದ್ಯ ಆಡಿದ್ದ ಚೇತೇಶ್ವರ್ ಪೂಜಾರ ಅವರನ್ನು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐವತ್ತು ಲಕ್ಷ ರೂ ಗೆ ಖರೀದಿಸಿತು. ಹೀಗಾಗಿ 7 ವರ್ಷಗಳ ಬಳಿಕ ಐಪಿಎಲ್ ಟೂರ್ನಿಯಲ್ಲಿ ಆಡುವ ಅವಕಾಶ ಚೇತೇಶ್ವರ್ ಪೂಜಾರಾಗೆ ಮತ್ತೆ ಸಿಕ್ಕಿದೆ.

2014ರ ಬಳಿಕ ಹಲವು ಹರಾಜುಗಳಲ್ಲಿ ಮಾರಾಟವಾಗದೇ ಉಳಿದಿದ್ದ ಚೇತೇಶ್ವರ್ ಪೂಜಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಖರೀದಿಸಿದಾಗ ಅನೇಕರು ಟ್ರೋಲ್ ಮಾಡಿದ್ದರು. ಟೆಸ್ಟ್ ಆಟಗಾರ ಐಪಿಎಲ್ ಆಡುವುದು ತುಂಬಾ ಕಷ್ಟ, ಚೆನ್ನೈ ಸೂಪರ್ ಕಿಂಗ್ಸ್ ಚೇತೇಶ್ವರ್ ಪೂಜಾರರನ್ನು ತಪ್ಪಾಗಿ ಖರೀದಿ ಮಾಡಿದೆ ಎಂದೆಲ್ಲಾ ಟೀಕೆಗಳು ಎದುರಾದವು. ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಬ್ರೆಟ್ ಲೀ ಕೂಡ ಚೇತೇಶ್ವರ್ ಪೂಜಾರ ಅವರ ಐಪಿಎಲ್ ಆಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಚೇತೇಶ್ವರ್ ಪೂಜಾರ ಒಬ್ಬ ಅದ್ಭುತ ಬ್ಯಾಟ್ಸ್‌ಮನ್‌ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ, ಆತನ ಸಾಮರ್ಥ್ಯ ಮತ್ತು ಜಾಣ್ಮೆಯ ಆಟ ನಿಜಕ್ಕೂ ಉತ್ತಮವಾದದ್ದು ಆದರೆ, ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒತ್ತಡದಡಿಯಲ್ಲಿ ಆಡುವದನ್ನು ಕಲಿಯಬೇಕು ಏಕೆಂದರೆ ಇದು ಟಿಟ್ವೆಂಟಿ ಹೊರತು ಟೆಸ್ಟ್ ಅಲ್ಲ, 20 ಓವರ್‌ಗಳ ಪಂದ್ಯ 90 ನಿಮಿಷದಲ್ಲಿಯೇ ಎಲ್ಲಾ ಮುಗಿದು ಹೋಗುತ್ತದೆ ಹೀಗಾಗಿ ಒತ್ತಡದಡಿಯಲ್ಲಿ ಚೇತೇಶ್ವರ್ ಪೂಜಾರ ವೇಗವಾಗಿ ರನ್ ಗಳಿಸಬೇಕಿದೆ. ಒತ್ತಡದಡಿಯಲ್ಲಿ ಚೇತೇಶ್ವರ್ ಪೂಜಾರ ಯಶಸ್ವಿಯಾಗಿ ಮತ್ತು ವೇಗವಾಗಿ ರನ್ ಗಳಿಸುತ್ತಾರಾ? ಎಂದು ಬ್ರೆಟ್ ಲೀ ಚೇತೇಶ್ವರ್ ಪೂಜಾರ ಅವರ ಮುಂದಿನ ಐಪಿಎಲ್ ಆಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Story first published: Friday, April 9, 2021, 23:39 [IST]
Other articles published on Apr 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+