ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಡೆಲ್ಲಿ ವೇಗಿ ಅನ್ರಿಕ್ ನಾರ್ಕಿಯಾಗೆ ಕೊರೊನಾ ವೈರಸ್: ವರದಿ

IPL 2021: DC Pacer Anrich Nortje tested positive for Covid-19

ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಅನ್ರಿಕ್ ನಾರ್ಕಿಯಾಗೆ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ವರದಿಯಾಗಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಲ್ಲಿ ಮತ್ತೊಮ್ಮೆ ಆತಂಕದ ಛಾಯೆ ಮೂಡಿದೆ. ಎಎನ್‌ಐ ಸುದ್ಧಿಸಂಸ್ಥೆ ಮೂಲಗಳ ಮಾಹಿತಿಯನ್ನು ಆಧರಿಸಿ ಈ ಬಗ್ಗೆ ವರದಿಯನ್ನು ಮಾಡಿದೆ.

"ಅವರು ನೆಗೆಟಿವ್ ವರದಿಯೊಂದಿಗೆ ಆಗಮಿಸಿದ್ದರು. ಆದರೆ ದುರಾದೃಷ್ಟವಶಾತ್ ಕ್ವಾರಂಟೈನ್ ಅವಧಿಯಲ್ಲಿ ಕೊರೊನಾ ವೈರಸ್‌ ತುತ್ತಾಗಿರುವುದು ಖಚಿತವಾಗಿದೆ" ಎಂದು ಮೂಲಗಳ ಹೇಳಿಕೆಯನ್ನು ಎಎನ್‌ಐ ಸುದ್ದಿ ಸಂಸ್ಥೆ ಪ್ರಕಟಿಸಿದೆ. ಅನ್ರಿಕ್ ನಾರ್ಕಿಯಾ ತಡವಾಗಿ ಭಾರತಕ್ಕೆ ಆಗಮಿಸಿದ್ದರು.

ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೊರೊನಾ ವೈರಸ್ ಪ್ರಕರಣಗಳು ಸಾಕಷ್ಟು ಆತಂಕವನ್ನು ಮೂಡಿಸಿತ್ತು. ಆಟಗಾರರು ಹಾಗೂ ಸಿಬ್ಬಂದಿಗಳಿಗೆ ವೈರಸ್ ದೃಢಪಟ್ಟಿದ್ದು ಚಿಂತೆಗೀಡು ಮಾಡಿತ್ತು. ಆದರೆ ಟೂರ್ನಿ ಆರಂಭವಾದ ಬಳಿಕ ಯಾವುದೇ ಪ್ರಕರಣಗಳು ವರದಿಯಾಗಲಲಿಲ್ಲ.

ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದ ಅನ್ರಿಕ್ ನಾರ್ಕಿಯಾ ತಡವಾಗಿ ಭಾರತಕ್ಕೆ ಆಗಮಿಸಿದ್ದರು. ದಕ್ಷಿಣ ಆಫ್ರಿಕಾ ಹಾಗೂ ಡೆಲ್ಲಿ ಕ್ಯಾಪಟಿಲ್ಸ್ ತಂಡದ ಸಹ ಆಟಗಾರ ಕಗಿಸೋ ರಬಡಾ ಅವರೊಂದಿಗೆ ಅನ್ರಿಕ್ ನಾರ್ಕಿಯಾ ಜೊತೆಯಾಗಿ ಭಾರತಕ್ಕೆ ಆಗಮಿಸಿದ್ದರು. ಆದರೆ ಭಾರತಕ್ಕೆ ಬಂದ ಬಳಿಕ ಒಂದು ವಾರಗಳ ಕಡ್ಡಾಯ ಕ್ವಾರಂಟೈನ್‌ನಲ್ಲಿದ್ದರು ಡೆಲ್ಲಿ ವೇಗಿ. ಆದರೆ ಈ ಸಂದರ್ಭದಲ್ಲಿ ನಡೆಸಿದ ಪರೀಕ್ಷೆಯಲ್ಲಿ ನಾರ್ಕಿಯಾಗೆ ಕೊರೊನಾ ವೈರಸ್ ತಗುಲಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

Story first published: Wednesday, April 14, 2021, 15:11 [IST]
Other articles published on Apr 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X