ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಸಂದೇಶ ಬರೆದ ಡೇವಿಡ್ ವಾರ್ನರ್

ಅಬುಧಾಬಿ: ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ಲೇಯಿಂಗ್ XIನಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಇಲ್ಲದಿರುವುದು ದ್ವಿತೀಯ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕಳೆದ ಎರಡು ಪಂದ್ಯಗಳಲ್ಲಿ ಡೇವಿಡ್ ಆಡಿಲ್ಲ. ಹೀಗಾಗಿ ವಾರ್ನರ್-ಎಸ್‌ಆರ್‌ಎಚ್ ಬಗೆಗಿನ ಚರ್ಚೆ ಇನ್ನೂ ಜೋರಾಗಿದೆ.
ಭಾರತದಲ್ಲಿ ಆರಂಭಗೊಂಡಿದ್ದ ಐಪಿಎಲ್ 14ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಚೆನ್ನಾಗಿ ಆಡಿರಲಿಲ್ಲ. ಹೀಗಾಗಿ ಆರಂಭಿಕ ಹಂತದಲ್ಲೂ ವಾರ್ನರ್ ಅವರನ್ನು ಕೆಲವು ಪಂದ್ಯದಿಂದ ಹೊರಗಿಡಲಾಗಿತ್ತು. ನಾಯಕತ್ವದಿಂದಲೂ ಕೆಳಗಿಳಿಸಲಾಗಿತ್ತು. ದ್ವಿತೀಯ ಹಂತದಲ್ಲೂ ವಾರ್ನರ್ ಕಳಪೆ ಫಾರ್ಮ್ ಮುಂದುವರೆದಿತ್ತು.
ಡೇವಿಡ್ ವಾರ್ನರ್‌ಗೆ ಹೈದರಾಬಾದ್ ಫ್ರಾಂಚೈಸಿಯಿಂದ ಅವಮಾನ?
ಇತ್ತ ಸನ್ ರೈಸರ್ಸ್ ಹೈದರಾಬಾದ್ ತಂಡ ಕೂಡ 2021ರ ಆವೃತ್ತಿಯಲ್ಲಿ ಕೆಟ್ಟ ಪ್ರದರ್ಶನ ನೀಡುತ್ತಿದೆ. ಆಡಿರುವ 11 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಗೆದ್ದಿರುವ ಎಸ್‌ಆರ್ಎಚ್ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಹೈದರಾಬಾದ್‌ನ ಪ್ಲೇಆಫ್ಸ್ ಕನಸೂ ಕೂಡ ಮಣ್ಣು ಪಾಲಾಗಿದೆ. ದ್ವಿತೀಯ ಹಂತದಲ್ಲಿ ಅವಕಾಶ ಸಿಕ್ಕ ಕೆಲವು ಪಂದ್ಯಗಳಲ್ಲಿ ವಾರ್ನರ್ ಮತ್ತೆ ಕಳಪೆ ಪ್ರದರ್ಶನ ನೀಡಿದ್ದರಿಂದ ಅವರನ್ನು ಹಿಂದಿನ ಪಂದ್ಯಗಳಲ್ಲಿ ತಂಡದಿಂದ ಹೊರಗಿಡಲಾಗಿತ್ತು. ಇದರಿಂದ ಬೇಸರಗೊಂಡ ವಾರ್ನರ್, ಮುಂದಿನ ಪಂದ್ಯಗಳಲ್ಲಿ ನಾನು ಆಡುತ್ತಿಲ್ಲ ಎಂಬಂತೆ ಹೇಳಿಕೆ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಎಚ್‌ಆರ್‌ಎಚ್, ವಾರ್ನರ್ ಅವರನ್ನು ಕೇವಲವಾಗಿ ಕಾಣುತ್ತಿದೆ ಎನ್ನಲಾಗುತ್ತಿದೆ. ಹಿಂದಿನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸ್ಟೇಡಿಯಂಗೆ ತಂಡದ ಜೊತೆಯಾಗಿ ಬರಲೂ ವಾರ್ನರ್‌ಗೆ ಎಸ್‌ಆರ್‌ಎಚ್ ಅವಕಾಶ ನೀಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯದ ಬೆಳವಣಿಗೆಯ ಪ್ರಕಾರ, ವಾರ್ನರ ಇನ್ಮುಂದೆ ಹೈದರಾಬಾದ್ ಫ್ರಾಂಚೈಸಿ ಪರ ಆಡೋದು ದೂರದ ಮಾತು.
ಮಾರ್ಮಿಕವಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಕಿದ ವಾರ್ನರ್
ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಹೊರಗೆ ಬಿದ್ದ ಬೆನ್ನಲ್ಲೇ ಡೇವಿಡ್ ವಾರ್ನರ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಸೆಪ್ಟೆಂಬರ್ 30ರ ಗುರುವಾರ ವಾರ್ನರ್, ಈ ಇನ್‌ಸ್ಟಾಗ್ರಾಮ್ ಸ್ಟೋರಿ ಹಾಕಿಕೊಂಡಿದ್ದರು. ಈ ಪೋಸ್ಟ್‌ನಲ್ಲಿ, "ನಿಮ್ಮ ಮುಖದೆದುರು ನಿಜಕ್ಕೂ ಯಾರಿದ್ದಾರೆ ಅನ್ನೋದು ಮುಖ್ಯವಲ್ಲ, ನಿಮ್ಮ ಬೆನ್ನ ಹಿಂದೆ ನಿಜವಾಗಿಯೂ ಯಾರಿದ್ದಾರೆ ಅನ್ನೋದು ಮುಖ್ಯ," ಎಂದು ಬರೆಯಲಾಗಿತ್ತು. ಪೋಸ್ಟ್‌ನಲ್ಲಿ ಥಂಪ್ಸ್ ಉಪ್ ಇಮೋಜಿ ಕೂಡ ಹಾಕಿಕೊಳ್ಳಲಾಗಿತ್ತು. ಈ ಸ್ಟೋರಿ ಮಾರ್ಮಿಕವಾಗಿದೆ. ಅಂದರೆ ಫಾರ್ಮ್ ಇದ್ದಾಗ ನಿಮ್ಮ ಜೊತೆ ಯಾರಿದ್ದರು ಅನ್ನೋದಕ್ಕಿಂತ ಫಾರ್ಮ್ ಇಲ್ಲದಾಗ ನಿಮ್ಮ ಬೆಂಬಲಕ್ಕೆ ಯಾರಿದ್ದಾರೆ ಅನ್ನೋದು ಮುಖ್ಯ ಎನ್ನುವುದು ಇರಬಹುದು. ಇದಕ್ಕೂ ಮುನ್ನ ಕೂಡ ಅಭಿಮಾನಿಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ವಾರ್ನರ್, "ದುರದೃಷ್ಟಕರವಾಗಿ ನಾನಿನ್ನು ಎಸ್‌ಆರ್‌ಎಚ್ ತಂಡದಲ್ಲಿ ಆಡುತ್ತಿಲ್ಲ, ಆದರೆ ತಂಡವನ್ನು ದಯವಿಟ್ಟು ಬೆಂಬಲಿಸಿ,' ಎಂದು ಬರೆದುಕೊಂಡಿದ್ದರು.
ಎಸ್‌ಆರ್‌ಎಚ್ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದ ಬ್ಯಾಟ್ಸ್‌ಮನ್
ಕ್ರಿಕೆಟ್ ಆಗಲಿ ಅಥವಾ ಬೇರೆ ಕ್ರೀಡೆಯೇ ಆಗಿರಲಿ, ಅಥ್ಲೀಟ್ ಒಬ್ಬನ ಪ್ರದರ್ಶನದಲ್ಲಿ ಏರಿಳಿತಗಳು ಸಹಜ. ಕ್ರಿಕೆಟ್‌ನಲ್ಲಿ ಆಟಗಾರರ ಫಾರ್ಮ್ ಕಳೆಗುಂದೋದು ಇದ್ದಿದ್ದೇ. ಆದರೆ ಫಾರ್ಮ್ ಕಳೆದುಕೊಂಡಿದ್ದಾಗ ಆಟಗಾರರನ್ನು ಅವಮಾನಿಸದೆ ಅವರಲ್ಲಿ ಧೈರ್ಯ ತುಂಬಬೇಕು, ಇನ್ನಷ್ಟು ಅವಕಾಶ ನೀಡಬೇಕು, ಆಟಗಾರನ ಮೇಲೆ ನಂಬಿಕೆ ಇಡಬೇಕು. ಆಗ ಮಾತ್ರ ಪ್ರತಿಭಾನ್ವಿತ ಆಟಗಾರನನ್ನು ಮತ್ತೆ ಮಿನುಗುವಂತೆ ಮಾಡಲು ಸಾಧ್ಯವಾಗುತ್ತದೆ. ಡೇವಿಡ್ ವಾರ್ನರ್ ಈ ಸೀಸನ್‌ನಲ್ಲಿ ಮಾತ್ರ ಕೊಂಚ ಫಾರ್ಮ್ ಕಳೆದುಕೊಂಡಿದ್ದಾರೆ. ಗಾಯದ ಸಮಸ್ಯೆ, ಕೋವಿಡ್ ಕಾರಣ ಸರಿಯಾದ ಅಭ್ಯಾಸ ಇಲ್ಲದಿರುವುದು, ಮಾನಸಿಕ ಸ್ಥಿತಿಗತಿ ಇವೆಲ್ಲ ಕಳಪೆ ಫಾರ್ಮ್‌ಗೆ ಕಾರಣವಿರಬಹುದು. ಆದರೆ ವಾರ್ನರ್ ಆಸೀಸ್ ಟಿ20 ತಂಡದಲ್ಲಿದ್ದಾರೆಂದರೆ ಆಸ್ಟ್ರೇಲಿಯಾಕ್ಕೆ ವಾರ್ನರ್ ಮೇಲಿರುವ ನಂಬಿಕೆ ಸೂಚಿಸುತ್ತದೆ. ಅಂದ್ಹಾಗೆ, ವಾರ್ನರ್ ಎಚ್‌ಆರ್‌ಎಚ್ ಪರ 2014ರಲ್ಲಿ 528 ರನ್, 2015ರಲ್ಲಿ 562 ರನ್, 2016ರಲ್ಲಿ 848 ರನ್, 2017ರಲ್ಲಿ 641 ರನ್, 2019ರಲ್ಲಿ 692 ರನ್, 2020ರಲ್ಲಿ 548 ರನ್ ಗಳಿಸಿದ್ದರು ಅನ್ನೋದು ಇಲ್ಲಿ ಉಲ್ಲೇಖನೀಯ.

- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+

Click it and Unblock the Notifications