Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ಗಾಗಿ ಕುಟುಂಬ ತೊರೆದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್

IPL 2021: David Warner Leaves For IPL, Wife Candice Warner Posts Pictures

ಸಿಡ್ನಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್‌ನ ನಾಯಕ ಡೇವಿಡ್ ವಾರ್ನರ್ ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕುಟುಂಬ ತೊರೆದು ಭಾರತಕ್ಕೆ ಹೊರಟಿದ್ದಾರೆ. ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಇದರ ಮುದ್ದಾದ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗುರುವಾರ (ಏಪ್ರಿಲ್ 1) ಕ್ಯಾಂಡಿಸ್ ವಾರ್ನರ್ ಒಂದು ಚಿತ್ರ ಹಂಚಿಕೊಂಡಿದ್ದಾರೆ. ಇದರಲ್ಲಿ ಮನೆಯಿಂದ ಭಾರತಕ್ಕೆ ಹೊರಡುತ್ತಿರುವ ಡೇವಿಡ್ ವಾರ್ನರ್ ಮತ್ತು ಅಪ್ಪ ವಾರ್ನರ್‌ ಅವರನ್ನು ತಬ್ಬಿಕೊಂಡಿರುವ ಇಬ್ಬರು ಪುತ್ರಿಯರ ಚಿತ್ರವಿದೆ.

'ಬೈ ಡ್ಯಾಡಿ, ವಿ ಲವ್ ಯೂ. ಸನ್ ರೈಸರ್ಸ್ ಹೈದರಾಬಾದ್ ರೆಡಿಯಾಗಿ. ಡೇವಿಡ್ ವಾರ್ನರ್ ಭಾರತಕ್ಕೆ ಬರುತ್ತಿದ್ದಾರೆ' ಎಂದು ಕ್ಯಾಂಡಿಸ್ ಅವರ ಟ್ವೀಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಇದಕ್ಕೆ ಸನ್ ರೈಸರ್ಸ್ ಹೈದರಾಬಾದ್ ಕೂಡ ಪ್ರತಿಕ್ರಿಯಿಸಿದೆ. 'ಸೀ ಯು ಸೂನ್ ಕ್ಯಾಪ್ಟನ್. ಅವರ ಬಗ್ಗೆ ನಾವು ಒಳ್ಳೆಯ ಕೇರ್ ತೆಗೆದುಕೊಳ್ಳುತ್ತೇವೆ ಕ್ಯಾಂಡಿಸ್' ಎಂದು ಎಸ್‌ಆರ್‌ಎಚ್ ಬರೆದುಕೊಂಡಿದೆ.

ಏಪ್ರಿಲ್ 9ರಿಂದ ಮೇ 30ರ ವರೆಗೆ 14ನೇ ಆವೃತ್ತಿಯ ಐಪಿಎಲ್ ನಡೆಯಲಿದೆ. ಏಪ್ರಿಲ್ 11ರಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ಪಂದ್ಯ ನಡೆಯಲಿದೆ. ಇದು ಹೈದರಾಬಾದ್ ಮತ್ತು ಕೋಲ್ಕತ್ತಾ ಎರಡಕ್ಕೂ ಟೂರ್ನಿಯ ಮೊದಲ ಪಂದ್ಯ.

Story first published: Thursday, April 1, 2021, 23:10 [IST]
Other articles published on Apr 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+