Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿ - ನರೈನ್ ಮಿನಿ ಸಮರ ; ಅಂತೂ ಇಂತೂ ಚೊಚ್ಚಲ ಬೌಂಡರಿ ಬಾರಿಸಿದ ಧೋನಿ

IPL 2021 : Dhoni hits a first ever boundary off Sunil Naraine in IPL

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 15ನೇ ಪಂದ್ಯ ಬುಧವಾರ (ಏಪ್ರಿಲ್ 21) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಬ್ಯಾಟ್ಸ್‌ಮನ್‌ಗಳ ಆರ್ಭಟಕ್ಕೆ ಮಂಕಾದರು. ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಭರ್ಜರಿ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು.

ಇದೇ ಪಂದ್ಯದ ವೇಳೆ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸುನಿಲ್ ನರೈನ್ ಎಸೆತಕ್ಕೆ ಬೌಂಡರಿ ಬಾರಿಸಿದ್ದಾರೆ. ಹೌದು ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಸಹ ಸುನೀಲ್ ನರೈನ್ ಎಸೆತಕ್ಕೆ ಮಹೇಂದ್ರ ಸಿಂಗ್ ಧೋನಿ ಬೌಂಡರಿ ಬಾರಿಸಿಯೇ ಇರಲಿಲ್ಲ. ಪಂದ್ಯ ಆರಂಭಕ್ಕೂ ಮುನ್ನ ಧೋನಿಗೆ ಸುನಿಲ್ ನರೈನ್ ಐಪಿಎಲ್ ಇತಿಹಾಸದಲ್ಲಿ ಒಟ್ಟು 63 ಎಸೆತಗಳನ್ನು ಹಾಕಿದ್ದರು, ಈ 63 ಎಸೆತಗಳಿಗೆ ಧೋನಿ ಬಾರಿಸಿದ್ದು ಕೇವಲ 30 ರನ್ ಹಾಗೂ ಧೋನಿ ಯಾವುದೇ ಬೌಂಡರಿಗಳನ್ನು ಬಾರಿಸಿರಲಿಲ್ಲ.

ಆದರೆ ಬುಧವಾರ ನಡೆದ ಚೆನ್ನೈ ಮತ್ತು ಕೊಲ್ಕತ್ತಾ ನಡುವಿನ ಪಂದ್ಯದಲ್ಲಿ ನರೈನ್ ಮಾಡಿದ 17ನೇ ಓವರ್‌ನಲ್ಲಿ ಮೊಯಿನ್ ಅಲಿ ಔಟ್ ಆದ ಬಳಿಕ ಬಂದ ಧೋನಿ ಬೌಂಡರಿ ಬಾರಿಸಿದ್ದಾರೆ. 17ನೇ ಓವರ್‌ನ ಐದನೇ ಎಸೆತವನ್ನು ಬೌಂಡರಿ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಧೋನಿ ಸುನಿಲ್ ನರೈನ್ ಎಸೆತದಲ್ಲಿ ಚೊಚ್ಚಲ ಬೌಂಡರಿ ಸಿಡಿಸುವುದರ ಮೂಲಕ ತಮ್ಮ ಕೆಟ್ಟ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಧೋನಿ ಬಾರಿಸಿದ ಈ ಬೌಂಡರಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದ್ದು ಪ್ರಶಂಸೆ ಮತ್ತು ಟೀಕೆಗಳೆರಡೂ ವ್ಯಕ್ತವಾಗುತ್ತಿವೆ

Story first published: Thursday, April 22, 2021, 9:56 [IST]
Other articles published on Apr 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+