Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಡೇಜಾ ಓವರ್‌ವೊಂದರಲ್ಲಿ 36 ರನ್ ಬಾರಿಸಿದ್ದರ ಹಿಂದಿನ ರಹಸ್ಯ ಬಿಚ್ಚಿಟ್ಟ ಫಾಫ್ ಡು ಪ್ಲೆಸಿಸ್

IPL 2021 : Faf du Plessis lauds Sir Ravindra Jadejas 37-run last-over heroics for CSK

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಫಾಫ್ ಡು ಪ್ಲೆಸಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ರವೀಂದ್ರ ಜಡೇಜಾ ಆಡಿದ ಅದ್ಭುತ ಆಟದ ಬಗ್ಗೆ ಮಾತನಾಡಿದ್ದಾರೆ. ಭಾನುವಾರ ( ಏಪ್ರಿಲ್ 25 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. 19 ಓವರ್ ಮುಗಿದಿದ್ದಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತ್ತು. ಪಂದ್ಯದಲ್ಲಿ ಆಗಾಗಲೇ 3 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಹರ್ಷಲ್ ಪಟೇಲ್ ಕೊನೆಯ ಓವರ್ ಮಾಡಲು ಬಂದಿದ್ದರು.

ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಹರ್ಷಲ್ ಪಟೇಲ್ ಎಸೆದ ಕೊನೆಯ ಓವರ್‌ನಲ್ಲಿ ದಾಖಲೆಯ ಬರೋಬ್ಬರಿ 36 ರನ್ ಚಚ್ಚಿದರು. ಹರ್ಷಲ್ ಪಟೇಲ್ ಒಂದು ನೋಬಾಲ್ ಹಾಕಿದ್ದ ಕಾರಣ ಕೊನೆಯ ಓವರ್ ಒಂದರಲ್ಲಿಯೇ 37 ರನ್ ಚೆನ್ನೈ ತಂಡಕ್ಕೆ ಸೇರಿಕೊಂಡಿತು. ಹೀಗೆ ಕೊನೆಯ ಓವರ್‌ನಲ್ಲಿ ತನ್ನ ರೌದ್ರಾವತಾರವನ್ನು ಪ್ರದರ್ಶಿಸಿದ ಜಡೇಜಾ ಬೌಲಿಂಗ್‌ನಲ್ಲಿಯೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವಿಕೆಟ್‍ಗಳನ್ನು ಪಡೆದುಕೊಳ್ಳುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪಂದ್ಯವನ್ನು ಗೆಲ್ಲಿಸಿಕೊಟ್ಟರು.

ಜಡೇಜಾ ಅವರ ಈ ಅದ್ಭುತ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಫಾಫ್ ಡು ಪ್ಲೆಸಿಸ್ ಕೊನೆಯ ಓವರ್‌ನಲ್ಲಿ ಜಡೇಜಾ ಬಾರಿಸಿದ 36 ರನ್ ಆಕಸ್ಮಿಕ ಅಲ್ಲ, ಅಭ್ಯಾಸದ ವೇಳೆ ಜಡೇಜಾ ಪಟ್ಟ ಶ್ರಮದ ಪ್ರತಿಫಲ ಅದು ಎಂದು ತಿಳಿಸಿದರು. ಹೌದು ಐಪಿಎಲ್ ಆರಂಭಕ್ಕೂ ಮುನ್ನ ರವೀಂದ್ರ ಜಡೇಜಾ ಕಠಿಣ ಅಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಅದರ ಪ್ರತಿಫಲವೇ ಈ ಅದ್ಭುತ ಪ್ರದರ್ಶನ ಎಂದು ಜಡೇಜಾ ಅವರ ಪ್ರದರ್ಶನದ ಹಿಂದಿನ ರಹಸ್ಯವನ್ನು ಫಾಫ್ ಡು ಪ್ಲೆಸಿಸ್ ಬಿಚ್ಚಿಟ್ಟರು. 160-165 ರನ್ ಗಳಿಸುತ್ತೇವೆ ಎಂದು ಎಲ್ಲರೂ ತಿಳಿದಿದ್ದೆವು ಆದರೆ ಜಡೇಜಾ ಅವರ ಅತ್ಯದ್ಭುತ ಆಟದಿಂದ ಎಲ್ಲವೂ ಬದಲಾಗಿ ಹೋಯಿತು ಎಂದು ರವೀಂದ್ರ ಜಡೇಜಾ ಅವರ ಬ್ಯಾಟಿಂಗ್ ಬಗ್ಗೆ ಫಾಪ್ ಡುಪ್ಲೆಸಿಸ್ ಹಾಡಿ ಹೊಗಳಿದರು.

Story first published: Tuesday, April 27, 2021, 20:20 [IST]
Other articles published on Apr 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+