For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಆಟಗಾರರ ಉಳಿಸಿಕೊಳ್ಳಲು ಜನವರಿ 21 ಕಡೇ ದಿನ

IPL 2021: Deadline for player retention is January 21, trading window closes Feb 4

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ ಫ್ರಾಂಚೈಸಿಗಳು ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳುವುದಕ್ಕಾಗಿ ಅರ್ಜಿ ಸಲ್ಲಿಕೆಗೆ ಕಡೇ ದಿನಾಂಕವನ್ನು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ನಿಗದಿಪಡಿಸಿದೆ. ಜನವರಿ 21 ಆಟಗಾರರ ಉಳಿಸಿಕೊಳ್ಳಲು ಕೊನೇ ದಿನವೆಂದು ಐಪಿಎಲ್ ಹೇಳಿದೆ.

2021ರ ಐಪಿಎಲ್‌ಗೆ ಸಂಬಂಧಿಸಿ ಐಪಿಎಲ್ ಗವರ್ನಿಂಗ್ ಕೌನ್ಸಿಲ್‌ನ ಅಧ್ಯಕ್ಷ ಬ್ರಿಜೇಶ್ ಪಟೇಲ್ ಮತ್ತು ಸದಸ್ಯರು ಈ ವಾರದ ಆರಂಭದಲ್ಲಿ ಒಂದು ಸಭೆ ನಡೆಸಿ ಚರ್ಚಿಸಿದ್ದಾರೆ. ಮುಂಬರುವ ಸೀಸನ್‌ಗೆ ತಯಾರಿಗೆ ಸಂಬಂಧಿಸಿ ಸಭೆಯಲ್ಲಿ ದೀರ್ಘ ಚರ್ಚೆ ನಡೆದಿತ್ತು ಎನ್ನಲಾಗಿದೆ.

'ಜನವರಿ 21ರ ವರಗೂ ನಾವು ಆಟಗಾರರನ್ನು ನಮ್ಮಲ್ಲೇ ಉಳಿಸಿಕೊಳ್ಳಲು ಅವಕಾಶವಿದೆ. ಆಟಗಾರರನ್ನು ಬದಲಾಯಿಸಿಕೊಳ್ಳಲು ಅಥವಾ ವ್ಯಾಪಾರ ನಡೆಸಲು ಫೆಬ್ರವರಿ 4 ಕಡೇಯ ದಿನಾಂಕವಾಗಿರಲಿದೆ,' ಎಂದು ಭಾರತದ ಮಾಜಿ ಟೆಸ್ಟ್‌ ಬ್ಯಾಟ್ಸ್‌ಮನ್‌ ಕೂಡ ಆಗಿರುವ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

ಫೆಬ್ರವರಿ ಎರಡು ಮತ್ತು ಮೂರನೇ ವಾರ 2021ರ ಐಪಿಎಲ್‌ಗಾಗಿ ಎಂಟು ಫ್ರಾಂಚೈಸಿಗಳನ್ನೊಳಗೊಂಡ ಮಿನಿ ಹರಾಜು ನಡೆಯುವುದನ್ನು ನಿರೀಕ್ಷಿಸಲಾಗಿದೆ. ಐಪಿಎಲ್ ಟೂರ್ನಿ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯುವ ಸಾಧ್ಯತೆಯಿದೆ.

Story first published: Thursday, January 7, 2021, 22:33 [IST]
Other articles published on Jan 7, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+