ಐಪಿಎಲ್ 2021: ಹರಾಜು, ಟೂರ್ನಿ ಆರಂಭದ ಸಂಭಾವ್ಯ ದಿನಾಂಕ ಪ್ರಕಟ

ನವದೆಹಲಿ: 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ಆಟಗಾರರ ಹರಾಜು ಮತ್ತು ಟೂರ್ನಿ ಆರಂಭದ ಸಂಭಾವ್ಯ ದಿನಾಂಕ ಪ್ರಕಟವಾಗಿದೆ. ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿಯನ್ನು ಏಪ್ರಿಲ್ 10ರ ಬಳಿಕ ನಡೆಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಇನ್ ಇಂಡಿಯಾ ಆಲೋಚಿಸಿದೆ ಎನ್ನಲಾಗಿದೆ.
14ನೇ ಆವೃತ್ತಿಯ ಐಪಿಎಲ್‌ಗೆ ಸಂಬಂಧಿಸಿ ಆಟಗಾರರ ಹರಾಜು ಫೆಬ್ರವರಿ 11ರಂದು ನಡೆಯುವ ನಿರೀಕ್ಷೆಯಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಂಟು ತಂಡಗಳು ತನ್ನಲ್ಲೇ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಬಿಸಿಸಿಐಗೆ ಪತ್ರ ಸಲ್ಲಿಸಲು ಜನವರಿ 20 ಕಡೇಯ ದಿನವಾಗಿರಲಿದೆ. ಆಟಗಾರ ವ್ಯಾಪಾರಕ್ಕೆ ಫೆಬ್ರವರಿ 4 ಕೊನೇ ದಿನವಾಗಿರಲಿದೆ.
2022ರಲ್ಲಿ ಐಪಿಎಲ್‌ನಲ್ಲಿ 8ಕ್ಕೆ ಬದಲಾಗಿ 10 ತಂಡಗಳು ಕಾಣಿಸಿಕೊಳ್ಳಲಿವೆ. ಎರಡು ಹೆಚ್ಚುವರಿ ತಂಡಗಳಿಗಾಗಿ ಏಪ್ರಿಲ್‌ನಲ್ಲಿ ಬಿಸಿಸಿಐ ಟೆಂಡರ್ ಕರೆಯುವ ಸಾಧ್ಯತೆಯಿದೆ. ಹೊಸ ತಂಡಗಳ ಮೂಲ ಬೆಲೆ ಕನಿಷ್ಠ 1500 ಕೋ.ರೂ. ಆಗಿರಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
2021ರ ಐಪಿಎಲ್ ಭಾರತದಲ್ಲಿ ನಡೆಯುತ್ತಾ ಇಲ್ಲ ಹಿಂದಿನ ಸೀಸನ್‌ನಂತೆ ಯುಎಇಯಲ್ಲಿ ನಡೆಯುತ್ತಾ ಅನ್ನೋದು ಸ್ಪಷ್ಟಗೊಂಡಿಲ್ಲ. ಇನ್ನೊಂದು ತಿಂಗಳು ಕೊರೊನಾ ಸ್ಥಿತಿಗತಿಗಳನ್ನು ಗಮನಿಸಿ ಆ ಬಳಿಕ ಟೂರ್ನಿಯ ತಾಣ ನಿರ್ಧರಿಸುತ್ತೇವೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications