ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಡೆಲ್ಲಿ vs ಮುಂಬೈ ಮುಖಾಮುಖಿಯ ಕುತೂಹಲಕಾರಿ ಅಂಕಿ-ಅಂಶಗಳು

IPL 2021: DC v MI - Head-to-head record, highest run-getters, top wicket-takers

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 13ನೇ ಪಂದ್ಯದಲ್ಲಿ ಹಿಂದಿನ ಸೀಸನ್‌ನ ರನ್ನರ್ಸ್ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ವಿನ್ನರ್ಸ್ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಡಲಿವೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ 7.30 PMಗೆ ಆರಂಭವಾಗಲಿದೆ.

ಐಪಿಎಲ್‌ನಲ್ಲಿ 2019ರ ವಿಶ್ವಕಪ್‌ ಘಟನೆ ನೆನಪಿಸಿದ ಎಂಎಸ್ ಧೋನಿಐಪಿಎಲ್‌ನಲ್ಲಿ 2019ರ ವಿಶ್ವಕಪ್‌ ಘಟನೆ ನೆನಪಿಸಿದ ಎಂಎಸ್ ಧೋನಿ

ಎರಡೂ ತಂಡಗಳು ಈ ಸೀಸನ್‌ನಲ್ಲಿ ಈಗಾಗಲೇ 3 ಪಂದ್ಯಗಳನ್ನಾಡಿದ್ದು ಇದರಲ್ಲಿ ಎರಡು ಜಯಗಳನ್ನು ಗಳಿವೆ. ಐಪಿಎಲ್ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (+0.453 ನೆಟ್ ರನ್‌ರೇಟ್) 3ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ (+0.367) 4ನೇ ಸ್ಥಾನದಲ್ಲಿದೆ. ನೆಟ್ ರನ್‌ರೇಟ್‌ ಆಧಾರದಲ್ಲಿ ಡೆಲ್ಲಿ ತಂಡ ಮುಂಬೈಗಿಂತ ಉತ್ತಮ ಸ್ಥಾನದಲ್ಲಿದೆ.

ಐಪಿಎಲ್‌ನಲ್ಲಿ ಡೆಲ್ಲಿ ಮತ್ತು ಮುಂಬೈ ಒಟ್ಟಿಗೆ 28 ಸಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 16 ಬಾರಿ ಗೆದ್ದಿದ್ದರೆ, ಡೆಲ್ಲಿ 12 ಸಾರಿ ಗೆಲುವು ದಾಖಲಿಸಿದೆ. ಈ ಲೆಕ್ಕಾಚಾರದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಕೊಂಚ ಬಲಿಷ್ಠ ತಂಡವಾಗಿ ಕಾಣಿಸಿದೆ.

ಈ ಐಪಿಎಲ್‌ನ 'ಮ್ಯಾನ್ ಆಫ್‌ ದ ಟೂರ್ನಿ' ಹೆಸರಿಸಿದ ಮೈಕಲ್ ವಾನ್ಈ ಐಪಿಎಲ್‌ನ 'ಮ್ಯಾನ್ ಆಫ್‌ ದ ಟೂರ್ನಿ' ಹೆಸರಿಸಿದ ಮೈಕಲ್ ವಾನ್

ಹಿಂದಿನ ಸಾರಿ ಮುಖಾಮುಖಿ
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕಡೇಯಸಾರಿ ಮುಖಾಮುಖಿಯಾಗಿದ್ದು 2020ರ ಐಪಿಎಲ್ ಫೈನಲ್‌ನಲ್ಲಿ. ಆವತ್ತು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ 20 ಓವರ್‌ಗೆ 7 ವಿಕೆಟ್ ಕಳೆದು 156 ರನ್ ಬಾರಿಸಿದ್ದರೆ, ಮುಂಬೈ 18.4 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 157 ರನ್ ಬಾರಿಸಿ 5 ವಿಕೆಟ್‌ಗಳ ಗೆಲುವು ಆಚರಿಸಿತ್ತು.

Story first published: Tuesday, April 20, 2021, 13:32 [IST]
Other articles published on Apr 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X