ಐಪಿಎಲ್ 2021: ಡೆಲ್ಲಿ ಮುಂಬೈಗೆ ಉತ್ತಮ ಪ್ರತಿರೋಧ ಒಡ್ಡಲಿದೆ: ಶೇನ್ ಬಾಂಡ್

ಕಳೆದ ಬಾರಿಯ ಚಾಂಪಿಯನ್ ಹಾಗೂ ರನ್ನರ್ ಅಪ್ ತಂಡಗಳು ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗುತ್ತಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಈ ಸೆಣೆಸಾಟಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯಕ್ಕೂ ಮುನ್ನ ಮಾತನಾಡಿದ ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಶೇನ್ ಬಾಂಡ್ ಡೆಲ್ಲಿ ತಂಡ ಮುಂಬೈಗೆ ಪ್ರಬಲ ಪ್ರತಿಸ್ಪರ್ಧೆಯನ್ನು ನೀಡಿಲಿದೆ ಎಂದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಜಕ್ಕೂ ಅದ್ಭುತ ಪ್ರತಿಭಾವಂತ ಆಟಗಾರರನ್ನು ಒಳಗೊಂಡಿದೆ. ಹೀಗಾಗಿ ರೋಹಿತ್ ಶರ್ಮಾ ಅವರ ನೇತೃತ್ವದ ಮುಂಬೈ ತಂಡ ಗೆಲುವಿಗಾಗಿ ಸಂಪೂರ್ಣ ಪ್ರದರ್ಶನವನ್ನು ನೀಡಬೇಕಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಅವರು ಅತ್ಯಂತ ಪ್ರಭಾವಂತರನ್ನು ಒಳಗೊಂಡ ತಂಡವಾಗಿದೆ. ಕಳೆದ ಆವೃತ್ತಿಯಲ್ಲಿ ಅವರು ಅದ್ಭುತ ಕ್ರಿಕೆಟ್ ಆಡಿದ್ದರು ಮತ್ತು ಈ ಬಾರಿಯ ಆವೃತ್ತಿಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದ್ದಾರೆ ಅದರಲ್ಲೂ ವಿಶೇಷವಾಗಿ ಬ್ಯಾಟಿಂಗ್ ವಿಭಾಗದಲ್ಲಿ. ಕಳೆದ ಬಾರಿ ನಾವು ಡೆಲ್ಲಿ ವಿರುದ್ಧ ಕೆಲ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ದೆವು. ಕಳೆದ ಆವೃತ್ತಿಯಲ್ಲಿ ಅವರು ಫೈನಲ್‌ಗೆ ಅತ್ಯಂತ ಅರ್ಹರಾಗಿದ್ದರು. ಈ ಬಾರಿ ಮತ್ತೊಮ್ಮೆ ಅವರು ಮತ್ತಷ್ಟು ಪ್ರಬಲವಾಗಿ ಟೂರ್ನಿಯನ್ನು ಆರಂಭಿಸಿದ್ದಾರೆ" ಎಂದು ಶೇನ್ ಬಾಂಡ್ ಹೇಳಿದ್ದಾರೆ.
"ನಾವು ಕೂಡ ಈಗ ಸಾಕಷ್ಟು ಆತ್ಮವಿಶ್ವಾಸವನ್ನು ಪಡೆದುಕೊಂಡಿದ್ದೇವೆ. ಅವರ ಸಾಮರ್ಥ್ಯಕ್ಕೆ ಬಲಿಷ್ಠವಾದ ಪ್ರದರ್ಶನವನ್ನು ನಾವು ನೀಡಲಿದ್ದೇವೆ ಎಂಬ ಭರವಸೆಯನ್ನು ನಾವಿ ಹೊಂದಿದ್ದೇವೆ. ಇಲ್ಲಿನ ಪಿಚ್ ಕಠಿಣವಾಗಿದೆ ಎಂಬುದು ಅರಿವಿದೆ ಆದರೆ ಇಲ್ಲಿ ಆಡಿದ ಅನುಭವ ತಂಡದ ಸದಸ್ಯರಿಗೆ ಇದೆ. ಹೀಗಾಗಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡುವ ಭರವಸೆಯಿದೆ" ಎಂದು ಶೇನ್ ಬಾಂಡ್ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications