ಐಪಿಎಲ್ 2021: ಯುಎಇ ತಲುಪಿದ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದ ಪಂದ್ಯಗಳು ಮುಂದಿನ ತಿಂಗಳಿನಿಂದ ಆರಂಭಗೊಳ್ಳಲಿವೆ. ಭಾರತದಲ್ಲಿ ನಡೆಯಬೇಕಿದ್ದ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಇನ್ನುಳಿದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿವೆ. ಟೂರ್ನಿಯ ಸಲುವಾಗಿ ಹಾಲಿ ಚಾಂಪಿಯನ್ಸ್ ತಂಡ ಮುಂಬೈ ಇಂಡಿಯನ್ಸ್ (ಎಂಐ) ತಂಡ ಯುಎಇಗೆ ತೆರಳಿದ್ದು ಶುಕ್ರವಾರ (ಆಗಸ್ಟ್ 13) ತಂಡ ಯುಎಇ ತಲುಪಿದೆ.
ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಗಾಲ್ಫ್ ರಾಷ್ಟ್ರವನ್ನು ತಲುಪಿದೆ. ತಂಡದ ಪ್ರಮುಖ ಆಟಗಾರ ಇಶಾನ್ ಕಿಶನ್ ಸಾಮಾಜಿಕ ಜಾಲತಾಣದ ಮೂಲಕ ತಂಡ ಯುಎಇ ತಲುಪಿರುವುದನ್ನು ಖಾತರಿಪಡಿಸಿದ್ದಾರೆ. ಯುಎಇಯಲ್ಲಿ ಮುಂಬೈ ತಂಡ ಒಂದು ತಿಂಗಳ ಅಭ್ಯಾಸ ಶಿಬಿರ ನಡೆಸಲಿರುವುದಾಗಿ ತಿಳಿದು ಬಂದಿದೆ.
ಯುಎಇ ತಲುಪಿದ ಮುಂಬೈ, ಚೆನ್ನೈ ತಂಡ
ಮುಂಬೈ ಇಂಡಿಯನ್ಸ್ ಟ್ವಿಟರ್ ಖಾತೆ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲೂ ತಂಡ ಯುಎಇಗೆ ತಲುಪಿರುವ ಬಗ್ಗೆ ಫೋಟೋಗಳನ್ನು ಹಾಕಿಕೊಳ್ಳಲಾಗಿದೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಾಕಿಕೊಳ್ಳಲಾಗಿದ್ದು, ಇದರಲ್ಲಿ, 'ಮುಂಬೈ ತಂಡ ಯುಎಇಗೆ ತಲುಪಿದೆ' ಎಂದು ಬರೆದುಕೊಳ್ಳಾಗಿದೆ. ಐಪಿಎಲ್ 2ನೇ ಹಂತದ ಪಂದ್ಯಗಳ ವೇಳೆ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿರುವುದರಿಂದ ಸದ್ಯ ಎರಡೂ ತಂಡಗಳು ಯುಎಇಗೆ ತಲುಪಿದೆ. ಸಿಎಸ್‌ಕೆ ಕೂಡ ತಂಡ ಯುಎಇ ತಲುಪಿರುವುದಕ್ಕೆ ಪೋಸ್ಟ್‌ಗಳನ್ನು ಹಾಕಿಕೊಂಡಿದೆ. ತಂಡದ ಪ್ರಮುಖ ಆಲ್ ರೌಂಡರ್ ಸುರೇಶ್ ರೈನಾ ದುಬೈಯಲ್ಲಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ.
ಬಯೋಬಬಲ್ ನಿರ್ಬಂಧ ಸಡಿಲಿಕೆ
ಐಪಿಎಲ್ ದ್ವಿತೀಯ ಹಂತದ ಪಂದ್ಯಗಳು ಆರಂಭವಾಗುವಾಗ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಆಟಗಾರರು, ಸಿಬ್ಬಂದಿಗಳು ಪ್ರವಾಸ ಸರಣಿಯಲ್ಲಿರುತ್ತಾರೆ. ಅವರೆಲ್ಲಾ ಬಯೋಬಬಲ್ ಒಳಗೇ ಇರುವುದರಿಂದ ಅಲ್ಲಿನ ಬಯೋಬಬಲ್‌ನಿಂದ ನೇರವಾಗಿ ಯುಎಇಯಲ್ಲಿರುವ ಐಪಿಎಲ್ ಬಯೋಬಬಲ್‌ಗೆ ಪ್ರವೇಶಿಸಬಹುದು ಎಂದು ಬಿಸಿಸಿಐ ಹೇಳಿದೆ. ಹೀಗಾಗಿ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಆಟಗಾರರು ಐಪಿಎಲ್ ಆರಂಭಕ್ಕೂ ಮುನ್ನ ಬೇರೆ ಬಯೋಬಬಲ್ ಒಳಗಿದ್ದರೆ ಅವರು ನೇರವಾಗಿ ಐಪಿಎಲ್ ಬಯೋಬಬಲ್ ಒಳಗೆ ಪ್ರವೇಶಿಸಬಹುದು ಎಂದು ಬಿಸಿಸಿಐ ಹೇಳಿದೆ. ಅಂದ್ಹಾಗೆ ಐಪಿಎಲ್ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಗಸ್ಟ್ 13ರಂದು ಐಪಿಎಲ್‌ಗಾಗಿ ಯುಎಇಗೆ ತೆರಳಲಿದೆ. ಯುಎಇಗೆ ತೆರಳುವುದಕ್ಕೂ ಮುನ್ನ ಎಲ್ಲಾ 8 ತಂಡಗಳ ಆಟಗಾರರು ಕೋವಿಡ್-19 ವ್ಯಾಕ್ಸಿನೇಶನ್ ಮುಗಿಸಿರಬೇಕು ಎಂದು ಬಿಸಿಸಿಐ ತಿಳಿಸಿದೆ.
ದ್ವಿತೀಯ ಹಂತದ ಐಪಿಎಲ್ ಯಾವಾಗ ಆರಂಭ?
ಮೊದಲ ಹಂತದ ಐಪಿಎಲ್‌ನಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು ಉಳಿದ 31 ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆಯಲಿವೆ. ದ್ವಿತೀಯ ಹಂತದ ಐಪಿಎಲ್ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿವೆ. ಅಕ್ಟೋವರ್ 13ರಂದು ಫೈನಲ್ ನಡೆಯಲಿದೆ. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications