Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಹೈದರಾಬಾದ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಡೆಲ್ಲಿ

IPL 2021, DC vs SRH, match 33, Delhi won by 8 wickets against Hyderabad

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಂತ್ ಹುಡುಗರ ಗೆಲುವಿನ ಓಟ ಮುಂದುವರಿದಿದೆ. ಮತ್ತೊಂದೆಡೆ ಸೋಲಿನ ಮೇಲೆ ಸೋಲು ಕಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇಆಫ್ ಹಂತಕ್ಕೇರುವ ಅವಕಾಶವನ್ನು ಬಹುತೇಕ ಮುಚ್ಚಿಕೊಂಡಿದೆ.

ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ನೀರಸ ಆರಂಭ ಕಂಡ ಹೈದರಾಬಾದ್‌ಗೆ ಯಾವ ಬ್ಯಾಟ್ಸ್‌ಮನ್‌ನಿಂದ ಕೂಡ ಉತ್ತಮ ಕೊಡುಗೆ ಲಭ್ಯವಾಗಲಿಲ್ಲ. ಅಂತಿಮವಾಗಿ 9 ವಿಕೆಟ್ ಕಳೆದುಕೊಂಡು 134 ರನ್‌ಗಳಿಸಲು ಶಕ್ತವಾಯಿತು. ಅಬ್ದುಲ್ ಸಮದ್ ಹಾಗೂ ರಶೀದ್ ಖಾನ್ ಕೊನೆಯ ಹಂತದಲಲ್ಇ ನಿಡಿದ ಪ್ರದರ್ಶನದಿಂದಾಗಿ ಹೈದರಾಬಾದ್ ಈ ಮೊತ್ತವನ್ನು ಎದುರಾಳಿಗೆ ಗುರಿಯಾಗಿ ನೀಡಲು ಶಕ್ತವಾಯಿತು.

ಮಿಂಚಿದ ಡೆಲ್ಲಿ ಬೌಲರ್‌ಗಳು

ಮಿಂಚಿದ ಡೆಲ್ಲಿ ಬೌಲರ್‌ಗಳು

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಬೌಲಿಂಗ್‌ನಲ್ಲಿ ಕಗಿಸೋ ರಬಡಾ ಹಾಗೂ ಅನ್ರಿಕ್ ನಾರ್ಕಿಯಾ ಮಿಂಚಿದರು. ರಬಡಾ 3 ವಿಕೆಟ್ ಪಡೆದು ಮಿಂಚಿದರೆ ನಾರ್ಕಿಯಾ 4 ಓವರ್‌ಗಳಲ್ಲಿ ಕೇವಲ 12 ರನ್‌ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಅಕ್ಷರ್ ಪಟೇಲ್ ಕೂಡ 2 ವಿಕೆಟ್ ಕಬಳಿಸಿದ್ದಾರೆ. ಇನ್ನು ಡೆಲ್ಲಿ ಬೌಲಿಂಗ್ ವೇಳೆ ವೇಗಿ ಮಾರ್ಕಸ್ ಸ್ಟೋಯ್ನಿಸ್ ಸ್ನಾಯುಸೆಳೆತಕ್ಕೆ ಒಳಗಾಗಿ ಮೈದಾನದಿಂದ ಹೊರನಡೆದಿರುವುದು ಡೆಲ್ಲಿ ತಂಡಕ್ಕೆ ಗಾಯದ ಆತಂಕ ಮೂಡಿಸಿದೆ.

ಡೆಲ್ಲಿಗೆ ಸುಲಭ ಸವಾಲು

ಡೆಲ್ಲಿಗೆ ಸುಲಭ ಸವಾಲು

ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ನೀಡಿದ 135 ರನ್‌ಗಳ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸುಲಭವಾಗಿ ಬೆನ್ನಟ್ಟಿದೆ. ತಂಡದ ಮೊತ್ತ 20 ರನ್‌ಗಳಾಗುವಷ್ಟರಲ್ಲಿ ಆರಂಭೀಕ ಆಟಗಾರ ಪೃಥ್ವಿ ಶಾ ಔಟಾಗಿ ಫೆವಿಲಿಯನ್ ಸೇರಿದ್ದರು. ಆದರೆ ನಂತರ ಡೆಲ್ಲಿ ಬ್ಯಾಟ್ಸ್‌ಮನ್‌ಗಳ ವಿರುದ್ಧ ಮೇಲುಗೈ ಸಾಧಿಸಲು ಹೈದರಾಬಾದ್ ತಂಡ ಸಂಪೂರ್ಣ ವಿಫಲವಾಯಿತು. ಡೆಲ್ಲಿ ತಂಡದ ಸ್ಕೋರ್ 72 ರನ್‌ಗಳಾಗುವಷ್ಟರಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ರಶೀದ್ ಖಾನ್‌ಗೆ ವಿಕೆಟ್ ಒಪ್ಪಿಸಿದ್ದರು. ಬಳಿಕ ಜೊತೆಯಾದ ಶ್ರೇಯಸ್ ಐಯ್ಯರ್ ಹಾಗೂ ರಿಷಭ್ ಪಂತ್ ಜೋಡಿ ತಂಡಕ್ಕೆ ಯಾವುದೇ ಹಿನ್ನಡೆಯಾಗದಂತೆ ನೋಡಿಕೊಂಡರು.

T Natarajanಗೆ ಕೋವಿಡ್ ಸೋಂಕು , ಆದರೂ ಆಟ ನಿಲ್ಲೋದಿಲ್ಲ | Oneindia Kannada
13 ಎಸೆತಗಳಿರುವಂತೆಯೇ ಗೆಲುವು

13 ಎಸೆತಗಳಿರುವಂತೆಯೇ ಗೆಲುವು

ಈ ಜೋಡಿ ಇನ್ನು 13 ಎಸೆತಗಳು ಬಾಕಿಯಿರುವಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸುವಂತೆ ಮಾಡಿತ್ತು. 41 ಎಸೆತ ಎದುರಿಸಿದ ಶ್ರೇಯಸ್ ಐಯ್ಯರ್ 47 ರನ್‌ ಗಳಿಸಿದರೆ 21 ಎಸೆತಗಳಲ್ಲಿ ಪಂತ್ 35 ರನ್‌ ಸಿಡಿಸಿದ್ದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 17.5 ಓವರ್‌ಗಳಲ್ಲಿ ಗುರಿಯನ್ನು ಯಶಸ್ವಿಯಾಗಿ ತಲುಪಿದೆ.

ಈ ಪ್ರದರ್ಶನದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. 9 ಪಂದ್ಯಗಳನ್ನು ಆಡಿರುವ ಡೆಲ್ಲಿ ಕ್ಯಾಪಿಟಲ್ಸ್ 7 ಗೆಲುವಿನೊಂದಿಗೆ 14 ಅಂಕಗಳನ್ನು ಗಳಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ 12 ಹಾಗೂ ಆರ್‌ಸಿಬಿ 10 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಟಾಪ್ 4ರಲ್ಲಿರುವ ಮತ್ತೊಂದು ತಂಡವಾಗಿದೆ.

Story first published: Thursday, September 23, 2021, 9:49 [IST]
Other articles published on Sep 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+