Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕನ್ನಡಿಗರ ಬ್ಯಾಟಿಂಗ್‌ ಅಬ್ಬರ!

IPL 2021: Delhi Capitals vs Punjab Kings, 11th Match, 1st Innings Updates

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 11ನೇ ಪಂದ್ಯದಲ್ಲಿ ಮೊದಲನೇ ಇನ್ನಿಂಗ್ಸ್‌ ಆಡಿದ ಪಂಜಾಬ್ ಕಿಂಗ್ಸ್‌ 195 ರನ್ ಬಾರಿಸಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 196 ರನ್ ಗುರಿ ನೀಡಿದೆ. ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್‌ನಿಂದ ಪಂಜಾಬ್ ಉತ್ತಮ ರನ್ ಕಲೆ ಹಾಕಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್‌ನಿಂದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್ 61 (51), ಮಯಾಂಕ್ ಅಗರ್ವಾಲ್ 69 (36), ಕ್ರಿಸ್ ಗೇಲ್ 11, ದೀಪಕ್ ಹೂಡ ಅಜೇಯ 22, ನಿಕೋಲಸ್ ಪೂರನ್ 9, ಶಾರುಖ್ ಖಾನ್ 15 ರನ್‌ ಸೇರಿಸಿದರು. ಪಂಜಾಬ್ 20 ಓವರ್‌ಗೆ 4 ವಿಕೆಟ್ ಕಳೆದು 195 ರನ್ ಬಾರಿಸಿತು.

1
50819

ಪಂಜಾನ್ ಕಿಂಗ್ಸ್‌ ಇನ್ನಿಂಗ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಸ್ ವೋಕ್ಸ್‌ 1, ಲಕ್ಮನ್ ಮೇರಿವಾಲ 1, ಕಾಗಿಸೊ ರಬಾಡ 1, ಆವೇಶ್‌ ಖಾನ್ 1 ವಿಕೆಟ್‌ ಪಡೆದರು. ಪಂದ್ಯದಲ್ಲಿ ಡೆಲ್ಲಿಯ ಕ್ರಿಸ್ ವೋಕ್ಸ್ ಮತ್ತು ಕಾಗಿಸೊ ರಬಾಡ ಅತೀ ದುಬಾರಿ ಬೌಲರ್‌ಗಳಾಗಿ ಕಾಣಿಸಿದ್ದಾರೆ. ಪಂಜಾಬ್‌ಗೆ ಇಬ್ಬರೂ ಕ್ರಮವಾಗಿ 42, 43 ರನ್ ನೀಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ 2021ರ ಪಾಯಿಂಟ್ಸ್‌ ಟೇಬಲ್‌ನಲ್ಲಿ ಸದ್ಯ ಪಂಜಾಬ್ ಕಿಂಗ್ಸ್‌ ತಂಡ 7ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 4ನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಒಂದೊಂದು ಪಂದ್ಯ ಗೆದ್ದಿವೆ. ಈ ಪಂದ್ಯದ ಫಲಿತಾಂಶದ ನಂತರ ಅಂಕಪಟ್ಟಿಯಲ್ಲಿ ಏರಿಳಿತಗಳಾಗಲಿವೆ.

Story first published: Sunday, April 18, 2021, 21:40 [IST]
Other articles published on Apr 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+