ನೆಟ್ ಬೌಲರ್ ಆಗಿ ಅಫ್ಘಾನ್ ವೇಗಿ ಫಝಲ್‌ಹಕ್ ಕರೆತಂದ ಸಿಎಸ್‌ಕೆ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ನೆಟ್ ಬೌಲರ್ ಆಗಿ ಅಫ್ಘಾನಿಸ್ತಾನದ ಯುವ ವೇಗಿ ಫಝಲ್ ಫಾರೂಕಿ ಇರಲಿದ್ದಾರೆ. ಸದ್ಯ ಸಿಎಸ್‌ಕೆ ಮುಂಬೈನಲ್ಲಿ ಅಭ್ಯಾಸ ನಡೆಸುತ್ತಿದ್ದು, ತಂಡ ಸೇರಿಕೊಳ್ಳುವುದಕ್ಕಾಗಿ ಫಾರೂಕ್ ಅಫ್ಘಾನ್ ತೊರೆದಿದ್ದಾರೆ.
ಫಝಲ್‌ಹಕ್ ಚೆನ್ನೈ ಸೂಪರ್ ಕಿಂಗ್ಸ್‌ನ ನೆಟ್ ಬೌಲರ್ ಆಗಿ ಆಯ್ಕೆಯಾಗಿರುವ ಖುಷಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಟ್ವೀಟ್ ಮೂಲಕ ತೋರಿಕೊಂಡಿದೆ. 'ಮುಂಬರಲಿರುವ ಐಪಿಎಲ್ ಸೀಸನ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ನೆಟ್ ಬೌಲರ್ ಆಗಿ ಆಯ್ಕೆಯಾಗಿರುವ ಯುವ ವೇಗಿ ಫಝಲ್‌ಹಕ್ ಭಾರತಕ್ಕೆ ತೆರಳುತ್ತಿದ್ದಾರೆ' ಎಂದು ಅಫ್ಘಾನ್ ಬೋರ್ಡ್ ಟ್ವೀಟ್ ಮಾಡಿದೆ.
20ರ ಹರೆಯದ ಫಾರೂಕಿ, 12 ಪ್ರಥಮದರ್ಜೆ ಕ್ರಿಕೆಟ್ ಪಂದ್ಯ, 6 ಲಿಸ್ಟ್ ಎ ಪಂದ್ಯಗಳು ಮತ್ತು 2 ಟಿ20 ಪಂದ್ಯಗಳನ್ನು ಆಡಿದ್ದಾರೆ. ಸಿಎಸ್‌ಕೆ ತಂಡದ ಜೊತೆಗಿದ್ದು ನಾಯಕ, ಟೀಮ್ ಇಂಡಿಯಾದ ಮಾಜಿ ನಾಯಕ, ದಂತಕತೆ ಎಂಎಸ್ ಧೋನಿ ಮಾರ್ಗದರ್ಶನ ಪಡೆಯುವ ಅವಕಾಶ ಫಾರೂಕಿಗೆ ಲಭಿಸಿದೆ.
14ನೇ ಆವೃತ್ತಿಯ ಐಪಿಎಲ್‌ಗೆ ಸಂಬಂಧಿಸಿ ಸಿಎಸ್‌ಕೆ ನೂತನ ಜೆರ್ಸಿ ಬಿಡುಗಡೆ ಮಾಡಿದೆ. ಈ ಜೆರ್ಸಿಯನ್ನು ಮರು ಬಳಕೆಯ ಪ್ಲ್ಯಾಸಿಕ್‌ನಿಂದ ತಯಾರಿಸಲಾಗಿದೆ. ಒಂದು ಜೆರ್ಸಿಗೆ ಕನಿಷ್ಠ 15 ಬಳಸಿದ ಪ್ಲ್ಯಾಸ್ಟಿಕ್ ಬಾಟಲ್‌ಗಳನ್ನು ಉಪಯೋಗಿಸಲಾಗಿದೆ. ಈ ಬಟ್ಟೆಯ ಪಾಲಿಸ್ಟರ್ ಶೇ. 90ರಷ್ಟು ಕನಿಷ್ಠ ನೀರು ಬಳಸುತ್ತದೆ ಅನ್ನೋದೂ ವಿಶೇಷ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications