Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ ಭರ್ಜರಿ ಜಯ

IPL 2021: Delhi Capitals vs Rajasthan Royals, 36th Match, Report

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಡೆಲ್ಲಿ ಭರ್ಜರಿ 33 ರನ್ ಜಯ ಗಳಿಸಿದೆ. ಶ್ರೇಯಸ್ ಐಯ್ಯರ್, ಶಿಮ್ರನ್ ಹೆಟ್ಮೈರ್ ಉತ್ತಮ ಬ್ಯಾಟಿಂಗ್‌ ನೆರವಿನೊಂದಿಗೆ ಡೆಲ್ಲಿ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್ ಪೃಥ್ವಿ ಶಾ 10, ಶಿಖರ್ ಧವನ್ 8, ಶ್ರೇಯಸ್ ಐಯ್ಯರ್ 43, ರಿಷಭ್ ಪಂತ್ 24, ಶಿಮ್ರನ್ ಹೆಟ್ಮೈರ್ 28, ಲಲಿತ್ ಯಾದವ್ 14, ಅಕ್ಷರ್ ಪಟೇಲ್ 12, ಆರ್‌ ಅಶ್ವಿನ್ 6 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 154 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್, ಯಶಸ್ವಿ ಜೈಸ್ವಾಲ್ 5, ಸಂಜು ಸ್ಯಾಮ್ಸನ್ 70, ಲಿಯಾಮ್ ಲಿವಿಂಗ್ಸ್ಟೋನ್ 1, ಡೇವಿಡ್ ಮಿಲ್ಲರ್ 7, ಮಹಿಪಾಲ್ ಲೊಮರ್ 19, ರಿಯಾನ್ ಪರಾಗ್ 2, ರಾಹುಲ್ ತೆವಾಟಿಯಾ 9, ತಬ್ರೇಜ್ ಶಮ್ಸಿ 2 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 121 ರನ್ ಗಳಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ನ ಮುಸ್ತಫಿಝುರ್ ರಹ್ಮಾನ್ 2, ಚೇತನ್ ಸಕರಿಯಾ 2, ಕಾರ್ತಿಕ್ ತ್ಯಾಗಿ 1, ರಾಹುಲ್ ಥೆವಾಟಿಯಾ 1 ವಿಕೆಟ್ ಗಳಿಸಿದರು. ರಾಜಸ್ಥಾನ್ ಇನ್ನಿಂಗ್ಸ್‌ನಲ್ಲಿ ಡೆಲ್ಲಿಯ ಆವೇಶ್ ಖಾನ್ 1, ಅನ್ರಿಕ್ ನೋರ್ಕಿಯಾ 2, ಆರ್ ಅಶ್ವಿನ್ 1, ಕಗಿಸೊ ರಬಾಡ 1, ಅಕ್ಷರ್ ಪಟೇಲ್ 1 ವಿಕೆಟ್‌ನಿಂದ ಗಮನ ಸೆಳೆದರು. ಶ್ರೇಯಸ್ ಐಯ್ಯರ್ ಪಂದ್ಯಶ್ರೇಷ್ಠರೆನಿಸಿದರು.

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI
ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ಡಬ್ಲ್ಯೂ/ಸಿ), ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಿಲ್ಲರ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್, ತಬ್ರೇಜ್ ಶಮ್ಸಿ

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI
ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್, ನಾಯಕ), ಲಲಿತ್ ಯಾದವ್, ಶಿಮ್ರಾನ್ ಹೆಟ್ಮೈರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಚ್ ನಾರ್ತ್ಜೆ, ಅವೇಶ್ ಖಾನ್.

Story first published: Saturday, September 25, 2021, 20:05 [IST]
Other articles published on Sep 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+