Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭ್ಯಾಸ ರದ್ದುಗೊಳಿಸಿ ಐಸೊಲೇಶನ್ ಪಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ

IPL 2021: DC Team Cancels Training Sessions and Players Self Isolating After The Match Against KKR

ನವದೆಹಲಿ: ಕೋಲ್ಕತ್ತಾ ನೈಟ್ ರೈಡರ್ಸ್‌ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್‌ ವಾರಿಯರ್‌ಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಕೂಡ ಸೆಲ್ಫ್ ಐಸೊಲೇಶನ್ ಮೊರೆ ಹೋಗಿದ್ದಾರೆ. ಹೀಗಾಗಿ ಡೆಲ್ಲಿ ತಂಡದ ಅಭ್ಯಾಸ ಕೂಡ ನಿಲುಗಡೆಯಾಗಿದೆ.

ಏಪ್ರಿಲ್ 29ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಡೆಲ್ಲಿ 7 ವಿಕೆಟ್‌ಗಳ ಸುಲಭ ಜಯ ಗಳಿಸಿತ್ತು. ಅದಾಗಿ ಮೇ 3ರಂದು ಕೋಲ್ಕತ್ತಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಪಂದ್ಯವಿತ್ತು. ಈ ಪಂದ್ಯಕ್ಕೂ ಮುನ್ನ ಕೆಕೆಆರ್‌ ಆಟಗಾರರು ಕೊರೊನಾ ಸೋಂಕಿಗೀಡಾಗಿರುವುದು ಪತ್ತೆಯಾಗಿದ್ದರಿಂದ ಮಂಗಳವಾರದ ಪಂದ್ಯ ಮುಂದೂಡಲ್ಪಟ್ಟಿತ್ತು.

ಕೆಕೆಆರ್‌ನ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಹೊರತುಪಡಿಸಿ ಇನ್ನು ಯಾರಿಗೂ ಕೊರೊನಾ ಇರುವುದು ಕಂಡುಬಂದಿಲ್ಲ. ಡೆಲ್ಲಿ ತಂಡದಲ್ಲೂ ಯಾರಿಗೂ ಸೋಂಕಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಎರಡೂ ತಂಡಗಳು ಕ್ವಾರಂಟೈನ್ ಪಾಲಿಸುತ್ತಿವೆ.

'ಮೇ 3ರ ಮಧ್ಯಾಹ್ನದಿ೦ದ ನಾವು ನಮ್ಮ ರೂಮ್‌ಗಳಲ್ಲಿ ಸೆಲ್ಫ್ ಐಸೊಲೇಶನ್ ಪಾಲಿಸುತ್ತಿದ್ದೇವೆ,' ಎಂದು ಡೆಲ್ಲಿ ಕ್ಯಾಂಪ್‌ ಮಾಹಿತಿ ನೀಡಿದೆ. ಇನ್ನು ಮೇ 8ರಂದು ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತೆ ಮುಖಾಮುಖಿಯಾಗಲಿವೆ.

Story first published: Tuesday, May 4, 2021, 10:14 [IST]
Other articles published on May 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+