For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ವಿದೇಶಿ ಆಟಗಾರರ ಲಭ್ಯತೆ ಹಾಗೂ ತಂಡಗಳಲ್ಲಿ ಉಳಿದಿರುವ ಸ್ಥಾನ

IPL 2021: Full list of foreign players for in IPL Auction and purse remaining

ಐಪಿಎಲ್‌ನ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದ ಚಟುವಟಿಕೆಗಳು ಈಗಾಗಲೇ ಆರಂಭವಾಗಿದೆ. ಬುಧವಾರ ಎಲ್ಲಾ ಫ್ರಾಂಚೈಸಿಗಳು 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಭಾಗಿಯಾಗಲು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದೆ. ಹೀಗಾಗಿ ಫೆಬ್ರವರಿಯಲ್ಲಿ ನಡೆಯಲಿರುವ ಹರಾಜಿನಲ್ಲಿ ಯಾವೆಲ್ಲಾ ಆಟಗಾರರು ಭಾಗಿಯಾಗಲಿದ್ದಾರೆ ಎಂಬ ಬಗ್ಗೆ ಒಂದು ಹಂತದ ಚಿತ್ರಣ ಲಭ್ಯವಾಗಿದೆ.

ಎಲ್ಲಾ 8 ತಂಡಗಳು ಕೂಡ ತಮ್ಮ ತಂಡದಲ್ಲಿ ರಿಟೈನ್ ಮಾಡಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ನಾಯಕ ಸ್ಟೀವ್ ಸ್ಮಿತ್ ಅವರನ್ನೇ ಬಿಡುಗಡೆಗೊಳಿಸಿ ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ನಾಯಕ ಆರೋನ್ ಫಿಂಚ್ ಅವರನ್ನು ತಂಡದಿಂದ ಹೊರಗಿಟ್ಟಿದೆ.

ಎಲ್ಲಾ ಫ್ರಾಂಚೈಸಿಗಳು ಕೂಡ ಬುಧವಾರ ತಮ್ಮ ರಿಟೈನ್ ಹಾಗೂ ರಿಲೀಸ್ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ ನಂತರ ಈಗ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಈಗ ಎಲ್ಲಾ ತಂಡಗಳಲ್ಲೂ ವಿದೇಶಿ ಆಟಗಾರರಿಗೆ ಕೆಲ ಅವಕಾಶಗಳು ಉಳಿದುಕೊಂಡಿದೆ.

ಹೀಗಾಗಿ ಯಾವ ಯಾವ ತಂಡದಲ್ಲಿ ವಿದೇಶಿ ಆಟಗಾರರಿಗೆ ಎಷ್ಟೆಷ್ಟು ಅವಕಾಶಗಳು ಉಳಿದುಕೊಂಡಿದೆ ಎಂಬುದನ್ನು ನೋಡೋಣ

ಮುಂಬೈ ಇಂಡಿಯನ್ಸ್ - 4
ರಾಜಸ್ಥಾನ್ ರಾಯಲ್ಸ್ - 3
ದೆಹಲಿ ರಾಜಧಾನಿಗಳು - 3
ರಾಯಲ್ ಚಾಲೆಂಜರ್ಸ್ ಬೆಂಗಳೂರು - 3
ಕಿಂಗ್ಸ್ ಇಲೆವೆನ್ ಪಂಜಾಬ್ - 5
ಚೆನ್ನೈ ಸೂಪರ್ ಕಿಂಗ್ಸ್ - 1
ಕೋಲ್ಕತಾ ನೈಟ್ ರೈಡರ್ಸ್ - 2
ಸನ್‌ರೈಸರ್ಸ್ ಹೈದರಾಬಾದ್ - 1

ಎಲ್ಲಾ ತಂಡಗಳ ಖಾತೆಯಲ್ಲಿ ಉಳಿದುಕೊಂಡಿರುವ ಮೊತ್ತ ಹಾಗೂ ಆಟಗಾರರ ಅವಕಾಶಗಳು

ರಾಜಸ್ಥಾನ್ ರಾಯಲ್ಸ್: 35.85 ಕೋಟಿ ರೂ
ಲಭ್ಯವಿರುವ ಸ್ಲಾಟ್‌ಗಳು: 8, ವಿದೇಶಿ ಆಟಗಾರರ ಸ್ಲಾಟ್‌ಗಳು: 3
ರಾಯಲ್ ಚಾಲೆಂಜರ್ಸ್ ಬೆಂಗಳೂರು: 35.70 ಕೋಟಿ ರೂ
ಲಭ್ಯವಿರುವ ಸ್ಲಾಟ್‌ಗಳು: 12, ವಿದೇಶಿ ಆಟಗಾರರ ಸ್ಲಾಟ್: 3
ಚೆನ್ನೈ ಸೂಪರ್ ಕಿಂಗ್ಸ್: 22.90 ಕೋಟಿ ರೂ
ಲಭ್ಯವಿರುವ ಸ್ಲಾಟ್‌ಗಳು: 7, ವಿದೇಶಿ ಆಟಗಾರರ ಸ್ಲಾಟ್: 1
ಕಿಂಗ್ಸ್ ಇಲೆವೆನ್ ಪಂಜಾಬ್: 22.90 ಕೋಟಿ ರೂ
ಸ್ಲಾಟ್‌ಗಳು: 9, ವಿದೇಶಿ ಆಟಗಾರರ ಸ್ಲಾಟ್: 5
ಮುಂಬೈ ಇಂಡಿಯನ್ಸ್: 15.35 ಕೋಟಿ ರೂ
ಲಭ್ಯವಿರುವ ಸ್ಲಾಟ್‌ಗಳು: 7, ವಿದೇಶಿ ಆಟಗಾರರ ಸ್ಲಾಟ್: 4
ಡೆಲ್ಲಿ ಕ್ಯಾಪಿಟಲ್ಸ್: 12.80 ಕೋಟಿ ರೂ.
ಲಭ್ಯವಿರುವ ಸ್ಲಾಟ್‌ಗಳು: 5, ವಿದೇಶಿ ಆಟಗಾರರ ಸ್ಲಾಟ್: 2
ಕೋಲ್ಕತಾ ನೈಟ್ ರೈಡರ್ಸ್: 10.85 ಕೋಟಿ ರೂ
ಲಭ್ಯವಿರುವ ಸ್ಲಾಟ್‌ಗಳು: 7; ವಿದೇಶಿ ಆಟಗಾರರ ಸ್ಲಾಟ್: 1
ಸನ್‌ರೈಸರ್ಸ್ ಹೈದರಾಬಾದ್: 10.75 ಕೋಟಿ ರೂ
ಲಭ್ಯವಿರುವ ಸ್ಲಾಟ್‌ಗಳು: 3, ವಿದೇಶಿ ಆಟಗಾರರ ಸ್ಲಾಟ್: 1

ಹರಾಜಿನಲ್ಲಿ ಲಭ್ಯವಿರುವ ವಿದೇಶಿ ಆಟಗಾರರು:
ಮುಂಬರುವ ಹರಾಜು ಪ್ರಕ್ರಿಯೆಯಲ್ಲಿ ಕೆಲ ವಿದೇಶಿ ಆಟಗಾರರು ಲಭ್ಯಲಿರಲಿದ್ದಾರೆ. ಹೀಗಾಗಿ ಯಾವ ಫ್ರಾಂಚೈಸಿಗಳು ಯಾವ ಆಟಗಾರನನ್ನು ಕೊಂಡುಕೊಳ್ಳುವ ಮನಸ್ಸು ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಲಭ್ಯವಿರುವ ವಿದೇಶಿ ಆಟಗಾರರ ಪಟ್ಟಿ:
ಆರೋನ್ ಫಿಂಚ್, ಸ್ಟೀವ್ ಸ್ಮಿತ್, ಮೊಯೀನ್ ಅಲಿ, ಝೇ ರಿಚರ್ಡ್ಸನ್, ಡೇವಿಡ್ ಮಲನ್, ಗ್ಲೆನ್ ಫಿಲಿಪ್ಸ್, ಕೈಲ್ ಜೇಮೀಸನ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಮೆಕ್ಲೆನಾಘನ್, ಜೇಮ್ಸ್ ಪ್ಯಾಟಿನ್ಸನ್, ನಾಥನ್ ಕೌಲ್ಟರ್-ನೈಲ್, ಶೆರ್ಫೇನ್ ರುದರ್ಫೋರ್ಡ್, ಡೇಲ್ ಸ್ಟೇನ್, ಇಸುರು ಉದಾನಾ, ಬಿಲ್ಲಿ ಸ್ಟ್ಯಾನ್ಲೇಕ್, ಮುಜೀಬ್ ಉರ್ ರಹಮಾನ್, ಶೆಲ್ಡನ್ ಕಾಟ್ರೆಲ್, ಜಿಮ್ಮಿ ನೀಶಮ್, ಹಾರ್ಡಸ್ ವಿಲ್ಜೋಯೆನ್, ಕೀಮೋ ಪಾಲ್, ಸಂದೀಪ್ ಲಮಿಚೇನ್, ಅಲೆಕ್ಸ್ ಕ್ಯಾರಿ, ಜೇಸನ್ ರಾಯ್, ಸ್ಟೀವ್ ಸ್ಮಿತ್, ಟಾಮ್ ಕರ್ರನ್, ಓಶೇನ್ ಥಾಮಸ್, ಕ್ರಿಸ್ ಗ್ರೀನ್, ರಿಲೆ ಮೆರೆಡಿತ್, ವನಿಂಡು ಹಸರಂಗ, ರಾಸ್ಸಿ ವ್ಯಾನ್ ಡೆರ್ ಡುಸೆನ್, ಟಾಮ್ ಬ್ಯಾಂಟನ್, ಲಿಯಾಮ್ ಲಿವಿಂಗ್ಸ್ಟೋನ್, ಸ್ಯಾಮ್ ಬಿಲ್ಲಿಂಗ್ಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಬೆನ್ ಕಟಿಂಗ್, ಆಡಮ್ ಮಿಲ್ನೆ, ನಾಥನ್ ಎಲ್ಲಿಸ್, ಫ್ಯಾಬಿಯನ್ ಅಲೆನ್, ಗ್ಲೆನ್ ಮ್ಯಾಕ್ಸ್ ವೆಲ್, ಕ್ರಿಸ್ ಮೋರಿಸ್.

Story first published: Thursday, January 21, 2021, 15:48 [IST]
Other articles published on Jan 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+