
ಐಪಿಎಲ್‌ನಲ್ಲಿ ಪಂಜಾಬ್ ಫ್ರಾಂಚೈಸಿ ಪಾಲಾದ ಬಳಿಕ ಕೆಎಲ್ ರಾಹುಲ್ ಅದ್ಭುತವಾಗಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಪಂಜಾಬ್ ಪರವಾಗಿ ಆಡಿದ ಪ್ರತಿ ಆವೃತ್ತಿಯಲ್ಲೂ ರಾಹುಲ್ 500+ರನ್‌ಗಳಿಸಿದ ಸಾಧನೆ ಮಾಡಿದ್ದಾರೆ. ಸತತವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರಲ್ಲಿ ಟಾಪ್ 3 ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ರಾಹುಲ್.
2018ರ ಆವೃತ್ತಿಯಲ್ಲಿ ರಾಹುಲ್ 3ನೇ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿದ್ದರು.ಆ ಆವೃತ್ತಿಯಲ್ಲಿ ರಾಹುಲ್ 54.91ರ ಸರಾಸರಿಯಲ್ಲಿ 659 ರನ್‌ಗಳಿಸಿದ್ದರು. 158.41ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. ಆ ಆವೃತ್ತಿಯಲ್ಲಿ ರಾಹುಲ್ 6 ಅರ್ಧಶತಕ ಬಾರಿಸಿದ್ದಾರೆ.
2019ರ ಆವೃತ್ತಿಯಲ್ಲಿ ರಾಹುಲ್ 593 ರನ್‌ಗಳಿಸಿ ಎರಡನೇ ಟಾಪ್ ಸ್ಕೋರರ್ ಎನಿಸಿದ್ದರು. ಕಳೆದ ಐಪಿಎಲ್ ಆವೃತ್ತಿಯಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿದ್ದ ರಾಹುಲ್ 14 ಪಂದ್ಯಗಳಲ್ಲಿ 670 ರನ್‌ಬಾರಿಸಿದ್ದರು. ಇದು ಆವೃತ್ತಿಯೊಂದರಲ್ಲಿ ಪಂಜಾಬ್ ಕಿಂಗ್ಸ್ ಆಟಗಾರನೋರ್ವ ದಾಖಲಿಸಿದ ಅತಿ ಹೆಚ್ಚಿನ ಸ್ಕೋರ್ ಕೂಡ ಆಗಿದೆ. ಈ ಮೂಲಕ ಕಳೆದ ಐಪಿಎಲ್‌ನಲ್ಲಿ ರಾಹುಲ್ ಆರೆಂಜ್ ಕ್ಯಾಪ್ ಕೂಡ ತಮ್ಮದಾಗಿಸಿಕೊಂಡಿದ್ದರು.
ಈ ಬಾರಿಯ ಐಪಿಎಲ್‌ನಲ್ಲಿ ರಾಹುಲ್ ತಲುಪುವ ಸಾಧ್ಯತೆಯಿರುವ ಮೈಲಿಗಲ್ಲುಗಳು: