Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊದಲನೇ ಪಂದ್ಯದಲ್ಲಿ ದಂಡ ಕಟ್ಟಿ ಎರಡನೇ ಪಂದ್ಯದಲ್ಲಿ ಉತ್ತರ ಕೊಟ್ಟ ಧೋನಿ

IPL 2021 : CSK bowlers finished the innings in 88 minutes against Punjab Kings

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಏಪ್ರಿಲ್ 10ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಪಂದ್ಯ ನಡೆದಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 189 ರನ್‌ಗಳ ಗುರಿಯನ್ನು ಬೆನ್ನತ್ತಿ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯವನ್ನು ಸೋಲುವುದರ ಜೊತೆಗೆ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ದಂಡಕ್ಕೂ ಒಳಗಾಗಿತ್ತು.

2021ರ ಐಪಿಎಲ್ ನೀತಿ ಸಂಹಿತೆ ಪ್ರಕಾರ ಪ್ರತಿ ತಂಡಗಳು ಕೂಡ 20 ಓವರ್‌ಗಳನ್ನು 90 ನಿಮಿಷಗಳಲ್ಲಿ ಮಾಡಿ ಮುಗಿಸಬೇಕು ಇಲ್ಲದಿದ್ದರೆ ತಂಡದ ನಾಯಕನಿಗೆ 12 ಲಕ್ಷ ದಂಡ ವಿಧಿಸುವುದಾಗಿ ನಿಯಮವನ್ನು ಜಾರಿಗೊಳಿಸಲಾಗಿತ್ತು. ಇದರಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಗೆ 12 ಲಕ್ಷ ದಂಡವನ್ನು ವಿಧಿಸಲಾಗಿತ್ತು. ಮೊದಲ ಪಂದ್ಯದಲ್ಲಿ 12 ದಂಡವನ್ನು ತೆತ್ತಿದ್ದ ಧೋನಿ ಶುಕ್ರವಾರ ( ಏಪ್ರಿಲ್ 16 ) ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅತಿ ಬೇಗನೆ ಬೌಲಿಂಗ್ ಮಾಡಿಸಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 88 ನಿಮಿಷಗಳಲ್ಲಿಯೇ 20 ಓವರ್‌ಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್‌ಗಳು ಮಾಡಿ ಮುಗಿಸಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಇಷ್ಟು ವೇಗವಾಗಿ ಯಾವ ತಂಡದವರೂ ಸಹ ಬೌಲಿಂಗ್ ಮುಗಿಸಿರಲಿಲ್ಲ. ಮೊದಲನೇ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ನಿಂದಾಗಿ ದಂಡ ಕಟ್ಟಿದ್ದ ಧೋನಿ ಎರಡನೇ ಪಂದ್ಯದಲ್ಲಿ ಅತೀ ವೇಗವಾಗಿ ಇನ್ನಿಂಗ್ಸ್ ಮುಗಿಸಿದ್ದಾರೆ.

Story first published: Friday, April 16, 2021, 23:05 [IST]
Other articles published on Apr 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+