For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೇ ಉಳಿಯಲಿದ್ದಾರೆ ಸುರೇಶ್ ರೈನಾ

IPL 2021: CSK retain Suresh Raina for 2021 IPL season

2020ರ ಐಪಿಎಲ್ ಆವೃತ್ತಿಯಲ್ಲಿ ಅನಿರೀಕ್ಷಿತವಾಗಿ ಕಡೇಯ ಕ್ಷಣದಲ್ಲಿ ಹೊರಗುಳಿದಿದ್ದರು ಸುರೇಶ್ ರೈನಾ. ಅದಾದ ಬಳಿಕ ರೈನಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬಂತಾ ವಾತಾವರಣ ಸೃಷ್ಟಿಯಾಗಿತ್ತು. ಈ ಬಾರಿಯ ಐಪಿಎಲ್‌ನಲ್ಲಿ ರೈನಾ ಚೆನ್ನೈ ತಂಡದಲ್ಲೇ ಮುಂದುವರಿರುವ ಬಗ್ಗೆ ಸಾಕಷ್ಟು ಅನುಮಾಗಳು ವ್ಯಕ್ತವಾಗಿತ್ತು.

ಆದರೆ ಈ ಪ್ರಶ್ನೆಗೆಳಿಗೆ ಚೆನ್ನೈ ಸೂಪರ್ ಕಿಂಗ್ಸ್ ಉತ್ತರವನ್ನು ನೀಡಿದೆ. ಸುರೇಶ್ ರೈನಾ ಅವರನ್ನು ನಾವು ತಂಡಕ್ಕೆ ರೀಟೈನ್ ಮಾಡಿಕೊಳ್ಳಲಿದ್ದೇವೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಧಿಕೃತವಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ ಎಂದು ವರದಿ ಮಾಡಿದೆ. ಇದೇ ಸಂದರ್ಭದಲ್ಲಿ ಚೆನ್ನೈ ತಂಡದ ನಾಯಕರಾಗಿ ಧೋನಿ ಮುಂದುವರಿಯಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಹೇಳಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಹರ್ಭಜನ್ ಸಿಂಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಒಪ್ಪಂದ ಅಂತ್ಯಗೊಳ್ಳುತ್ತಿರುವುದನ್ನು ಖಚಿತ ಪಡಿಸಿದರು. ಈ ವಿಚಾರವಾಗಿಯೂ ಹರ್ಭಜನ್ ಸಿಂಗ್ ಜೊತೆಯಲ್ಲಿ ಕೆಲ ಆಟಗಾರರನ್ನು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಬಿಡುಗಡೆಗೊಳಿಸಲಿದೆ ಎಂದಿದೆ. ಯಾವೆಲ್ಲಾ ಆಟಗಾರರು ತಂಡಗಳು ಬಿಡುಗಡೆಗೊಳಿಸಲಿದೆ ಎಂಬುದು ಬುಧವಾರ ಸಂಜೆಯ ವೇಳೆಗೆ ಸ್ಪಷ್ಟವಾಗಲಿದೆ.

ಸುರೇಶ್ ರೈನಾ ಐಪಿಎಲ್ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. 2020ರ ಆವೃತ್ತಿಯ ಐಪಿಎಲ್‌ಗಾಗಿ ಅವರು ತಂಡದ ಜೊತೆಗೆ ದುಬೈಗೆ ಪ್ರಯಾಣವನ್ನು ಬೆಳೆಸಿದ್ದರು. ಆದರೆ ಟೂರ್ನಿಯ ಆರಂಭಕ್ಕೂ ಮುನ್ನ ಇದ್ದಕ್ಕಿದ್ದಂತೆ ರೈನಾ ಕೌಟುಂಬಿಕ ಕಾರಣವನ್ನು ನೀಡಿ ತವರಿಗೆ ಮರಳಿದ್ದರು. ಇದು ಸಾಕಷ್ಟು ಗೊಂದಲದ ವಾತಾವರಣವನ್ನುಂಟು ಮಾಡಿತ್ತು.

34ರ ಹರೆಯದ ಸುರೇಶ್ ರೈನಾ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎನಿಸಿದ್ದಾರೆ. 164 ಪಂದ್ಯಗಳಲ್ಲಿ ಪಾಲ್ಗೊಂಡಿರುವ ಅವರು 4527 ರನ್‌ಗಳನ್ನು ಬಾರಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದರು.

Story first published: Wednesday, January 20, 2021, 16:27 [IST]
Other articles published on Jan 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+