ರಾಜಸ್ಥಾನ್ ವಿರುದ್ಧದ ಪಂದ್ಯಕ್ಕೆ ಡೆಲ್ಲಿಯ ರಬಾಡ, ನೋರ್ಕಿಯಾ ಅಲಭ್ಯ

ಚೆನ್ನೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ದ್ವಿತೀಯ ಪಂದ್ಯಕ್ಕಾಗಿ ಹಾಲಿ ರನ್ನರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಏಪ್ರಿಲ್ 15ರ ಗುರುವಾರ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂಗಿಳಿಯಲಿದೆ. ಈ ಪಂದ್ಯದಲ್ಲಿ ಡೆಲ್ಲಿ ತಂಡದಲ್ಲಿ ದಕ್ಷಿಣ ಆಫ್ರಿಕಾ ವೇಗಿಗಳಾದ ಕಾಗಿಸೊ ರಬಾಡ ಮತ್ತು ಅನ್ರಿಕ್ ನೋರ್ಕಿಯಾ ಕಣಕ್ಕಿಳಿಯುತ್ತಿಲ್ಲ.
ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಕಂಡಿತ್ತು. ಮುಂದಿನ ಪಂದ್ಯ ಏಪ್ರಿಲ್ 15ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿದೆ. ಈ ಪ್ರಮುಖ ಪಂದ್ಯದಲ್ಲಿ ಕಾಗಿಸೋ ರಬಾಡ, ಆನ್ರಿಕ್ ನೋರ್ಕಿಯಾ ಆಡುತ್ತಿಲ್ಲ. ಕೊರೊನಾ ಸೋಂಕು ಮತ್ತದಕ್ಕೆ ಸಂಬಂಧೀಸಿದ ಸಿರ್ಬಂಧ ಇದಕ್ಕೆ ಕಾರಣ.
ರಬಾಡ ಮತ್ತು ನೋರ್ಕಿಯಾ ಅವರಲ್ಲಿ ನೋರ್ಕಿಯಾಗೆ ಕೊರೊನಾ ವೈರಸ್ ತಗುಲಿತ್ತು. ಈಗ ನೋರ್ಕಿಯಾ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಎರಡನೇ ಕೋವಿಡ್-19 ಪರೀಕ್ಷೆಯ ಫಲಿತಾಂಶ ಇನ್ನೂ ಬಂದಿಲ್ಲ. ಹೀಗಾಗಿ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ನೋರ್ಕಿಯಾ ಆಡ್ತಾರೋ ಖಾತರಿಯಾಗಿಲ್ಲ.
ರಬಾಡಗೂ ಇದೇ ಸಮಸ್ಯೆ ಎದುರಾಗಿದೆ. ರಬಾಡ ಕೂಡ ದ್ವಿತೀಯ ಆರ್‌ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಅವರ ಫಲಿತಾಂಶ ಬಂದ ನಂತರವಷ್ಟೇ ಆರ್‌ಆರ್ ವಿರುದ್ಧದ ಪಂದ್ಯದಲ್ಲಿ ರಬಾಡ ಆಡ್ತಾರೋ ಇಲ್ಲವೋ ಖಾತರಿಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications