Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಆರ್‌ಸಿಬಿ ತಂಡಕ್ಕೆ ಸತತ ನಾಲ್ಕನೇ ಪಂದ್ಯ ಗೆಲ್ಲಲು ಇದೆ ನಾಲ್ಕು ದೊಡ್ಡ ಕಾರಣಗಳು

IPL 2021: four reasons for virat kohli teams 4th victory of the season

ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೇ ಮೊದಲ ಇಷ್ಟು ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ತಂಡದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ಈ ಸಾಧನೆ ಸಾಕಷ್ಟು ಹುಮ್ಮಸ್ಸನ್ನು ನೀಡಿದೆ. ಈಗ ಮತ್ತೊಂದು ಪಂದ್ಯಕ್ಕೆ ವಿರಾಟ್ ಕೊಹ್ಲಿ ಬಳಗ ಸಿದ್ಧವಾಗಿದ್ದು ಗೆಲುವಿನ ಓಟ ಮುಂದುವರಿಸುವ ಉತ್ಸಾಹದಲ್ಲಿದೆ.

ಗುರುವಾರ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಮೊದಲ ಮೂರು ಪಂದ್ಯಗಳನ್ನು ಚೆನ್ನೈನಲ್ಲಿ ಆಡಿದ್ದ ಆರ್‌ಸಿಬಿ ಈಗ ಮುಂಬೈನಲ್ಲಿ ಮುಂದಿನ ಪಂದ್ಯಗಳನ್ನು ಆಡಲು ಬಂದಿಳಿದಿದೆ.

ಈ ಪಂದ್ಯದಲ್ಲಿಯೂ ವಿರಾಟ್ ಪಡೆ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. ಹಾಗಾದರೆ ವಿರಾಟ್ ಕೊಹ್ಲಿ ಪಡೆಯ ಗೆಲುವಿಗೆ ಕಾರಣವಾಗಬಹುದಾದ ಪ್ರಮುಖ ನಾಲ್ಕು ಅಂಶಗಳು ಯಾವುದು? ಮುಂದೆ ಓದಿ

ಟೂರ್ನಿಯಲ್ಲಿ ಅದ್ಭುತ ಆರಂಭ

ಟೂರ್ನಿಯಲ್ಲಿ ಅದ್ಭುತ ಆರಂಭ

ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಪಡೆ ಅದ್ಭುತವಾದ ಆರಂಭವನ್ನು ಪಡೆದುಕೊಂಡಿದೆ. ಸದ್ಯ ಆರಂಭಿಕ ಮೂರು ಪಂದ್ಯಗಳಲ್ಲಿಯೂ ಕೊಹ್ಲಿ ಬಳಗ ಉತ್ತಮ ಗೆಲುವು ಸಾಧಿಸಿದೆ. ಈ ಗೆಲುವು ಕೊಹ್ಲಿ ಬಳಗಕ್ಕೆ ದೊಡ್ಡ ಸ್ಪೂರ್ತಿಯನ್ನು ನೀಡಲಿದೆ. ಅದರಲ್ಲೂ ಈ ಆವೃತ್ತಿಯ ಉದ್ಭಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ನಂತರ ಈ ಗೆಲುವಿನ ಲಯವನ್ನು ಸತತ ಮೂರು ಪಂದ್ಯಗಳಲ್ಲಿ ಮುಂದುವರಿಸಿಕೊಂಡು ಬಂದಿದೆ. ಇದು ಮತ್ತೊಂದು ಗೆಲುವಿಗೆ ಸ್ಪೂರ್ತಿಯಾಗಲಿದೆ.

ಅದ್ಭುತ ಫಾರ್ಮ್‌ನಲ್ಲಿ ಮ್ಯಾಕ್ಸ್‌ವೆಲ್-ಡಿವಿಲಿಯರ್ಸ್

ಅದ್ಭುತ ಫಾರ್ಮ್‌ನಲ್ಲಿ ಮ್ಯಾಕ್ಸ್‌ವೆಲ್-ಡಿವಿಲಿಯರ್ಸ್

ಇನ್ನು ಆರ್‌ಸಿಬಿ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಉತ್ತಮ ಲಯದಲ್ಲಿದ್ದಾರೆ. ಅದರಲ್ಲೂ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಶ್ರೇಷ್ಠ ಫಾರ್ಮ್‌ನಲ್ಲಿರುವುದು ತಂಡಕ್ಕೆ ದೊಡ್ಡ ಶಕ್ತಿ ನೀಡಿದೆ. ವಿರಾಟ್ ಕೊಹ್ಲಿ ಕೂಡ ಮತ್ತೆ ಮಿಂಚುವ ಭರವಸೆಯಲ್ಲಿದ್ದಾರೆ.

ಬೌಲಿಂಗ್‌ನಲ್ಲಿ ಯಶಸ್ಸು

ಬೌಲಿಂಗ್‌ನಲ್ಲಿ ಯಶಸ್ಸು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ವಿಭಾಗ ಈ ಬಾರಿ ಆವೃತ್ತಿಯಲ್ಲಿ ಸಾಕಷ್ಟು ಬಲಿಷ್ಠವಾಗಿದೆ. ಅದರಲ್ಲೂ ತಂಡಕ್ಕೆ ಸಾಕಷ್ಟು ಆವೃತ್ತಿಗಳಲ್ಲಿ ಸಮಸ್ಯೆಯಾಗಿದ್ದ ಡೆತ್ ಓವರ್‌ನಲ್ಲಿ ಈ ಬಾರಿ ಆರ್‌ಸಿಬಿ ಬೌಲರ್‌ಗಳು ಅದ್ಭುತವಾಗಿ ಯಶಸ್ಸು ಸಾಧಿಸುತ್ತಿದೆ. ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ವೇಗದ ದಾಳಿ ಆರ್‌ಸಿಬಿ ದೊಡ್ಡ ಪ್ರಮಾಣದಲ್ಲಿ ಶಕ್ತಿಯನ್ನು ನೀಡುತ್ತಿದೆ. ಇದು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸವಾಲೆನಿಸಲಿದೆ.

ವಿರಾಟ್ ಕೊಹ್ಲಿ ನಾಯಕತ್ವ

ವಿರಾಟ್ ಕೊಹ್ಲಿ ನಾಯಕತ್ವ

ವಿರಾಟ್ ಕೊಹ್ಲಿ ನಾಯಕತ್ವ ಆರ್‌ಸಿಬಿಯ ಮತ್ತೊಂದು ಪ್ರಮುಖ ಶಕ್ತಿ. ತನ್ನ ಆಕ್ರಮಣಕಾರಿ ಮನಸ್ಥಿತಿಯಿಂದ ಸಹ ಆಟಗಾರರನ್ನು ಉತ್ತೇಜಿಸುವುದರ ಜೊತೆಗೆ ಎದುರಾಳಿಯ ಸದ್ದಡಗಿಸಲು ಪೂರಕವಾಗಿದೆ. ಯಾವ ಆಟಗಾರರಿಂದ ಸಂದರ್ಭಕ್ಕೆ ಪೂರಕವಾಗಿ ಯಾವ ರೀತಿಯ ಆಟವನ್ನು ಪಡೆಯಬೇಕೆಂದು ಅರ್ಥ ಮಾಡಿಕೊಳ್ಳುವಲ್ಲಿ ಕೊಹ್ಲಿ ಸಮರ್ಥರಾಗಿರುವುದು ತಂಡದ ಗೆಲುವಿಗೆ ಮತ್ತಷ್ಟು ಪೂರಕವಾಗಿರಲಿದೆ.

Story first published: Thursday, April 22, 2021, 9:58 [IST]
Other articles published on Apr 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+