For Quick Alerts
ALLOW NOTIFICATIONS  
For Daily Alerts
 

ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ಟ್ರೋಫಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಡಿಸಿ ಕೋಚ್ ಪಾಂಟಿಂಗ್

IPL 2021: Delhi Capitals coach Ricky Ponting said I think we can win the IPL Trophy

ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದ್ದು ಫೈನಲ್ ಹಂತಕ್ಕೇರಲು ಕೆಕೆಆರ್ ವಿರುದ್ಧ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದೆ. ಈ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ ತಂಡದ ಕೋಚ್ ರಿಕಿ ಪಾಂಟಿಂಗ್ ಪ್ರತಿಕ್ರಿಯೆ ನೀಡಿದ್ದು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟ್ರೋಫಿ ಗೆಲ್ಲುವ ಸಾಧ್ಯತೆಯಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಲೀಗ್‌ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದು ಪ್ಲೇಆಫ್‌ಗೇರಿತ್ತು. ಆದರೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡು ಮತ್ತೊಂದು ಕ್ವಾಲಿಫೈಯರ್ ಪಂದ್ಯವನ್ನಾಡಲು ಡೆಲ್ಲಿ ಸಜ್ಜಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡ ಹೊರತಾಗುಯೂ ಡೆಲ್ಲಿ ಟ್ರೋಫಿ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್.

"ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಳೆದ ಮೂರು ಆವೃತ್ತಿಗಳಿಂದ ಇದ್ದೇನೆ. ಮೂರು ವರ್ಷದ ಹಿಂದೆ ನಾವು ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದೆವು. ಕಳೆದ ವರ್ಷ ಎರಡನೇ ಸ್ಥಾನವನ್ನು ಸಂಪಾದಿಸಿದ್ದೇವೆ. ಹಾಗಾಗಿ ನಾವು ಈ ಬಾರಿಯ ಟ್ರೋಫಿಯನ್ನು ಗೆಲ್ಲುವ ಸಾಧ್ಯತೆಯಿದೆ. ಅಂಕಿಅಂಶಗಳು ಕೂಡ ನಾವು ಯಾಕಿಲ್ಲಿ ಇದ್ದೇವೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ ಎಂದಿದ್ದಾರೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್.

"ಕಳೆದ ಎರಡು ವರ್ಷಗಳ ಹಿಂದಿನ ಡೆಲ್ಲಿ ತಂಡಕ್ಕೆ ಹೋಲಿಸಿದರೆ ಇದು ಭಿನ್ನವಾದ ತಂಡವಾಗಿದೆ. ಇದಕ್ಕೆಲ್ಲಾ ಆಟಗಾರರು ಫ್ರಾಂಚೈಸಿಗಾಗಿ ನೀಡಿದ ಕೊಡುಗೆಯೇ ಕಾರಣ" ಎಂದು ಆಟಗಾರರ ಪ್ರಯತ್ನವನ್ನು ರಿಕಿ ಪಾಂಟಿಂಗ್ ಪ್ರಶಂಸಿದಿದ್ದಾರೆ. ಅಲ್ಲದೆ ತಂಡದ ಆಟಗಾರರಲ್ಲಿ ಒಬ್ಬರಿಗೊಬ್ಬರು ನೀಡುವ ಸಹಕಾರವೇ ಈ ತಂಡವನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಕೂಡ ಪಾಂಟಿಂಗ್ ವಿವರಿಸಿದ್ದಾರೆ.

ನಾನಿಲ್ಲಿ ಇರುವುದೇ ಟ್ರೋಫಿ ಗೆಲ್ಲಲಿ: ಇನ್ನು ಇದೇ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ "ನಾನಿಲ್ಲಿ ಇರುವುದೇ ತಂಡದ ಟ್ರೋಫಿಯನ್ನು ಗೆಲ್ಲುವ ಸಲುವಾಗಿ ನಾವೀಗ ಅದಕ್ಕೆ ತುಂಬಾ ಹತ್ತಿರದಲ್ಲಿದ್ದೇವೆ. ನಾವು ಈವರೆಗೆ ಉತ್ತಮ ಆವೃತ್ತಿಯನ್ನು ಕಂಡಿದ್ದೇವೆ. ಆದರೆ ನಾವು ಶ್ರೇಷ್ಠ ಆವೃತ್ತಿಯನ್ನು ಹೊಂದಿಲ್ಲ. ಅದಕ್ಕೆ ಕಾರಣ ನಾವಿನ್ನೂ ಟ್ರೋಫಿಯನ್ನು ಗೆದ್ದಿಲ್ಲ. ನಾವೆಲ್ಲರೂ ಗೆಲುವಿಗಾಗಿ ಪ್ರಯತ್ನಿಸುತ್ತಿದ್ದೇವೆ. ಪ್ರದರ್ಶನ, ಪ್ರಯತ್ನ ಹಾಗೂ ಬದ್ಧತೆಯನ್ನು ಅಂತಿಮ ಪಂದ್ಯದವರೆಗೂ ಹಾಕಬೇಕಿದೆ. ಹಾಗಾದಲ್ಲಿ ಈ ತಂಡದ ಸಾಮರ್ಥ್ಯಕ್ಕೆ ಮಿತಿಯೇ ಇಲ್ಲದಂತಾಗುತ್ತದೆ" ಎಂದಿದ್ದಾರೆ ರಿಕಿ ಪಾಂಟಿಂಗ್.

Story first published: Wednesday, October 13, 2021, 16:31 [IST]
Other articles published on Oct 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+