For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಗೂ ಮುನ್ನವೇ ಶತಕ ಬಾರಿಸಿದ ಮುಂಬೈನ ಕ್ರಿಸ್‌ ಲಿನ್!

IPL 2021: Chris Lynn completed 100 COVID tests

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್ ಲಿಸ್ ಶತಕ ಬಾರಿಸಿದ್ದಾರೆ. ಆದರೆ ಇದು ಕ್ರಿಕೆಟ್‌ನಲ್ಲಿ ಅಲ್ಲ. ಕೊರೊನಾ ಪರೀಕ್ಷೆಯಲ್ಲಿ. ಅಂದರೆ ಈವರೆಗೆ ಲಿನ್ ಒಟ್ಟಾರೆ 100 ಕೋವಿಡ್-19 ಪರೀಕ್ಷೆಗಳನ್ನು ಪೂರೈಸಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಕ್ರಿಸ್ ಲಿನ್ ಅವರಿಗೀಗ 30ರ ಹರೆಯ. ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಓಡಾಟ ಹೀಗೆ ಒಟ್ಟಾರೆಯಾಗಿ ಲಿನ್ ಈ ವರೆಗೆ 100 ಕೊರೊನಾ ಟೆಸ್ಟ್‌ಗಳನ್ನು ಮಾಡಿಸಿಕೊಂಡಿದ್ದಾರೆ. ಕ್ರಿಕೆಟರ್ ಒಬ್ಬ ಇಷ್ಟು ಸಂಖ್ಯೆಯ ಟೆಸ್ಟ್ ಮಾಡಿಸಿಕೊಂಡಿರುವ ಅಪರೂಪದ ದಾಖಲೆಯಿದು.

ಏಪ್ರಿಲ್ 9ರಿಂದ ಮೇ 30ರ ವರೆಗೆ 14ನೇ ಆವೃತ್ತಿಯ ಐಪಿಎಲ್ ನಡೆಯಲಿದೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪರ ಲಿನ್ ಈ ಬಾರಿ ಕಣಕ್ಕಿಳಿಯಲಿದ್ದಾರೆ. ಸದ್ಯ ಚೆನ್ನೈಯಲ್ಲಿ ಲಿನ್ ಬಯೋ ಬಬಲ್‌ ಒಳಗಿದ್ದಾರೆ. ಐಪಿಎಲ್ ಸಲುವಾಗಿಯೂ ಲಿನ್ ಈಗಾಗಲೇ ಕೊರೊನಾ ಟೆಸ್ಟ್‌ಗಳನ್ನು ಮಾಡಿಸಿಕೊಂಡಿದ್ದಾರೆ.

ಕೊರೊನಾ ಆರಂಭ ಆದಾಗಿನಿಂದ ಹಿಡಿದು ಈವರೆಗೆ ಕ್ರಿಸ್ ಮಾಡಿಸಿಕೊಂಡಿರುವ ಕೊರೊನಾ ಟೆಸ್ಟ್‌ಗಳ ಲೆಕ್ಕ 100 ಆಗಿದೆ. 4 ಏಕದಿನ ಪಂದ್ಯಗಳಲ್ಲಿ 75 ರನ್, 18 ಟಿ20ಐ ಪಂದ್ಯಗಳಲ್ಲಿ 291 ರನ್, 41 ಐಪಿಎಲ್ ಪಂದ್ಯಗಳಲ್ಲಿ 1280 ರನ್ ದಾಖಲೆ ಲಿನ್ ಹೊಂದಿದ್ದಾರೆ.

Story first published: Wednesday, April 7, 2021, 16:54 [IST]
Other articles published on Apr 7, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+