ರಾಜಸ್ಥಾನ ತಂಡದಿಂದ ಸ್ಟೀವ್ ಸ್ಮಿತ್ ಔಟ್, ಸಂಜು ಹೊಸ ಕ್ಯಾಪ್ಟನ್!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2021ರ ಹರಾಜಿಗೂ ಮುನ್ನ ಇಂದು ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಅನೇಕ ತಂಡಗಳಲ್ಲಿ ಬದಲಾವಣೆ ಕಂಡು ಬಂದಿದೆ. ರಾಜಸ್ಥಾನ ರಾಯಲ್ಸ್ ತಂಡ ಪ್ರಮುಖ ಬದಲಾವಣೆ ಮಾಡಿದ್ದು, ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಸ್ಮಿತ್ ಅವರ ಗುತ್ತಿಗೆ ಈ ವರ್ಷಕ್ಕೆ ಕೊನೆಗೊಳ್ಳುತ್ತಿತ್ತು, ನಿರೀಕ್ಷೆಯಂತೆ ಸ್ಮಿತ್ ಗುತ್ತಿಗೆ ನವೀಕರಿಸಿಲ್ಲ, ಹೀಗಾಗಿ, ಸ್ಮಿತ್ ಹರಾಜಿಗೆ ಲಭ್ಯವಾಗಲಿದ್ದು, ಹೊಸ ತಂಡ ಸೇರಬಹುದಾಗಿದೆ. ಈ ಬಗ್ಗೆ ರಾಜಸ್ಥಾನ ರಾಯಲ್ಸ್ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿದಾಯ ಸಂದೇಶದ ಮೂಲಕ ತಿಳಿಸಿದೆ.
ರಾಜಸ್ತಾನ ರಾಯಲ್ಸ್ ತಂಡಕ್ಕೆ ಹೊಸ ನಾಯಕನ ಅಗತ್ಯವಿದೆ ಎಂದು ಮಾಜಿ ಕ್ರಿಕೆಟರ್ ಆಕಾಶ್ ಛೋಪ್ರಾ ಸೇರಿದಂತೆ ಅನೇಕ ವಿಶ್ಲೇಷಕರು ಅಭಿಪ್ರಾಯಪಟ್ಟ್ಟಿದ್ದರು. ಅದರಂತೆ ಸಂಜು ಸ್ಯಾಮ್ಸನ್ ಅವರನ್ನು ನೂತನ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ತಂಡದಲ್ಲಿ ಏನೇನು ಬದಲಾವಣೆ?
* 17 ಅಟಗಾರರರನ್ನು ಉಳಿಸಿಕೊಳ್ಳಲಾಗಿದ್ದು, 7 ಆಟಗಾರರನ್ನು ರಿಲೀಸ್ ಮಾಡಲಾಗಿದೆ.
* ತಂಡದಿಂದ ಹೊರಹಾಕಲ್ಪಟ್ಟವರು: ಸ್ಟೀವ್ ಸ್ಮಿತ್, ಅಂಕಿತ್ ರಜಪೂತ್, ಓಶಾನೆ ಥಾಮಸ್, ಆಕಾಶ್ ಸಿಂಗ್, ವರುಣ್ ಅರೋನ್, ಟಾಮ್ ಕರನ್, ಅನಿರುದ್ಧ ಜೋಶಿ, ಶಶಾಂಕ್ ಸಿಂಗ್
* ತಂಡದಲ್ಲಿ ಉಳಿದವರು(retained): ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಜೊಸ್ ಬಟ್ಲರ್, ರಿಯಾನ್ ಪರಾಗ್, ಶ್ರೇಯಸ್ ಗೋಪಾಲ್, ರಾಹುಲ್ ತೇವಾಟಿಯಾ, ಮಹಿಪಾಲ್ ಲೊಮ್ರೊರ್, ಕಾರ್ತಿಕ್ ತ್ಯಾಗಿ, ಆಂಡ್ರ್ಯೂ ಟೈ, ಜಯದೇವ್ ಉನದ್ಕತ್, ಮಯಾಂಕ್ ಮರ್ಕಾಂಡೆ, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಡೇವಿಡ್ ಮಿಲ್ಲರ್, ಮನನ್ ವೋಹ್ರಾ, ರಾಬಿನ್ ಉತ್ತಪ್ಪ.
* ಹೊಸ ನಾಯಕ: ಸಂಜು ಸ್ಯಾಮ್ಸನ್
* ಹೊಸ ನಿರ್ದೇಶಕ: ಕುಮಾರ ಸಂಗಕ್ಕಾರ
* ಒಟ್ಟು ಉಳಿದಿರುವ ಮೊತ್ತ: 34.85 ಕೋಟಿ ರು
* ವಿದೇಶಿ ಆಟಗಾರ ಕೋಟಾ: 3
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications