Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಆರ್‌ಸಿಬಿಗೆ ಇನ್ನಷ್ಟು ಬಲ, ತಂಡ ಸೇರಿದ ಡೇನಿಯಲ್ ಸ್ಯಾಮ್ಸ್

IPL 2021: Daniel Sams joins RCB bio bubble after testing negative for Covid-19

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಆಕರ್ಷಣೀಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಇನ್ನಷ್ಟು ಬಲ ಬಂದಿದೆ. ಆಸ್ಟ್ರೇಲಿಯಾದ ಬೌಲಿಂಗ್ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್ ಅರ್‌ಸಿಬಿ ಬಯೋಬಬಲ್ ಸೇರಿಕೊಂಡಿದ್ದಾರೆ. ಸ್ಯಾಮ್ಸ್‌ ಅವರ ಕೋವಿಡ್-19 ಫಲಿತಾಂಶ ನೆಗೆಟಿವ್ ಬಂದಿರುವುದರಿಂದ ಅವರು ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ.

14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಡೇನಿಯಲ್ ಸ್ಯಾಮ್ಸ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿತ್ತು. ಅಸಲಿಗೆ ಸ್ಯಾಮ್ಸ್ ಆಸ್ಟ್ರೇಲಿಯಾದಿಂದ ಚೆನ್ನೈಯ ಹೋಟೆಲ್ ರೂಮ್‌ಗೆ ಬಂದಾಗ ಅವರ ಕೋವಿಡ್ ಪರೀಕ್ಷಾ ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ ಎರಡನೇ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದಿತ್ತು.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

'ಕೋವಿಡ್-19 ಫಲಿತಾಂಶ ನೆಗೆಟಿವ್ ಬಂದಿರುವ ಕಾರಣ ಆರ್‌ಸಿಬಿ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್ ಏಪ್ರಿಲ್ 17ರಂದು ಆರ್‌ಸಿಬಿ ಬಯೋ ಬಬಲ್ ಸೇರಿಕೊಂಡಿದ್ದಾರೆ ಎಂದು ತಿಳಿಸಲು ಖುಷಿಯಾಗುತ್ತಿದೆ,' ಎಂದು ಆರ್‌ಸಿಬಿ ಹೇಳಿಕೆ ನೀಡಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡ ಟೂರ್ನಿಯಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮುಂದೆ ಏಪ್ರಿಲ್ 18ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಆರ್‌ಸಿಬಿ ಮಧ್ಯೆ ಪಂದ್ಯ ನಡೆಯಲಿದೆ. ಚೆನ್ನೈಯಲ್ಲಿ 3.30 PMಗೆ ಈ ಪಂದ್ಯ ನಡೆಯಲಿದೆ.

Story first published: Saturday, April 17, 2021, 18:23 [IST]
Other articles published on Apr 17, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+