Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: SRH ಕ್ಯಾಂಪ್ ಸೇರಿಕೊಳ್ಳಲು ಚೆನ್ನೈಗೆ ಬಂದಿಳಿದ ವಾರ್ನರ್, ವಿಲಿಯಮ್ಸನ್

IPL 2021: David Warner and Kane Williamson land in Chennai to join SRH camp

ಮುಂಬರುವ ಐಪಿಎಲ್‌ನಲ್ಲಿ ಭಾಗಿಯಾಗಲು ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸನ್ ಚೆನ್ನೈಗೆ ತಲುಪಿದ್ದಾರೆ. ಇವರ ಜೊತೆಗೆ ಫ್ರಾಂಚೈಸಿಯ ಸಹಾಯಕ ಕೋಚ್ ಆದ ಬ್ರಾಡ್ ಹ್ಯಾಡಿನ್ ಕೂಡ ಶುಕ್ರವಾರ ಚೆನ್ನೈಗೆ ಬಂದಿಳಿದಿದ್ದಾರೆ. ಈ ಮೂವರು ಆಗಮಿಸಿರುವ ಫೋಟೋವನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡ ಕಳೆದ ಆವೃತ್ತಿಯಲ್ಲಿ ಪ್ಲೇ ಆಫ್ ಹಂತಕ್ಕೆ ತಲುಪುವಲ್ಲಿ ಯಶಸ್ವಿಯಾಗಿತ್ತು. ಆದರೆ ಎರಡನೇ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶರಣಾಗುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ ತನ್ನ ಕಳೆದ ಆವೃತ್ತಿಯ ಹೋರಾಟವನ್ನು ಅಂತ್ಯಗೊಳಿಸಿತ್ತು.

ಈ ಬಾರಿಯ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ತನ್ನ ಮೊದಲ ಐದು ಪಂದ್ಯಗಳನ್ನು ಚೆನ್ನೈನಲ್ಲಿಯೇ ಆಡಲಿದೆ. ಏಪ್ರಿಲ್ 11 ರಂದು ಹೈದರಾಬಾದ್ ತಂಡದ ಮೊದಲ ಕಾದಾಟ ನಡೆಯಲಿದ್ದು ಅಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್‌ಗೆ ಎದುರಾಳಿಯಾಗಿರಲಿದೆ.

ಚೆನ್ನೈನಲ್ಲಿ ಐದು ಪಂದ್ಯಗಳನ್ನು ಆಡಿದ ಬಳಿಕ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಮುಂದಿನ ನಾಲ್ಕು ಪಂದ್ಯಗಳು ಡೆಲ್ಲಿಯಲ್ಲಿ ನಡೆಯಲಿದೆ. ನಂತರ ಮೂರು ಪಂದ್ಯಗಳು ಕೊಲ್ಕತ್ತಾದಲ್ಲಿ ನಡೆಯಲಿದೆ. ಎಸ್‌ಆರ್‌ಹೆಚ್ ತಂಡದ ಲೀಗ್ ಹಂತದ ಅಂತಿಮ ಎರಡು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ.

ಈ ವಾರದ ಆರಂಭದಲ್ಲಿ ಸನ್‌ರೈಸರ್ಸ್ ಪರವಾಗಿ ಕಣಕ್ಕಿಳಿಯಬೇಕಿದ್ದ ಆಸ್ಟ್ರೇಲಿಯಾದ ಶಾನ್ ಮಾರ್ಶ್ ತಾನು ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವುದಾಗಿ ತಿಳಿಸಿದ್ದರು. ಆ ಸ್ಥಾನಕ್ಕೆ ಎಸ್‌ಆರ್‌ಹೆಚ್ ತಂಡ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ ಜೇಸನ್ ರಾಯ್ ಅವರನ್ನು ಸೇರ್ಪಡೆಗೊಳಿಸಿದೆ.

Story first published: Friday, April 2, 2021, 15:48 [IST]
Other articles published on Apr 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+