For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಎಲಿಮಿನೇಟರ್, ಕೆಕೆಆರ್ vs ಆರ್‌ಸಿಬಿ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್

IPL 2021 Eliminator: RCB vs KKR: Preview, probable XIs, live streaming, sharjah weather forecast, and pitch report

ಐಪಿಎಲ್‌ನಲ್ಲಿ ಪ್ಲೇಆಫ್ ಹಂತದ ಪಂದ್ಯಗಳು ನಡೆಯುತ್ತಿದ್ದು ಇಂದು ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಹಾಗೂ ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯ ಎಲಿಮಿನೇಟರ್ ಪಂದ್ಯವಾಗಿರುವ ಕಾರಣ ಪಂದ್ಯದಲ್ಲಿ ಗೆದ್ದರಷ್ಟೇ ಟೂರ್ನಿಯಲ್ಲಿ ಮುಂದುವರಿಯಲು ಸಾಧ್ಯವಿದೆ. ಹೀಗಾಗಿ ಕೆಕೆಆರ್ ಹಾಗೂ ಆರ್‌ಸಿಬಿ ತಂಡಗಳು ಜಿದ್ದಾಜಿದ್ದಿನ ಪ್ರದರ್ಶನ ನಿಡುವುದರಲ್ಲಿ ಅನುಮಾನವಿಲ್ಲ.

ಲೀಗ್ ಹಂತದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿ 18 ಅಂಕಗಳನ್ನು ಸಂಪಾದಿಸಿದರೂ ನೆಟ್ ರನ್‌ರೇಟ್‌ನಲ್ಲಿ ಹಿಂದುಳಿದ ಕಾರಣದಿಂದಾಗಿ ಎರಡನೇ ಸ್ಥಾನವನ್ನ ಸಿಎಸ್‌ಕೆಗೆ ಬಿಟ್ಟುಕೊಟ್ಟು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ಯುಎಇ ಚರಣದಲ್ಲಿ ಕಳಪೆ ಆರಂಭದ ಹೊರತಾಗಿಯೂ ಬಳಿಕ ಆರ್‌ಸಿಬಿ ತಿರುಗಿ ಬಿದ್ದ ರೀತಿ ಅದ್ಭುತವಾಗಿತ್ತು. ಈ ಪ್ರದರ್ಶನವನ್ನು ಪ್ಲೇಆಫ್ ಹಂತದಲ್ಲಿಯೂ ಮುಂದುವರಿಸುವ ಅಗತ್ಯವಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧಧ ಪಂದ್ಯದಲ್ಲಿ ಅಂತಿಮ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿದ ಆತ್ಮ ವಿಶ್ವಾಸದೊಂದುಗೆ ಕೊಹ್ಲಿ ಪಡೆ ಕೆಕೆಆರ್ ವಿರುದ್ಧ ಕಣಕ್ಕಿಳಿಯಲಿದೆ.

ಪಂದ್ಯದ ಮಾಹಿತಿ, ಹವಾಮಾನ ವರದಿ: ಈ ಪಂದ್ಯ ಅಕ್ಟೋಬರ್ 11 ಸೋಮವಾರ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಶಾರ್ಜಾದ ಶಾರ್ಜಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಹವಾಮಾನ ವರದಿ: ಶಾರ್ಜಾದಲ್ಲಿ ಮಳೆಯಾಗುವ ಯಾವುದೇ ಸಾಧ್ಯತೆಗಳು ಇಲ್ಲ. ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿರಲಿದೆ.

ಪಿಚ್ ರಿಪೋರ್ಟ್: ಶಾರ್ಜಾ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ರನ್‌ಗಳಿಸಲು ಸವಾಲಾದ ಪಿಚ್ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಕೆಕೆಆರ್ ರಾಜಸ್ಥಾನ್ ರಾಯಲ್ಸ್ ವಿರುದ್ಧಧ ಪಂದ್ಯದಲ್ಲಿ ಇದೇ ಅಂಗಳದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿತ್ತು. ಪವರ್‌ಪ್ಲೇ ಬಳಿಕ ದೊಡ್ಡ ಹೊಡೆತಗಳನ್ನು ಬಾರಿಸುವುದು ಬ್ಯಾಟರ್‌ಗಳಿಗೆ ಸವಾಲಾಗಲಿದೆ. ನಿಧಾನಗರಿಯ ಎಸೆತಗಳು ಪರಿಣಾಮಕಾರಿಯಾಗಿರುತ್ತದೆ. ಎರಡು ತಂಡಗಳು ಕೂಡ ಎರಡನೇ ಚರಣದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಆದರೆ ಹೈ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. 150-155 ರನ್‌ಗಳ ಗುರಿಯನ್ನು ನೀಡಿದರೆ ಪಂದ್ಯ ರೋಮಾಂಚನಕಾರಿ ಅಂತ್ಯವನ್ನು ಪಡೆಯುವ ನಿರೀಕ್ಷೆಯಿದೆ.

ಆರ್‌ಸಿಬಿ ಸಂಭಾವ್ಯ ಆಡುವ ಬಳಗ: ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಶ್ರೀಕರ್ ಭಾರತ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹಮದ್, ಹರ್ಷಲ್ ಪಟೇಲ್, ಜಾರ್ಜ್ ಗಾರ್ಟನ್, ಮೊಹಮ್ಮದ್ ಸಿರಾಜ್ ಮತ್ತು ಯುಜ್ವೇಂದ್ರ ಚಾಹಲ್.

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಆಡುವ ಬಳಗ: ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇಯೋನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್/ಆಂಡ್ರೆ ರಸೆಲ್, ಸುನಿಲ್ ನರೈನ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ ಮತ್ತು ಶಿವಂ ಮಾವಿ

ನೇರಪ್ರಸಾರ ಮಾಹಿತಿ: ಈ ಪಂದ್ಯ ಕೂಡ ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಡಿಸ್ನಿ+ ಹಾಟ್‌ಸ್ಟಾರ್ VIP ಚಂದಾದಾರರು ಕೂಡ ಲೈವ್‌ ಸ್ಟ್ರೀಮಿಂಗ್ ವೀಕ್ಷಿಸುವ ಅವಕಾಶವಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ಸ್ಕ್ವಾಡ್: ವಿರಾಟ್ ಕೊಹ್ಲಿ (ನಾಯಕ), ಶ್ರೀಕರ್ ಭಾರತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಕೈಲ್ ಜೇಮೀಸನ್, ನವದೀಪ್ ಸೈನಿ , ಟಿಮ್ ಡೇವಿಡ್, ದುಷ್ಮಂತ ಚಮೀರಾ, ಸಚಿನ್ ಬೇಬಿ, ಪವನ್ ದೇಶಪಾಂಡೆ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್

ಕೋಲ್ಕತ್ತಾ ನೈಟ್ ರೈಡರ್ಸ್ ಸಂಪೂರ್ಣ ಸ್ಕ್ವಾಡ್: ಇಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಶಕೀಬ್ ಅಲ್ ಹಸನ್, ಸುನೀಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕರವರ್ತಿ, ಟಿಮ್ ಸೌಥಿ, ಹರ್ಭಜನ್ ಸಿಂಗ್, ಆಂಡ್ರೆ ರಸೆಲ್, ಬೆನ್ ಕಟ್ಟಿಂಗ್, ಕರುಣ್ ನಾಯರ್, ಪವನ್ ನೇಗಿ, ಗುರ್ಕೀರತ್ ಸಿಂಗ್ ಮನ್, ಶೆಲ್ಡನ್ ಜಾಕ್ಸನ್, ಸಂದೀಪ್ ವಾರಿಯರ್, ಟಿಮ್ ಸೀಫರ್ಟ್, ಪ್ರಸಿದ್ಧ್ ಕೃಷ್ಣ, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ವೈಭವ್ ಅರೋರಾ

Story first published: Monday, October 11, 2021, 13:21 [IST]
Other articles published on Oct 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+