ಐಪಿಎಲ್ 2021: ದೇವದತ್ ಪಡಿಕ್ಕಲ್ ಕೊರೊನಾ ವರದಿ ನೆಗೆಟಿವ್, ಶೀಘ್ರವೇ ತಂಡಕ್ಕೆ ಸೇರ್ಪಡೆ

ಆರ್‌ಸಿಬಿ ಅಭಿಮಾನಿಗಳು ಸಂತಸ ಪಡುವ ಸುದ್ದಿ ಈಗ ಹೊರಬಿದ್ದಿದೆ. ಕೊರೊನಾ ವೈರಸ್‌ಗೆ ತುತ್ತಾಗಿದ್ದ ದೇವದತ್ ಪಡಿಕ್ಕಲ್ ಈಗ ಸಂಪೂರ್ಣವಾಗಿ ಕೊರೊನಾ ವೈರಸ್‌ನಿಂದ ಮುಕ್ತರಾಗಿದ್ದಾರೆ. ಅವರ ವರದಿಯಲ್ಲಿ ನೆಗೆಟಿವ್ ಬಂದಿದ್ದು ಶೀಘ್ರದಲ್ಲಿಯೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಆರ್‌ಸಿಬಿ ತಂಡದ ಯುವ ಆಟಗಾರ ಕೊರೊನಾ ವೈರಸ್‌ಗೆ ತುತ್ತಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿತ್ತು. ಭಾನುವಾರ ಈ ವಿಚಾರ ಮಾಧ್ಯಮಗಳಲ್ಲಿ ಬಹಿರಂಗಗೊಂಡಿದ್ದು ಬಳಿಕ ಈ ವರದಿಗೆ ಫ್ರಾಂಚೈಸಿ ಸ್ಪಷ್ಟನೆಯನ್ನು ನೀಡಿತ್ತು. ಪಡಿಕ್ಕಲ್ ಕೊರೊನಾವೈರಸ್‌ಗೆ ತುತ್ತಾಗಿರುವುದು ನಿಜ. ಆದರೆ ಮಾರ್ಚ್ 22 ರಂದು ಅವರು ಕೊರೊನಾಗೆ ತುತ್ತಾಗಿದ್ದಾರೆ ಎಂದು ವಿವರಣೆ ನೀಡಿತ್ತು.
ಇದೀಗ ದೇವದತ್ ಕೊರೊನಾ ವೈರಸ್‌ನಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ ಎಂದು ಸ್ಪಷ್ಟವಾಗಿದೆ. ಆದರೆ ಪಡಿಕ್ಕಲ್ ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಆರಂಭಿಕನಾಗಿ ಆರ್‌ಸಿಬಿ ಪರವಾಗಿ ಕಣಕ್ಕಿಳಿಯಲಿದ್ದಾರಾ ಎಂಬುದು ಇನ್ನೂ ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲ್ಲ.
ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೊರೊನಾ ವೈರಸ್ ಸಾಕಷ್ಟು ಆತಂಕವನ್ನು ಮೂಡಿಸುತ್ತಿದೆ. ಮೊದಲಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ನಿತೀಶ್ ರಾಣಾ ಕೊರೊನಾ ವೈರಸ್‌ಗೆ ತುತ್ತಾಗಿದ್ದ ಸಂಗತಿ ಬಹಿರಂಗವಾಗಿತ್ತು. ಅದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್ ಕೂಡ ಕೋವಿಡ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು.
ನಿತೀಶ್ ರಾಣಾ ಹಾಗೂ ಅಕ್ಷರ್ ಪಟೇಲ್ ಇಬ್ಬರೂ ತಂಡದಿಂದ ಪ್ರತ್ಯೇಕವಾಗಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ನೆಗೆಟಿವ್ ವರದಿ ಬಂದ ಬಳಿಕ ಈ ಆಟಗಾರರು ಕೂಡ ತಂಡವನ್ನು ಕೂಡಿಕೊಳ್ಳಲಿದ್ದು ಅಭ್ಯಾಸವನ್ನು ಪಡೆಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications