For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಎಲ್ಲಾ ತಂಡಗಳ ಬದಲಿ ಆಟಗಾರರ ಸಂಪೂರ್ಣ ಪಟ್ಟಿ

IPL 2021: Full list of cricketers named as replacements ahead of the remaining IPL matches

ಬೆಂಗಳೂರು, ಆಗಸ್ಟ್ 26: ಐಪಿಎಲ್ 2021 ಆವೃತ್ತಿಯ ಎರಡನೇ ಚರಣದ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆಗಸ್ಟ್ 15ರ ವರೆಗೆ ಯುಎಇನಲ್ಲಿ ನಡೆಯಲಿದೆ. ಕೊರೊನಾವೈರಸ್‌ನಿಂದ ಕಳೆದ ಮೇ ತಿಂಗಳಿನಲ್ಲಿ ಮುಂದೂಡಲ್ಪಟ್ಟಲ್ಲಿಂದಲೇ ಸರಣಿಯನ್ನು ಮುಂದುವರಿಸಲಾಗುತ್ತದೆ. ಆದರೆ ಕೊರೊನಾವೈರಸ್‌ನ ಕಾರಣದಿಂದಾಗಿ ಟೂರ್ನಿಯ ತಾಣಗಳು ಬದಲಾಗಿದ್ದು ಉಳಿದ ಪಂದ್ಯಗಳು ಸಂಪೂರ್ಣವಾಗಿ ಯುಎಇನಲ್ಲಿನ ಮೂರು ಕ್ರೀಡಾಂಗಣಗಳಲ್ಲಿ ನಡೆಯಲಿದೆ.

ಆಡಿರುವ ಪಂದ್ಯಗಳಲ್ಲಿ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈಗ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಉಳಿದಂತೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನವನ್ನು ಪಡೆದುಕೊಂಡಿದೆ. ಈ ಬಾರಿಯ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಿಗೆ ಬಹುತೇಕ ಎಲ್ಲಾ ಸ್ಟಾರ್ ಆಟಗಾರರು ಕೂಡ ಭಾಗಿಯಾಗಲಿದ್ದಾರೆ. ಹಾಗಿದ್ದರೂ ಕೆಲ ಆಟಗಾರರು ವೈಯಕ್ತಿಕ ಕಾರಣಗಳನ್ನು ನೀಡಿ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ.

ಹೀಗೆ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿರುವ ಆಟಗಾರರ ಬದಲಿಗೆ ಬೇರೆ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಐಪಿಎಲ್ ಆಡಳಿತ ಮಂಡಳಿ ಈಗ ಎಲ್ಲಾ ಫ್ರಾಂಚೈಸಿಗಳಿಗೂ ಅವಕಾಶವನ್ನು ನೀಡಿದೆ. ಹೀಗಾಗಿ ಕೆಲ ಆಟಗಾರರು ಐಪಿಎಲ್‌ನಲ್ಲಿ ಭಾಗಿಯಾಗಲು ಅವಕಾಶವನ್ನು ಪಡೆದುಕೊಂಡಿದ್ದು ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಐಪಿಎಲ್‌ನಲ್ಲಿ ಬದಲಿ ಆಟಗಾರರಾಗಿ ತಂಡಗಳಿಗೆ ಸೇರ್ಪಡೆಯಾಗಲು ಐಪಿಎಲ್ ಆಡಳಿತ ಮಂಡಳಿ ನಿರ್ಬಂದಗಳನ್ನು ಕೂಡ ವಿಧಿಸಿತ್ತು. ಕಳೆದ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿ ಹರಾಜಾಗದೇ ಉಳಿದ ಆಟಗಾರರಿಗೆ ಮಾತ್ರವೇ ಬದಲಿ ಆಟಗಾರರಾಗಿ ಅವಕಾಶವನ್ನು ನೀಡಲಾಗಿತ್ತು. ಹೀಗಾಗಿ ಹರಾಜಾಗದೇ ಉಳಿದುಕೊಂಡಿದ್ದ ಕೆಲ ಪ್ರಮುಖ ಆಟಗಾರರು ಈಗ ಮತ್ತೆ ಐಪಿಎಲ್‌ನಲ್ಲಿ ಆಡಲು ಕಣಕ್ಕಿಳಿಯಲಿದ್ದಾರೆ.

ಅತಿ ಹೆಚ್ಚು ಬದಲಿ ಆಟಗಾರರನ್ನು ಸೇರ್ಪಡಗೊಳಿಸಿದ ಆರ್‌ಸಿಬಿ: ಈ ಬಾರಿಯ ಐಪಿಎಲ್ ಪಂದ್ಯಾವಳಿಗೂ ಮುನ್ನ ಆರ್‌ಸಿಬಿ ತಂಡ ಅತಿ ಹೆಚ್ಚು ಬದಲಿ ಆಟಗಾರರನ್ನು ತನ್ನ ಬಳಗಕ್ಕೆ ಸೇರ್ಪಡೆಗೊಳಿಸಿದೆ. ಯುಎಇಯಲ್ಲಿ ನಡೆಯಲಿರುವ ಐಪಿಎಲ್‌ಗೂ ಮುನ್ನ ನಾಲ್ಕು ಮಂದಿಯನ್ನು ಆರ್‌ಸಿಬಿ ಸೇರಿಸಿಕೊಂಡಿದೆ. ದುಷ್ಮಂತ ಚಮೀರ, ವನಿಂದು ಹಸರಂಗ, ಜಾರ್ಜ್ ಗಾರ್ಟನ್ ಹಾಗೂ ಟಿಮ್ ಡೇವಿಡ್ ಆರ್‌ಸಿಬಿ ಬಳಗವನ್ನು ಹೊಸದಾಗಿ ಸೇರಿಕೊಂಡಿದ್ದಾರೆ.

ಈವರೆಗೆ ಐಪಿಎಲ್‌ನಲ್ಲಿ ಬದಲಿ ಆಟಗಾರರಾಗಿ ಸೇರ್ಪಡೆಯಾಗಿರುವ ಆಟಗಾರರ ಪಟ್ಟಿಯನ್ನು ನೋಡೋಣ:
1. ದುಷ್ಮಂತ ಚಮೀರಾ - ರಾಯಲ್ ಚಾಲೆಂಜರ್ಸ್ ಬೆಂಗಳೂರು
2. ವನಿಂದು ಹಸರಂಗ - ರಾಯಲ್ ಚಾಲೆಂಜರ್ಸ್ ಬೆಂಗಳೂರು
3. ಜಾರ್ಜ್ ಗಾರ್ಟನ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು
4. ಟಿಮ್ ಡೇವಿಡ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು
5. ನಾಥನ್ ಎಲ್ಲಿಸ್ - ಪಂಜಾಬ್ ಕಿಂಗ್ಸ್
6. ಆದಿಲ್ ರಶೀದ್ - ಪಂಜಾಬ್ ಕಿಂಗ್ಸ್
7. ಟಿಮ್ ಸೌಥಿ - ಕೋಲ್ಕತ್ತಾ ನೈಟ್ ರೈಡರ್ಸ್
8. ಗ್ಲೆನ್ ಫಿಲಿಪ್ಸ್ - ರಾಜಸ್ಥಾನ ರಾಯಲ್ಸ್
9. ಟಬ್ರೈಜ್ ಶಮ್ಸಿ - ರಾಜಸ್ಥಾನ ರಾಯಲ್ಸ್

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಬದಲಿ ಆಟಗಾರರ ಸೇರ್ಪಡೆಯ ಬಳಿಕ ಆರ್‌ಸಿಬಿ ತಂಡ ಹೀಗಿದೆ:

ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಮೊಹಮ್ಮದ್ ಸಿರಾಜ್, ಯಜುರ್ವೇದ ಚಾಹಲ್, ಕೈಲ್ ಜೆಮಿಸನ್, ಕ್ರಿಶ್ಚಿಯನ್, ವನಿಂದು ಹಸರಂಗ, ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಜಾರ್ಜ್ ಗಾರ್ಟನ್, ದುಷ್ಮಂತ ಚಮೀರಾ, ಕೆಎಸ್ ಭಾರತ್, ಸುಯಾಶ್, ಅಜರುದ್ದೀನ್, ರಜತ್ ಪಾಟಿದಾರ್, ನವದೀಪ್ ಸೈನಿ, ಹರ್ಷಲ್ ಪಟೇಲ್, ವಾಷಿಂಗ್ಟನ್ ಸುಂದರ್, ಸಚಿನ್ ಬೇಬಿ, ಪವನ್ ದೇಶಪಾಂಡೆ, ಎಸ್ ಅಹ್ಮದ್.

Story first published: Friday, August 27, 2021, 12:44 [IST]
Other articles published on Aug 27, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+