ನೆಗೆಟಿವ್ ಬಂದಿದ್ದ ಚೆನ್ನೈ ಕೋಚ್ ಮೈಕ್ ಹಸ್ಸಿ ಕೋವಿಡ್ ವರದಿ ಮತ್ತೆ ಪಾಸಿಟಿವ್

ಐಪಿಎಲ್ ಟೂರ್ನಿಯ ಮಧ್ಯ ಭಾಗದಲ್ಲಿ ಕೊರೊನಾ ವೈರಸ್ ಬಯೋಬಬಲ್‌ನ ಒಳಗೆ ಅಟ್ಟಹಾಸಗೈದ ಕಾರಣ ಟೂರ್ನಿಯನ್ನು ಮುಂದೂಡಲಾಗಿದೆ. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಕೂಡ ಕೊರೊನಾ ವೈರಸ್‌ಗೆ ತುತ್ತಾಗಿದ್ದರು. ಬಳಿಕ ಪತ್ಯೇಕವಾಗಿದ್ದ ಮೈಕ್ ಹಸ್ಸಿ ಕಳೆದ ಶನಿವಾರ ನಡೆಸಿದ ಪರೀಕ್ಷೆಯನ್ನು ನೆಗೆಟಿವ್ ವರದಿಯನ್ನು ಹೊಂದಿದ್ದರು.
ಆದರೆ ಭಾರತದಿಂದ ವಾಪಾಸಾಗುವ ಮುನ್ನ ಎರಡನೇ ಪರೀಕ್ಷೆಯ ಫಲಿತಾಂಶಕ್ಕೆ ಕಾದಿದ್ದ ಮೈಕ್ ಹಸ್ಸಿಗೆ ನಿರಾಸೆಯಾಗಿದೆ. ಎರಡನೇ ಕೊರೊನಾ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದೆ. ಮತ್ತಷ್ಟು ದಿನಗಳ ಕಾಲ ಭಾರತದಲ್ಲಿಯೇ ಉಳಿದುಕೊಳ್ಳುವ ಅನಿವಾರ್ಯತೆ ಉಂಟಾಗಿದೆ.
ದೆಹಲಿಯಲ್ಲಿ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮೈಕ್ ಹಸ್ಸಿ ಕೊರೊನಾ ವೈರಸ್‌ಗೆ ತಿತ್ತಾಗಿದ್ದರು. ತಂಡದ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಕೂಡ ಈ ವೈರಸ್‌ಗೆ ತುತ್ತಾಗಿದ್ದರು. ಬಳಿಕ ಈ ಇಬ್ಬರು ಕೂಡ ವಿಶೇಷ ವಿಮಾನದಲ್ಲಿ ಚೆನ್ನೈಗೆ ಆಗಮಿಸಿ ಚಿಕಿತ್ಸೆಗೆ ಒಳಗಾಗಿದ್ದರು.
ಈ ಬಾರಿಯ ಐಪಿಎಲ್‌ನಲ್ಲಿ ಭಾಗಿಯಾಗಿದ್ದ ಆಸ್ಟ್ರೇಲಿಯಾದ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳು ತಕ್ಷಣ ತವರಿಗೆ ಮರಳಲು ನಿರ್ಬಂಧವಿರುವ ಕಾರಣ ಮಾಲ್ಡೀವ್ಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೈಕ್ ಹಸ್ಸಿ ಕೊರೊನಾ ವೈರಸ್‌ಗೆ ತುತ್ತಾಗಿರುವ ಕಾರಣ ಆ ತಂಡವನ್ನು ಸೇರಿಕೋಳ್ಳಲು ಸಾಧ್ಯವಾಗಿಲ್ಲ. ನೆಗೆಟಿವ್ ವರದಿ ಬಂದ ಬಳಿಕ ಹಸ್ಸಿ ಮಾಲ್ಡೀವ್ಸ್‌ಗೆ ತೆರಳಿ ನಂತರ ತಂಡದ ಜೊತೆಗೆ ಆಸ್ಟ್ರೇಲಿಯಾಗೆ ಪ್ರಯಾಣಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications