Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಯುವ ತಂಡ ಡೆಲ್ಲಿ ಕ್ಯಾಪಿಟಲ್ಸ್‌ನ ನೂತನ ಜೆರ್ಸಿ ಬಿಡುಗಡೆ

IPL 2021: Delhi Capitals revealed New Jersey for IPL 2021

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಕಳೆದ ಸೀಸನ್‌ನ ರನ್ನರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ಈ ಬಾರಿ ನೂತನ ಜೆರ್ಸಿಯೊಂದಿಗೆ ಮೈದಾನಕ್ಕಿಳಿಯಲಿದೆ. 2021ರ ಐಪಿಎಲ್‌ನಲ್ಲಿ ಧರಿಸಲಿರುವ ನೂತನ ಜೆರ್ಸಿಯ ಚಿತ್ರವನ್ನು ಡೆಲ್ಲಿ ಕ್ಯಾಪಿಟಲ್ಸ್ ಶುಕ್ರವಾರ (ಮಾರ್ಚ್ 19) ಬಿಡುಗಡೆಗೊಳಿಸಿದೆ.

ನೀಲಿ ಬಣ್ಣದಲ್ಲಿರುವ ನೂತನ ಜೆರ್ಸಿ ಕೊಂಚ ಹಳೆ ಜೆರ್ಸಿಯನ್ನೇ ಹೋಲುವಂತಿದೆ. ಜೆರ್ಸಿಯ ಎದೆಯ ಭಾಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಾಯೋಜಕರಾದ ಜೆಎಸ್‌ಡಬ್ಲ್ಯೂನ ಪ್ರಿಂಟ್ ಇದೆ. ಹೊಸ ಜೆರ್ಸಿಯ ಕುತ್ತಿಗೆ ಭಾಗದಲ್ಲಿ ಕೆಂಪು ಬಣ್ಣದ ಕಾಲರ್ ಇದೆ. ಎದೆಯ ಭಾಗದಲ್ಲಿ ಘರ್ಜಿಸುತ್ತಿರುವ ಹುಲಿಯ ಚಿತ್ರವಿದೆ.

'ಹೊಸ ಜೆರ್ಸಿ ಟ್ರೆಂಡಿಯಾಗಿ ಕಾಣಿಸುತ್ತಿದೆ. ರೋಮಾಂಚಕಾರಿ ಯುವ ತಂಡವಾದ ನಮ್ಮ ಡೆಲ್ಲಿ ಕ್ಯಾಪಿಟಲ್ಸ್‌ಗೆ ಈ ಜೆರ್ಸಿ ಚೆನ್ನಾಗಿ ಹೋಲುತ್ತದೆ. ಯುವ ತಂಡ ಸವಾಲನ್ನು ಎದುರುಗೊಳ್ಳಲು ತಯಾರಾಗಿದೆ. ಹುಲಿ ಉಗುರುಗಳು ಏನೋ ಸಂದೇಶ ನೀಡುವಂತಿದೆ,' ಎಂದು ಡಿಸಿ ಸಿಇಒ ವಿನೋದ್ ವಿಶ್ತ್ ಹೇಳಿದ್ದಾರೆ.

ಯುವಕರೇ ಹೆಚ್ಚಿರುವ ತಂಡ ಡೆಲ್ಲಿ ಈ ಬಾರಿ ಸಾಕಷ್ಟು ಬಲಿಷ್ಠವಾಗಿದೆ. ಅಜಿಂಕ್ಯ ರಹಾನೆ, ಪೃಥ್ವಿ ಶಾ, ಶಿಖರ್ ಧವನ್, ಶಿಮ್ರನ್ ಹೆಟ್ಮೈರ್, ಕಾಗಿಸೋ ರಬಾಡ, ಮಾರ್ಕಸ್ ಸ್ಟೋಯ್ನಿಸ್, ರಿಷಭ್ ಪಂತ್, ಅನ್ರಿಕ್ ನಾಟ್ಜ್ ನಂತ ಪ್ರಮುಖ ಆಟಗಾರರು ತಂಡದಲ್ಲಿದ್ದಾರೆ. ಏಪ್ರಿಲ್ 9ರಿಂದ ಮೇ 30ರ ವರೆಗೆ 14ನೇ ಆವೃತ್ತಿಯ ಐಪಿಎಲ್ ನಡೆಯಲಿದೆ.

Story first published: Friday, March 19, 2021, 17:02 [IST]
Other articles published on Mar 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+