ಐಪಿಎಲ್ 2021 ಅಮಾನತು: 8 ಇಂಗ್ಲೆಂಡ್ ಆಟಗಾರರು ತವರಿಗೆ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿ ಅಮಾನತಾಗಿರುವುದರಿಂದ ಇಂಗ್ಲೆಂಡ್ ಕ್ರಿಕೆಟ್ ತಂಡದ 8 ಮಂದಿ ಆಟಗಾರರು ಬುಧವಾರ (ಮೇ 5) ಲಂಡನ್‌ಗೆ ವಾಪಸ್ಸಾಗಿದ್ದಾರೆ. ಇನ್ನು ಆಸ್ಟ್ರೇಲಿಯಾ ಆಟಗಾರರನ್ನು ಮಾಲ್ಡೀವ್ಸ್ ಅಥವಾ ಶ್ರೀಲಂಕಾಕ್ಕೆ ಕಳುಹಿಸಲು ಐಪಿಎಲ್ ಆಯೋಜಕರು ಯೋಚಿಸುತ್ತಿದ್ದಾರೆ.
ಐಪಿಎಲ್ ಬಯೋಬಬಲ್ ಒಳಗೆ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿದ್ದರಿಂದ ಮೇ 4ರ ಮಂಗಳವಾರ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಅಮಾನತುಗೊಳಿಸಲಾಯ್ತು. ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಇಂಗ್ಲೆಂಡ್ ಆಟಗಾರರು ವಿಮಾನ ಹಿಡಿಯುವುದಕ್ಕಾಗಿ ಅಹ್ಮದಾಬಾದ್‌ನಿಂದ ದೆಹಲಿಗೆ ತೆರಳಿದ್ದರು.
ಐಪಿಎಲ್‌ನಲ್ಲಿದ್ದ ಇಂಗ್ಲೆಂಡ್ ಆಟಗಾರರಾದ ಜಾನಿ ಬೇರ್ಸ್ಟೋವ್, ಜೋಸ್ ಬಟ್ಲರ್, ಸ್ಯಾಮ್ ಬಿಲ್ಲಿಂಗ್ಸ್, ಕ್ರಿಸ್ ವೋಕ್ಸ್, ಮೊಯೀನ್ ಅಲಿ, ಜೇಸನ್ ರಾಯ್, ಕರನ್ ಸಹೋದರರಾದ ಸ್ಯಾಮ್ ಕರನ್ ಮತ್ತು ಟಾಮ್ ಕರನ್ ಬುಧವಾರ (ಮೇ 5) ಬೆಳಗ್ಗೆ ಇಂಗ್ಲೆಂಡ್ ತಲುಪಿದ್ದಾರೆ ಎಂದು ಇಂಗ್ಲೆಂಡ್ ವಕ್ತಾರರು ತಿಳಿಸಿದ್ದಾರೆ.
'ಭಾರತದಿಂದ ಇಂಗ್ಲೆಂಡ್‌ಗೆ ಬಂದಿರುವ ಆಟಗಾರರು ಇಂಗ್ಲೆಂಡ್ ಸರ್ಕಾರ ಅನುಮೋದಿಸಿರುವ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಪಾಲಿಸಲಿದ್ದಾರೆ,' ಎಂದು ಆಂಗ್ಲ ವಕ್ತಾರ ಮಾಹಿತಿ ನೀಡಿದ್ದಾರೆ. ಇಂಗ್ಲೆಂಡ್ ನಿಯಮಿತ ಓವರ್‌ಗಳ ನಾಯಕ ಇಯಾನ್ ಮಾರ್ಗನ್, ಡೇವಿಡ್ ಮಲಾನ್, ಕ್ರಿಸ್ ಜೋರ್ಡನ್ ಇನ್ನು 2 ದಿನಗಳೊಳಗೆ ಭಾರತ ತೊರೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications