ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ನ ಪ್ಲಸ್-ಮೈನಸ್ ಪಾಯಿಂಟ್ಸ್

ಮುಂಬೈ: 6ನೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿಯತ್ತ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ (ಎಂಐ) 14ನೇ ಆವೃತ್ತಿಗೆ ಸಿದ್ಧವಾಗಿದೆ. ಏಪ್ರಿಲ್ 9ರಂದು ಉದ್ಘಾಟನಾ ಪಂದ್ಯದಲ್ಲೇ ಎಂಐ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಾಡಲಿವೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ 7.30 pmಗೆ ಆರಂಭಗೊಳ್ಳಲಿದೆ. ಆರಂಭಿಕ ಪಂದ್ಯದಲ್ಲಿ ಮುಂಬೈ ಗೆಲ್ಲುವ ನಿರೀಕ್ಷೆ ಹೆಚ್ಚಿದೆ.
ಐಪಿಎಲ್ ಆರಂಭಿಕ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿದೆ ಎಂದರೆ ಪಂದ್ಯ ಖಂಡಿತಾ ರೋಚಕವೆನಿಸಲಿದೆ. ಯಾಕೆಂದರೆ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಕೂಡ ಈ ಬಾರಿ ಬಲಿಷ್ಠವಾಗಿದೆ.
ಹಾಗಾದರೆ ಆರ್‌ಸಿಬಿ ಎದುರಾಳಿ ಮುಂಬೈ ಇಂಡಿಯನ್ಸ್‌ನ ಪ್ಲಸ್-ಮೈನಸ್ ಪಾಯಿಂಟ್ಸ್‌ನತ್ತ ಒಂದು ಇಣುಕು ನೋಟ ಹಾಕೋಣ.

ಎಂಐ ಪ್ಲಸ್ ಪಾಯಿಂಟ್ಸ್
ಮುಂಬೈಯಲ್ಲಿ ಪಂದ್ಯದ ಯಾವುದೇ ಸಂದರ್ಭದಲ್ಲಾದರೂ ಯಾವ ಆಟಗಾರನಾದರೂ ಫಲಿತಾಂಶವನ್ನು ತಮ್ಮತ್ತ ತಿರುಗಿಸಿಕೊಳ್ಳಬಲ್ಲ ಸಾಮರ್ಥ್ಯವಿದೆ. ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ ಕೋಚಿಂಗ್ ಅಡಿಯಲ್ಲಿರುವ ಎಂಐನಲ್ಲಿ ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್, ಕ್ವಿಂಟನ್ ಡಿ ಕಾಕ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಜಸ್‌ಪ್ರೀತ್ ಬೂಮ್ರಾ, ಕ್ರಿಸ್ ಲಿನ್, ಇಶಾನ್ ಕಿಶನ್, ಟ್ರೆಂಟ್ ಬೌಲ್ಟ್, ನೇಥನ್ ಕೌಲ್ಟರ್ ನೈಲ್ ಇಂಥ ಹಲವಾರು ಪ್ರಮುಖ ಆಟಗಾರರಿದ್ದಾರೆ.

ಮೈನಸ್ ಅಂಶಗಳು
ಮುಂಬೈಯ ಒಂದು ಪ್ರಮುಖ ಮೈನಸ್ ಪಾಯಿಂಟ್ ಅಂದರೆ ಅದು ಸ್ಪಿನ್ ವಿಭಾಗ. ಮುಂಬೈ ಇಂಡಿಯನ್ಸ್‌ನಲ್ಲಿ ರಾಹುಲ್ ಚಾಹರ್, ಪಿಯೂಶ್ ಚಾವ್ಲಾ, ಕೃನಾಲ್ ಪಾಂಡ್ಯ, ಜಯಂತ್ ಯಾದವ್ ಮತ್ತು ನಾಯಕ ರೋಹಿತ್ ಶರ್ಮಾ ಕೂಡ ಸ್ಪಿನ್ ಬೌಲಿಂಗ್ ಮಾಡಬಲ್ಲರು. ಆದರೆ ಇವರ್ಯಾರೂ ತೀರಾ ಅಪಾಯಕಾರಿ ಸ್ಪಿನ್ ಬೌಲರ್‌ಗಳಲ್ಲ. ಹೀಗಾಗಿ ಸ್ಪಿನ್ ಅನುಕೂಲಕರ ಮೈದಾನದಲ್ಲಿ ಆಡುವಾಗ ಮುಂಬೈ ಕೊಂಚ ಹಿನ್ನಡೆ ಕಾಣುವ ಸಾಧ್ಯತೆ ಹೆಚ್ಚಿದೆ.

ಮುಂಬೈ ಸಂಪೂರ್ಣ ತಂಡ
ರೋಹಿತ್ ಶರ್ಮಾ (ಸಿ), ಆದಿತ್ಯ ತಾರೆ, ಅನ್ಮೋಲ್‌ಪ್ರೀತ್ ಸಿಂಗ್, ಅನುಕೂಲ್ ರಾಯ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್‌ಪ್ರೀತ್ ಬೂಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಾಹರ್, ಸೂರ್ಯಕುಮಾರ್ ಯಾದ್, ಟ್ರೆಂಟ್ ಬೌಲ್ಟ್, ಕ್ರಿಸ್ ಲಿನ್, ಸೌರಭ್ ತಿವಾರಿ, ಮೊಹ್ಸಿನ್ ಖಾನ್, ಆಡಮ್ ಮಿಲ್ನೆ, ನಾಥನ್ ಕೌಲ್ಟರ್ ನೈಲ್, ಪಿಯೂಷ್ ಚಾವ್ಲಾ, ಜೇಮ್ಸ್ ನೀಶಮ್, ಯುಧ್ವೀರ್ ಚರಕ್, ಮಾರ್ಕೊ ಜಾನ್ಸೆನ್, ಅರ್ಜುನ್ ತೆಂಡೂಲ್ಕರ್.

ಮುಂಬೈ ಬೆಸ್ಟ್ ಪ್ಲೇಯಿಂಗ್ XI
ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬೂಮ್ರಾ, ಧವಲ್ ಕುಲಕರ್ಣಿ/ನಾಥನ್ ಕೌಲ್ಟರ್-ನೈಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications