Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಸಿಸಿಐಗೆ ತಲೆಬಾಗಿದ ಕ್ರಿಕೆಟ್ ಸೌತ್ ಆಫ್ರಿಕಾ: ಐಪಿಎಲ್‌ಗಾಗಿ ಸ್ಟಾರ್ ಆಟಗಾರರು ತಂಡದಿಂದ ಹೊರಕ್ಕೆ

IPL 2021: Cricket South Africa bows down to BCCI, star players released for IPL 2021

ಬಿಸಿಸಿಐ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಮಂಡಳಿ ಎಂಬುದು ಹೊಸ ವಿಚಾರವೇನಲ್ಲ. ಆದರೆ ಈ ಮಂಡಳಿ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಪ್ರಭಾವವನ್ನು ಎಷ್ಟರ ಮಟ್ಟಿಗೆ ಹೊಂದಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ಐಪಿಎಲ್ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದಿಂದ ಕ್ರಿಕೆಟ್ ಸೌತ್ ಆಫ್ರಿಕಾ ಸ್ಟಾರ್ ಆಟಗಾರರನ್ನು ಬಿಡುಗಡೆಗೊಳಿಸಿರುವುದು ಬಿಸಿಸಿಐ ಪ್ರಭಾವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಮುಂಬರುವ ಏಪ್ರಿಲ್ 2 ರಿಂದ 16ರ ವರೆಗೆ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡಗಳ ನಡುವೆ 3 ಏಕದಿನ ಹಾಗೂ 4 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಪಾಲ್ಗೊಳ್ಳುವ ಟಿ20 ತಂಡದಿಂದ ಸ್ಟಾರ್ ಆಟಗಾರರನ್ನು ಕ್ರಿಕೆಟ್ ಸೌಥ್ ಆಫ್ರಿಕಾ ಹೊರಗಿಟ್ಟಿದೆ. ಈ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು "ಸಿಎಸ್‌ಎ ಹಾಗೂ ಬಿಸಿಸಿಐ ಮಧ್ಯೆ ಒಪ್ಪಂದವಾಗಿದ್ದು ಅದರ ಪ್ರಕಾರ ಐಪಿಎಲ್‌ನಲ್ಲಿ ಒಪ್ಪಂದವನ್ನು ಹೊಂದಿರುವ ಆಟಗಾರರನ್ನು ಮುಂಚಿತವಾಗಿಯೇ ಬಿಡುಗಡೆಗೊಳಿಸಲಾಗುತ್ತದೆ" ಎಂದಿದೆ.

ಟಿ20 ತಂಡದಿಂದ ಹೊರಗೆ

ಟಿ20 ತಂಡದಿಂದ ಹೊರಗೆ

ಐಪಿಎಲ್‌ನಲ್ಲಿ ಆಡುವ 10 ದಕ್ಷಿಣ ಆಫ್ರಿಕಾ ಆಟಗಾರರ ಪೈಕಿ ಐವರು ಆಟಗಾರರು ಏಕದಿನ ತಂಡದಲ್ಲಿ ಇರಲಿದ್ದಾರೆ. ಯಾಕೆಂದರೆ ಇದು ಐಪಿಎಲ್ ಆರಂಭಕ್ಕೆ ಮುನ್ನ ನಡೆಯಲಿದೆ. ಆದರೆ ಈ ಐವರು ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಐಪಿಎಲ್ ಪಂದ್ಯಗಳೊಂದಿಗೆ ಹೊಂದಾಣಿಕೆಯಾಗದ ಕಾರಣ ಈ ಆಟಗಾರರು ತಂಡದಿಂದ ಹೊರಗುಳಿದಿದ್ದು ಐಪಿಎಲ್ ಫ್ರಾಂಚೈಸಿಗಳನ್ನು ಕೂಡಿಕೊಳ್ಳಲಿದ್ದಾರೆ.

ಹೊರಗುಳಿಯುವ ಆಟಗಾರರು

ಹೊರಗುಳಿಯುವ ಆಟಗಾರರು

ಕಗಿಸೋ ರಬಡಾ, ಕ್ವಿಂಟನ್ ಡಿ ಕಾಕ್, ಲುಂಗಿ ಎನ್‌ಗಿಡಿ, ಡೇವಿಡ್ ಮಿಲ್ಲರ್, ಎನ್ರಿಕ್ ನಾರ್ಕಿಯಾ ಈ ಎಲ್ಲಾ ಆಟಗಾರರು ಪಾಕಿಸ್ತಾನದ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಇರಲೇಬೇಕಿತ್ತು. ಆದರೆ ಬಿಸಿಸಿಐ ಒತ್ತಡದ ಕಾರಣದಿಂದಾಗಿ ಐಪಿಎಲ್‌ಗಾಗಿ ಈ ಆಟಗಾರರನ್ನು ತಂಡದಿಂದ ಹೊರಗಿಡಲಾಗಿದೆ.

ದಕ್ಷಿಣ ಆಫ್ರಿಕಾ ಏಕದಿನ ತಂಡ ಸ್ಕ್ವಾಡ್

ದಕ್ಷಿಣ ಆಫ್ರಿಕಾ ಏಕದಿನ ತಂಡ ಸ್ಕ್ವಾಡ್

ಟೆಂಬಾ ಬಾವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಬ್ಯೂರನ್ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಜನ್ನೆಮನ್ ಮಲನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಜಿಡಿ, ಅನ್ರಿಚ್ ನಾರ್ಟ್ಜೆ, ಆಂಡಿಲೆ ಫೆಹ್ಲಕ್ವಾಯೊ, ಕಗಿಸೊ ಜೊಬಾಟ್ಸ್, ತಬ್ರೈಜ್ , ರಾಸ್ಸಿ ವಾನ್ ಡೆರ್ ಡುಸೆನ್, ಜೂನಿಯರ್ ದಲಾ, ಲುಥೋ ಸಿಪಮ್ಲಾ, ವಿಯಾನ್ ಮುಲ್ಡರ್, ಸಿಸಂದ ಮಗಾಲಾ, ಕೈಲ್ ವೆರೆನ್ನೆ, ಡ್ಯಾರಿನ್ ಡುಪಾವಿಲ್ಲನ್, ಲಿಜಾಡ್ ವಿಲಿಯಮ್ಸ್

ದಕ್ಷಿಣ ಆಫ್ರಿಕಾ ಟಿ20 ಸ್ಕ್ವಾಡ್

ದಕ್ಷಿಣ ಆಫ್ರಿಕಾ ಟಿ20 ಸ್ಕ್ವಾಡ್

ಟೆಂಬಾ ಬಾವುಮಾ (ನಾಯಕ), ಜಾರ್ನ್ ಫೋರ್ಟುಯಿನ್, ಬ್ಯೂರನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಜಾರ್ಜ್ ಲಿಂಡೆ, ರಾಸ್ಸಿ ವಾನ್ ಡೆರ್ ಡುಸೆನ್, ಜನ್ನೆಮನ್ ಮಲನ್, ಸಿಸಂದಾ ಮಾಗಲಾ, ಡ್ವೈನ್ ಪ್ರಿಟೋರಿಯಸ್, ತಬ್ರೈಜ್ ಶಮ್ಸಿ, ಲೂಥೊ ಸಿಪಮ್ಲಾ, ಕೈಲ್ ವೆರಿಜೋನ್ , ಮಿಗೇಲ್ ಪ್ರಿಟೋರಿಯಸ್, ಲಿಜಾಡ್ ವಿಲಿಯಮ್ಸ್, ವಿಹಾನ್ ಲುಬ್ಬೆ.

Story first published: Saturday, March 20, 2021, 8:41 [IST]
Other articles published on Mar 20, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+