ಐಪಿಎಲ್ 2021: ದುಬೈಗೆ ಬಂದಿಳಿದ ರಬಾಡ, ನೋರ್ಕಿಯಾ, ಡ್ವಾರ್ಶುಯಿಸ್

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗಾಗಿ ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡ, ಅನ್ರಿಕ್ ನೋರ್ಕಿಯಾ ಮತ್ತು ಆಸ್ಟ್ರೇಲಿಯಾದ ಬೆನ್ ಡ್ವಾರ್ಶುಯಿಸ್ ಬುಧವಾರ (ಸೆಪ್ಟೆಂಬರ್ 15) ದುಬೈಗೆ ಬಂದಿಳಿದಿದ್ದಾರೆ. ಮೂವರೂ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಪರ ಆಡಲಿದ್ದಾರೆ.
ಮೂವರೂ ಆಟಗಾರರೂ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆ. ದುಬೈಗೆ ಬಂದಿಳಿಯುವಾಗ ಮೂವರ ಕೋವಿಡ್ ಫಲಿತಾಂಶವೂ ನೆಗೆಟಿವ್ ಬಂದಿದೆ. ಮೂವರಲ್ಲಿ ಬೆನ್ ಡ್ವಾರ್ಶುಯಿಸ್ ಆರು ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಲಿದ್ದಾರೆ. ಕಾಗಿಸೊ ರಬಾಡ ಮತ್ತು ಅನ್ರಿಕ್ ನೋರ್ಕಿಯಾ ನೇರವಾಗಿ ಡೆಲ್ಲಿ ಬಯೋಬಬಲ್ ಸೇರಿಕೊಳ್ಳಲಿದ್ದಾರೆ.
ಇಬ್ಬರು ದಕ್ಷಿಣ ಆಫ್ರಿಕಾ ಆಟಗಾರರು ಬಯೋ ಬಬಲ್‌ನಿಂದ ಬಯೋ ಬಬಲ್‌ಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಇಬ್ಬರೂ ಕೂಡ ಇತ್ತಿಚೆಗಷ್ಟೇ ಮುಕ್ತಾಯಗೊಂಡಿರುವ ಶ್ರೀಲಂಕಾ ವಿರುದ್ಧದ ಟಿ20ಐ ಮತ್ತು ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದರು.
ಸೋಮವಾರ ಡೆಲ್ಲಿ ಫ್ರಾಂಚೈಸಿ ಆಸೀಸ್ ವೇಗಿ ಬೆನ್ ಡ್ವಾರ್ಶುಯಿಸ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿತ್ತು. ಭಾರತದಲ್ಲಿ ಕೋವಿಡ್-19 ಕಾರಣದಿಂದ ಅರ್ಧಕ್ಕೆ ನಿಲ್ಲಿಸಲ್ಪಟ್ಟಿದ್ದ ಐಪಿಎಲ್ 2021ರ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications