Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಅಜೇಯ ಶತಕ ಸಿಡಿಸಿ ದಾಖಲೆ ಬರೆದ ದೇವದತ್ ಪಡಿಕ್ಕಲ್

ipl 2021, Devdutt Padikkal 1st century in ipl

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಕರ್ನಾಟಕದ ಯುವ ಆಟಗಾರ ಐಪಿಎಲ್‌ನಲ್ಲಿ ಚೊಚ್ಚಲ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ 13 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಪಡಿಕ್ಕಲ್ ದಾಖಲೆಯನ್ನು ಬರೆದಿದ್ದಾರೆ.

ಐಪಿಎಲ್‌ನಲ್ಲಿ ಶತಕವನ್ನು ಸಿಡಿಸಿದ ಅತಿ ಕಿರಿಯ ಆಟಗಾರರ ಪಟ್ಟಿಯಲ್ಲಿ ದೇವದತ್ ಪಡಿಕ್ಕಲ್ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕರ್ನಾಟಕದ ಮನೀಶ್ ಪಾಂಡೆ ಹಾಗೂ ರಿಷಬ್ ಪಂತ್ ಬಳಿಕದ ಸ್ಥಾನದಲ್ಲಿ ದೇವದತ್ ಪಡಿಕ್ಕಲ್ ಇದ್ದಾರೆ.

ಮನೀಶ್ ಪಾಂಡೆ ಹೆಸರಲ್ಲಿದೆ ದಾಖಲೆ

ಮನೀಶ್ ಪಾಂಡೆ ಹೆಸರಲ್ಲಿದೆ ದಾಖಲೆ

ಐಪಿಎಲ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ಆಟಗಾರ ಎನಿಸಿರುವ ಮನೀಶ್ ಪಾಂಡೆ 19 ವರ್ಷ 253 ದಿನಗಳಾಗಿದ್ದಾಗ ಈ ಸಾಧನೆಯನ್ನು ಮಾಡಿದ್ದರು. 2009ರ ಐಪಿಎಲ್ ಆವೃತ್ತಿಯಲ್ಲಿ ಮನೀಶ್ ಈ ದಾಖಲೆ ಬರೆದಿದ್ದರು. ಈ ಮೂಲಕ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಮನೀಶ್ ಪಾಂಡೆ ಪಡೆದುಕೊಂಡಿದ್ದಾರೆ.

ಎರಡನೇ ಸ್ಥಾನದಲ್ಲಿ ಪಂತ್

ಎರಡನೇ ಸ್ಥಾನದಲ್ಲಿ ಪಂತ್

ಇನ್ನು ಶತಕ ಸಿಡಿಸಿದ ಅತಿ ಕಿರಿಯ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿರುವ ರಿಷಭ್ ಪಂತ್ 2018ರ ಐಪಿಎಲ್ ಆವೃತ್ತಿಯಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಆ ಸಂದರ್ಭದಲ್ಲಿ ರಿಷಭ್ ಪಂತ್ ವಯಸ್ಸು 20 ವರ್ಷ 218 ದಿನಗಳಾಗಿತ್ತು

ದಾಖಲೆ ಬರೆದ ಪಡಿಕ್ಕಲ್

ದಾಖಲೆ ಬರೆದ ಪಡಿಕ್ಕಲ್

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವಾಗ ದೇವದತ್ ಪಡಿಕ್ಕಲ್‌ಗೆ ವಯಸ್ಸು 20 ವರ್ಷ 289 ದಿನಗಳು. ಈ ಮೂಲಕ ಆರ್‌ಸಿಬಿ ತಂಡದ ಪರವಾಗಿ 14ನೇ ಶತಕವನ್ನು ಸಿಡಿಸಿದ್ದಾರೆ ದೇವದತ್ ಪಡಿಕ್ಕಲ್. ಐಪಿಎಲ್‌ನಲ್ಲಿ ತಂಡವೊಂದು ಬಾರಿಸಿದ ಅತಿ ಹೆಚ್ಚು ಶತಕ ಇದಾಗಿದೆ.

ಬೃಹತ್ ಜೊತೆಯಾಟದಲ್ಲಿ ಭಾಗಿಯಾದ ಪಡಿಕ್ಕಲ್

ಬೃಹತ್ ಜೊತೆಯಾಟದಲ್ಲಿ ಭಾಗಿಯಾದ ಪಡಿಕ್ಕಲ್

ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಭರ್ಜರಿ ಶತಕವನ್ನು ಸಿಡಿಸಿದ್ದಲ್ಲದೆ ನಾಯಕ ವಿರಾಟ್ ಕೊಹಲಿ ಜೊತೆಗೆ ಮೊದಲ ವಿಕೆಟ್‌ಗೆ 181 ರನ್‌ಗಳ ಜೊತೆಯಾಟವನ್ನು ನೀಡಿದ್ದಾರೆ. ಇದು ರನ್‌ ಬೆನ್ನಟ್ಟುವ ವೇಳೆ ವಿಕೆಟ್ ಕಳೆದುಕೊಳ್ಳದೆ ಐಪಿಎಲ್‌ನಲ್ಲಿ ದಾಖಲಾದ ಎರಡನೇ ಅತಿ ದೊಡ್ಡ ಸ್ಕೋರ್ ಎನಿಸಿದೆ.

Story first published: Friday, April 23, 2021, 9:45 [IST]
Other articles published on Apr 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+