ಐಪಿಎಲ್ 2021: ಬಯೋಬಬಲ್‌ನಿಂದ ಹೊರಬರಲು ಫ್ರಾಂಚೈಸಿಗಳು ಸಿದ್ಧತೆ

ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್‌ಅನ್ನು ಮುಂದೂಡಲಾಗಿದೆ. ಹೀಗಾಗಿ ಆಟಗಾರರು ಈಗ ತವರಿಗೆ ವಾಪಾಸಾಗುವತ್ತ ಚಿತ್ತ ನೆಟ್ಟಿದ್ದಾರೆ. ಈ ಮಧ್ಯೆ ಕೊರನಾ ವೈರಸ್‌ನ ಪ್ರಕರಣಗಳಿಂದ ಸುರಕ್ಷಿತವಾಗಿರುವ ತಂಡಗಳು ಬಯೋಬಬಲ್‌ನಿಂದ ಹೊರಬರಲು ಸಜ್ಜಾಗಿವೆ.
ಐಪಿಎಲ್‌ನಲ್ಲಿ ಸದ್ಯ ನಾಲ್ಕು ಫ್ರಾಂಚೈಸಿಗಳು ಕೊರೊನಾ ವೈಸರ್‌ನಿಂದ ಸುರಕ್ಷಿತವಾಗಿದೆ. ಇದರಲ್ಲಿ ಡೆಲ್ಲಿಯಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ಹಾಗೂ ಸಿಬ್ಬಂದಿಗಳು ಈಗಾಗಲೇ ಬಯೋಬಬಲ್‌ಅನ್ನು ತೊರೆಯುತ್ತಿದ್ದಾರೆ.
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಕೊರೊನಾ ವೈರಸ್ ಪ್ರಕರಣಗಳಿಲ್ಲದೆ ಸುರಕ್ಷಿತವಾಗಿರುವ ತಂಡವಾಗಿದೆ. ಅಹ್ಮದಾಬಾದ್‌ನಲ್ಲಿರುವ ಆರ್‌ಸಿಬಿ ಬುಧವಾರ ಬಯೋಬಬಲ್‌ನಿಂದ ಹೊರಬರುವ ಸಿದ್ಧತೆಯಲ್ಲಿದೆ.
ಪಂಜಾಬ್ ಕಿಂಗ್ಸ್ ತಂಡದ ಸದಸ್ಯರು ಕೂಡ ಬುಧವಾರ ಹಾಗೂ ಗುರುವಾರದಂದು ಬಯೋಬಬಲ್‌ನಿಂದ ಹೊರಬರಲಿದ್ದಾರೆ. ಪಂಜಾಬ್ ಕಿಂಗ್ಸ್‌ನಂತಾ ಕೆಲ ಫ್ರಾಂಚೈಸಿಗಳು ಚಾರ್ಟರ್ಡ್ ಫ್ಲೈಟ್‌ನಂತಾ ಮತ್ತಷ್ಟು ವ್ಯವಸ್ಥೆಗಳನ್ನು ಸಜ್ಜುಗೊಳಿಸುತ್ತಿದೆ. "ನಾವು ನಾಳೆಯಿಂದ ಬಯೋಬಬಲ್‌ಅನ್ನು ತೊರೆಯುತ್ತಿದ್ದೇವೆ. ಬೇರೆ ಬೇರೆ ಚಾರ್ಟರ್ಡ್ ಫ್ಲೈಟ್‌ಗಳ ಮೂಲಕ ತೆರಳುವ ಸಾಧ್ಯತೆಯಿದೆ" ಎಂದು ಪಂಜಾಬ್ ತಂಡದ ಅಧಿಕಾರಿಯೊಬ್ಬರು ಐಎಎನ್‌ಎಸ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಕೊರೊನಾ ವೈರಸ್‌ನ ಪ್ರಭಾವಕ್ಕೆ ಒಳಗಾಗದ ತಂಡಗಳಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications