Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ವಾತಿ ಕಮಿಂಗ್' ಸಾಂಗ್‌ಗೆ ಸ್ಟೆಪ್ ಹಾಕಿದ ಡೆಲ್ಲಿ ಆಟಗಾರರು: ವಿಡಿಯೋ

IPL 2021: Delhi Capitals players groove to Master movie song ‘Vaathi Coming’

ನವದೆಹಲಿ: 14ನೇ ಆವೃತ್ತಿಯ ಇಂಡಿಯನ್ಸ್ ಪ್ರೀಮಿಯರ್ ಲೀಗ್‌ (ಯಪಿಎಲ್)ನ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್‌ಗಳ ಸುಲಭ ಗೆಲುವನ್ನಾಚರಿಸಿತ್ತು. ಮುಂದೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಪ್ರಿಲ್ 15ಕ್ಕೆ ಡೆಲ್ಲಿ ಎರಡನೇ ಪಂದ್ಯ ಆಡಲಿದೆ.

ಮುಂದಿನ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಿಡುವಿನ ವೇಳೆಯಲ್ಲಿ ಮನರಂಜನೆಯಲ್ಲಿ ಪಾಲ್ಗೊಂಡಿದೆ. ಸ್ಟುಡಿಯೋದಲ್ಲಿ ತಂಡದ ಪ್ರಮುಖ ಆಟಗಾರರೆಲ್ಲ ತಮಿಳು ನಟ ವಿಜಯ್ ಅವರ ಮಾಸ್ಟರ್ ಸಿನಿಮಾದ 'ವಾತಿ ಕಮಿಂಗ್' ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಆಲ್ ರೌಂಡರ್ ಕ್ರಿಸ್ ವೋಕ್ಸ್, ಸ್ಪಿನ್ನರ್ ಆರ್ ಅಶ್ವಿನ್, ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್, ಅಜಿಂಕ್ಯ ರಹಾನೆ, ಶಿಖರ್ ಧವನ್, ರಿಷಭ್ ಪಂತ್ ಎಲ್ಲರೂ 'ವಾತಿ ಕಮಿಂಗ್' ಸಾಂಗ್‌ಗೆ ತಮ್ಮದೇ ರೀತಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಆರ್ ಅಶ್ವಿನ್ ಅವರನ್ನು ಕುಣಿಯುವಂತೆ ಶಿಖರ್ ಧವನ್ ಒತ್ತಾಯಿಸಿದರೂ ಅಶ್ವಿನ್ ಕುಣಿಯಲು ಹಿಂದೇಟು ಹಾಕಿರುವ ಇನ್ನೊಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

ಯಾವಾಗಲೂ ಆ್ಯಕ್ಟಿವ್ ಆಗಿರುವ ಶಿಖರ್ ಧವನ್ ವಾತಿ ಕಮಿಂಗ್ ಹಾಡಿಗೆ ಭುಜ ಕುಣಿಸುವಂತೆ ಅಶ್ವಿನ್ ಅವರಲ್ಲಿ ಒತ್ತಾಯಿಸಿದರಾದರೂ ಅಶ್ವಿನ್ ಇದಕ್ಕೆ ನಿರಾಕರಿಸಿದ್ದು ವಿಡಿಯೋದಲ್ಲಿ ಕಾಣಿಸಿತ್ತು. ಡೆಲ್ಲಿ ತಂಡದ ಎಂದಿನ ನಾಯಕ ಶ್ರೇಯಸ್ ಐಯ್ಯರ್ ಗಾಯಗೊಂಡು ತಂಡದಿಂದ ಹೊರ ಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ನಾಯಕತ್ವ ವಹಿಸಿಕೊಂಡಿದ್ದಾರೆ.

Story first published: Tuesday, April 13, 2021, 16:38 [IST]
Other articles published on Apr 13, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+