Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಾರ್ನರ್-ಪಾಂಡೆ ಅರ್ಧ ಶತಕ, ಹೈದರಾಬಾದ್ ಉತ್ತಮ ಟೋಟಲ್

IPL 2021: Chennai Super Kings vs Sunrisers Hyderabad, 23rd Match, Playing XI, 1st innings Updates

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 23ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ, ಚೆನ್ನೈ ಸೂಪರ್ ಕಿಂಗ್ಸ್‌ಗೆ 172 ರನ್‌ ಗುರಿ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವಾರ್ನರ್ 57 (55), ಜಾನಿ ಬೇರ್ಸ್ಟೋವ್ 7, ಮನೀಶ್ ಪಾಂಡೆ 61 (46), ಕೇನ್ ವಿಲಿಯಮ್ಸನ್ 26, ಕೇದಾರ್ ಜಾಧವ್ 12 ರನ್‌ನೊಂದಿಗೆ 20 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿತು.

1
50831

ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್‌ನಲ್ಲಿ 10000 ರನ್ ಬಾರಿಸಿದರಲ್ಲದೆ, ಐಪಿಎಲ್‌ನಲ್ಲಿ 50 ಅರ್ಧ ಶತಕಗಳ ವಿಶೇಷ ದಾಖಲೆಯೂ ನಿರ್ಮಿಸಿದ್ದಾರೆ. ಕನ್ನಡಿಗ ಮನೀಶ್ ಪಾಂಡೆ ಕೂಡ ಇದೇ ಪಂದ್ಯದಲ್ಲಿ 20ನೇ ಐಪಿಎಲ್ ಅರ್ಧ ಶತಕ ಬಾರಿಸಿದಂತಾಗಿದೆ.

ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನ ಸ್ಯಾಮ್ ಕರನ್ 1, ಲುಂಗಿ ಸಾನಿ ಎನ್‌ಗಿಡಿ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.

Story first published: Wednesday, April 28, 2021, 21:36 [IST]
Other articles published on Apr 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+