For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ಕ್ಯಾಪಿಟಲ್ಸ್‌ಗೆ 'ಆವೇಶ್' ಬಲ: ಅಭ್ಯಾಸದಲ್ಲಿ ಭಾಗಿಯಾದ ಯುವ ವೇಗಿ

IPL 2021: Delhi Capitals Young pacer Avesh Khan returns to training

ಕಳೆದ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದ ಆವೇಶ್ ಖಾನ್ ಈ ಬಾರಿ ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ ಜೊತೆಗೆ ತೆರಳಿದ್ದರು. ಆದರೆ ದುರಾದೃಷ್ಟವಶಾತ್ ಟೀಮ್ ಇಂಡಿಯಾದ ಈ ಯುವ ವೇಗಿ ಕೌಂಟಿ ಸೆಲೆಕ್ಟ್ ಇಲವೆನ್ ವಿರುದ್ಧ ಭಾರತ ತಂಡ ಆಡಿದ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡಿದ್ದರು. ಹೀಗಾಗಿ ತವರಿಗೆ ವಾಪಾಸಾಗಿದ್ದರು. ಆದರೆ ಈಗ ಈ ಯುವ ವೇಗಿ ಮತ್ತೆ ಅಭ್ಯಾಸವನ್ನು ಆರಂಭಿಸಿದ್ದಾರೆ. ಈ ಮೂಲಕ ಐಪಿಎಲ್ 14ನೇ ಆವೃತ್ತಿಗಾಗಿ ತಮ್ಮ ಸಿದ್ಧತೆಯನ್ನು ನಡೆಸುತ್ತಿದ್ದಾರೆ.

ಆವೇಶ್ ಖಾನ್ 2020ರ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಅತ್ಯುದ್ಭತ ಪ್ರದರ್ಶನ ನೀಡಿ ಮಿಂಚಿದ್ದರು. ಈ ಮೂಲಕ ತನ್ನ ಸಾಮರ್ಥ್ಯವನ್ನು ಬಹಿರಂಗಪಡಿಸಿದ್ದರು. ಈ ಬಾರಿಯ ಐಪಿಎಲ್‌ನ ಮೊದಲ ಹಂತದ ಪಂದ್ಯಗಳಲ್ಲಿಯೂ ಆವೇಶ್ ಖಾನ್ ಈ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಇದೀಗ ಎರಡನೇ ಹಂತದ ಪಂದ್ಯಗಳಿಗೂ ಆವೇಶ್ ಖಾನ್ ಭರ್ಜರಿಯಾಗಿ ಸಿದ್ಧತೆಯನ್ನು ಆರಂಭಿಸಿದ್ದು. ಫಿಟ್‌ನೆಸ್ ಕಡೆಗೆ ತಮ್ಮ ಚಿತ್ತ ನೆಟ್ಟಿದ್ದಾರೆ.

ಇಂಗ್ಲೆಂಡ್‌ನಲ್ಲಿ ಗಾಯಗೊಂಡು ತವರಿಗೆ ವಾಪಾಸಾದ ಬಳಿಕ ಆವೇಶ್ ಖಾನ್ ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಮಧ್ಯ ಪ್ರದೇಶದ ಈ ಯುವ ವೇಗಿ ಈಗ ತಮ್ಮ ಅಭ್ಯಾಸವನ್ನು ಆರಂಭಿಸಿರುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಿಗೆ ದೊಡ್ಡ ಸಿಹಿಸುದ್ದಿಯಾಗಿದೆ. ತಮ್ಮ ಅಭ್ಯಾಸದ ಇತ್ತೀಚಿನ ವಿಡಿಯೋವನ್ನು ಸ್ವತಃ ಆವೇಶ್ ಖಾನ್ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಅಭ್ಯಾಸವನ್ನು ನಡೆಸುತ್ತಿರುವುದು ಸ್ಪಷ್ಟವಾಗಿದೆ.

ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಆವೇಶ್ ಖಾನ್ ಅದ್ಭುತ ಪ್ರದರ್ಶನ ನೀಡಿದ್ದರು. ಆಡಿದ 8 ಪಂದ್ಯಗಳಲ್ಲಿ ಆವೇಶ್ ಖಾನ್ 14 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇದರಲ್ಲಿ ಎಂಎಸ್ ಧೋನಿ ವಿರಾಟ್ ಕೊಹ್ಲಿಯಂತಾ ಘಟಾನುಘಟಿ ಆಟಗಾರರ ವಿಕೆಟ್ ಕೂಡ ಸೇರಿದೆ ಎಂಬುದು ಗಮನಾರ್ಹ ಸಂಗತಿ. ಈ ಬಾರಿಯ ಐಪಿಎಲ್‌ನ ಮೊದಲಾರ್ಧದಲ್ಲಿ ಅತಿ ಹೆಚ್ಚಿ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆವೇಶ್ ಖಾನ್ ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ. 17 ವಿಕೆಟ್ ಪಡೆದಿರುವ ಆರ್‌ಸಿಬಿ ತಂಡದ ವೇಗಿ ಹರ್ಷಲ್ ಪಟೇಲ್ ಮೊದಲ ಸ್ಥಾನದಲ್ಲಿದ್ದಾರೆ.

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್: ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯ ಮೊದಲಾರ್ದದ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ರಿಷಭ್ ಪಂತ್ ನೇತೃತ್ವದಲ್ಲಿ ಆಡಿದ ಪಂದ್ಯಗಳಲ್ಲಿ ಡೆಲ್ಲಿ ಸರ್ವಾಂಗೀಣ ಪ್ರದರ್ಶನ ನಿಡುವಲ್ಲಿ ಯಶಸ್ವಿಯಾಗಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಈವರೆಗೆ ನೀಡಿದ ಪ್ರದರ್ಶನವನ್ನು ಮುಂದುವರಿಸಿಕೊಂಡು ಮುನ್ನುಗ್ಗುವ ಇರಾದೆಯಲ್ಲಿ ಡೆಲ್ಲಿ ಬಳಗ ಇದೆ. ಈ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸನ್ನು ಕಾಣುತ್ತಿದೆ ಡೆಲ್ಲಿ ಕ್ಯಾಪಿಟಲ್ಸ್. ಐಪಿಎಲ್ ಎರಡನೇ ಹಂತದಲ್ಲಿ ಆರ್‌ಸಿಬಿ ಸೆಪ್ಟೆಂಬರ್ 22ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

ನಾಯಕ ಯಾರು?: ಆದರೆ ಎರಡನೇ ಹಂತದ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬುದು ಈಗ ಕುತೂಹಲ ಮೂಡಿಸಿದೆ. ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಮಡದ ನಾಯಕ ಶ್ರೇಯಸ್ ಐಯ್ಯರ್ ಗಾಯಗೊಂಡಿದ್ದರು. ಹೀಗಾಗಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಆರಂಭವಾದ ಐಪಿಎಲ್‌ನಿಂದ ಶ್ರೇಯಸ್ ಸಂಪೂರ್ಣವಾಗಿ ಹೊರಗುಳಿಯುವ ಅನಿವಾರ್ಯತೆಗೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ರಿಷಭ್ ಪಂತ್‌ಗೆ ನಾಯಕತ್ವದ ಜವಾಬ್ಧಾರಿ ವಹಿಸಲಾಗಿತ್ತು. ಪಂತ್ ನಾಯಕತ್ವದಲ್ಲಿ ತಂಡ ಅದ್ಭುತವಾಗಿಯೇ ಪ್ರದರ್ಶನ ನೀಡಿತ್ತು. ಆದರೆ ಬಳಿಕ ಕೊರೊನಾವೈರಸ್‌ನ ಕಾರಣದಿಂದಾಗಿ ಟೂರ್ನಿಯನ್ನು ಮುಂದೀಡಲಾಯಿತು. ಈಗ ಐಪಿಎಲ್ ಮತ್ತೆ ಆಯೋಜನೆಯಾಗಿದೆ. ಈ ಸಂದರ್ಭದಲ್ಲಿ ಶ್ರೇಯಸ್ ಐಯ್ಯರ್ ಐಪಿಎಲ್ ಆಡಲು ಪೂರ್ಣವಾಗಿ ಸಜ್ಜಾಗಿದ್ದಾರೆ. ಹೀಗಾಗಿ ತಂಡದ ನಾಯಕತ್ವ ಯಾರಿಗೆ ನೀಡಬಹುದು ಎಂಬ ಕುತೂಹಲ ಇನ್ನೂ ಉಳಿದುಕೊಂಡಿದೆ.

3ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಬಾಲ ಬಿಚ್ಚಿದ್ರೆ ಕೊಹ್ಲಿ ಏನ್ ಮಾಡ್ತಾರಂತೆ ಗೊತ್ತಾ? | Oneindia Kannada

Story first published: Tuesday, August 24, 2021, 21:40 [IST]
Other articles published on Aug 24, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+