ಕೆಎಲ್ ರಾಹುಲ್ ಜೊತೆಗೆ ಬ್ಯಾಟಿಂಗ್ ಮಜವಾಗಿರುತ್ತದೆ: ಹೂಡಾ

ನವದೆಹಲಿ: ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಜೊತೆ ಬ್ಯಾಟಿಂಗ್ ಮಾಡಲು ಮಜವಾಗಿರುತ್ತದೆ ಎಂದು ಪಂಜಾಬ್ ಸಹ ಆಟಗಾರ ದೀಪಕ್ ಹೂಡಾ ಹೇಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ನೆನಪಿಸಿಕೊಂಡಿರುವ ಹೂಡಾ ಈ ಮಾತನ್ನಾಡಿದ್ದಾರೆ.
ಏಪ್ರಿಲ್ 12ರಂದು ಮುಂಬೈಯಲ್ಲಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಪಂಜಾಬ್ ರೋಚಕ 4 ರನ್‌ನಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ದೀಪಕ್ ಹೂಡಾ ಅವರೇ ತಂಡಕ್ಕೆ ಗಮನಾರ್ಹ ರನ್ ಕೊಡುಗೆ ನೀಡಿದ್ದರು.
ಆರಂಭಿಕರಾಗಿ ಬಂದಿದ್ದ ಕೆಎಲ್ ರಾಹುಲ್ 50 ಎಸೆತಗಳಲ್ಲಿ 91 ರನ್ ಕೊಡುಗೆ ನೀಡಿದ್ದರೆ ದೀಪಕ್ ಹೂಡಾ 28 ಎಸೆತಗಳಲ್ಲಿ 64 ರನ್ ಗಳಿಸಿದ್ದರು. ಕ್ರಿಸ್ ಗೇಲ್ ಕೂಡ 28 ಎಸೆತಗಳಲ್ಲಿ 40 ರನ್ ಸೇರಿಸಿದ್ದರಿಂದ ಪಂಜಾಬ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 221 ರನ್ ಬಾರಿಸಿತ್ತು.
ರಾಹುಲ್ ಜೊತೆಗಿನ ಬ್ಯಾಟಿಂಗ್ ಅನುಭವವನ್ನು ಹೂಡಾ ಹೇಳಿಕೊಂಡಿದ್ದಾರೆ. 'ನಾಯಕನಾಗಿ ಮತ್ತು ಹಿರಿಯ ಆಟಗಾರನಾಗಿ ರಾಹುಲ್ ಯಾವಾಗಲೂ ಬೆಂಬಲವಾಗಿರುತ್ತಾರೆ. ಅವರು ನನ್ನನ್ನು ಬೆಂಬಲಿಸುತ್ತಾರೆ, ಪ್ರೋತ್ಸಾಹಿಸುತ್ತಾರೆ. ನನಗೆ ರಾಹುಲ್ ಬ್ಯಾಟಿಂಗ್ ಶೈಲಿ ತುಂಬಾ ಇಷ್ಟ. ಪಂದ್ಯದಲ್ಲಿ ಅವರು ಮುಂದುವರೆಯುವ ರೀತಿ, ವಿಧಾನಗಳು ಇಷ್ಟ. ಇದು ಮೊದಲ ಬಾರಿಗೆ ನಾನು ರಾಹುಲ್ ಜೊತೆ ಬ್ಯಾಟಿಂಗ್ ಮಾಡಿದ್ದೆ. ಅವರೊಂದಿಗೆ ಬ್ಯಾಟಿಂಗ್ ಮಜವಾಗಿರುತ್ತದೆ,' ಎಂದು ಹೂಡಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications