ರಶೀದ್ ಖಾನ್‌ಗೆ ರಂಜಾನ್ ಉಪವಾಸದಲ್ಲಿ ಸಾಥ್ ನೀಡಿದ ವಿಲಿಯಮ್ಸನ್ ಮತ್ತು ವಾರ್ನರ್

ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಖ್ಯಾತಿಯನ್ನು ಪಡೆದಿರುವ ಐಪಿಎಲ್‌ನಲ್ಲಿ ಕ್ರಿಕೆಟ್‌ನ ಜೊತೆಗೆ ವಿಭಿನ್ನ ದೇಶಗಳ ವಿಭಿನ್ನ ಸಂಸ್ಕೃತಿಗಳು ಆಟಗಾರರ ಮಧ್ಯೆ ಮತ್ತಷ್ಟು ಹತ್ತಿರವಾಗುತ್ತವೆ. ಇದಕ್ಕೆ ಮತ್ತೊಂದು ಸಾಕ್ಷಿ ಈ ಬಾರಿಯ ಐಪಿಎಲ್‌ನಲ್ಲಿ ದೊರೆತಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ರಶೀದ್ ಖಾನ್‌ಗೆ ರಂಜಾನ್ ಉಪವಾಸದಲ್ಲಿ ನಾಯಕ ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸನ್ ಸಾಥ್ ನೀಡಿದ್ದಾರೆ.
ಐಪಿಎಲ್ ನಡೆಯುತ್ತಿರುವ ಈ ಸಂದರ್ಭದಲ್ಲಿಯೇ ರಂಜಾನ್ ಮಾಸವೂ ಇರುವ ಕಾರಣ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಆಟಗಾರ ರಶೀದ್ ಖಾನ್ ಉಪವಾಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಈ ಉಪವಾಸಕ್ಕೆ ಇಬ್ಬರು ದಿಗ್ಗಜರು ಸಾಥ್ ನೀಡಿದ್ದಾರೆ ಎಂಬುದನ್ನು ರಶೀದ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ರಶೀದ್ ಖಾನ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸನ್ ಜೊತೆಗೆ ಸಂವಾದ ನಡೆಸಿದ್ದಾರೆ. ಇಬ್ಬರು ಆಟಗಾರರಲ್ಲಿಯೂ ರಶೀದ್ ಖಾನ್ ಉಪವಾಸ ಹೇಗಾಯ್ತು ಎಂಬ ಅಭಿಪ್ರಾಯವನ್ನು ಕೇಳಿದ್ದಾರೆ. ಇದಕ್ಕೆ ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸನ್ ಪ್ರತಿಕ್ರಿಯಿಸಿದ್ದಾರೆ.
"ಉತ್ತಮವಾಗಿದೆ. ಆದರೆ ನನಗೆ ತುಂಬಾ ಹಸಿವಾಗಿದೆ. ನನ್ನ ಬಾಯಿ ಒಣಗಿ ಹೋಗಿದೆ" ಎಂದು ವಾರ್ನರ್ ಪ್ರತಿಕ್ರಿಯಿಸಿದರೆ ಕೇನ್ ವಿಲಿಯಮ್ಸನ್ ತುಂಬಾ ಚೆನ್ನಾಗಿದೆ, ಧನ್ಯವಾದಗಳು" ಎಂದು ಉತ್ತರವನ್ನು ನೀಡಿದ್ದಾರೆ. ಈ ವಿಡಿಯೋಗೆ ರಶೀದ್ ಖಾನ್ "ಇಬ್ಬರು ದಿಗ್ಗಜರು ನಮ್ಮೊಂದಿಗೆ ಉಪವಾಸದಲ್ಲಿ ತೊಡಗಿಸಿಕೊಂಡಿದ್ದಾರೆ" ಎಂದು ಬರಹವನ್ನು ನೀಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಇನ್ನೂ ಗೆಲುವಿನ ಹುಡುಕಾಟದಲ್ಲಿದೆ. ಈ ಆವೃತ್ತಿಯ ಆರಂಭಿಕ ಮೂರು ಪಂದ್ಯಗಳನ್ನು ಡೇವಿಡ್ ವಾರ್ನರ್ ಪಡೆ ಸೋತಿದ್ದು ಅಂಕಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications