ಐಪಿಎಲ್ 2021: ಆರ್‌ಸಿಬಿ ಉಳಿಸಿಕೊಂಡಿರುವ, ಬಿಟ್ಟುಕೊಟ್ಟಿರುವ ಆಟಗಾರರ ಸಂಪೂರ್ಣ ಪಟ್ಟಿ

ಬೆಂಗಳೂರು: 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ನತ್ತ ಸಿದ್ಧತೆ ಶುರುವಾಗಿದ್ದು, ಎಲ್ಲಾ ಎಂಟು ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಳ್ಳುವ ಮತ್ತು ತಾವು ಬಿಟ್ಟುಕೊಡಲಿರುವ ಆಟಗಾರರ ಪಟ್ಟಿ ಪ್ರಕಟಿಸುತ್ತಿವೆ. ಐಪಿಎಲ್ ಹರಾಜಿಗೆ ಮುನ್ನ ಆಟಗಾರರನ್ನು ಉಳಿಸಿಕೊಳ್ಳುವ, ಬಿಟ್ಟುಕೊಡುವ ಪ್ರಕ್ರಿಯೆ ನಡೆಯಲಿದ್ದು, ಇದಕ್ಕೆ ಜನವರಿ 20 ಕಡೇಯ ದಿನವಾಗಿತ್ತು. ಈ ದಿನ ತಂಡಗಳು ಅಂತಿಮ ಪಟ್ಟಿ ಪ್ರಕಟಿಸುತ್ತಿವೆ.
14ನೇ ಆವೃತ್ತಿಯ ಐಪಿಎಲ್‌ಗೆ ಸಂಬಂಧಿಸಿ ಒಂದೊಂದಾಗಿ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ಆಟಗಾರರ ಪಟ್ಟಿ ಪ್ರಕಟಿಸುತ್ತಿದ್ದು, ಆಕರ್ಷಣೀಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೂಡ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಪ್ರಕಟಿಸಿದೆ.

ತಂಡದಲ್ಲೇ ಉಳಿದ ಪ್ರಮುಖರು
ನಾಯಕ ವಿರಾಟ್ ಕೊಹ್ಲಿ, ಆರ್‌ಸಿಬಿ ಆಪಾದ್ಭಾಂಧವ-ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿವಿಲಿಯರ್ಸ್, ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮೊದಲಾದವರು ಆರ್‌ಸಿಬಿಯಲ್ಲೇ ಉಳಿದುಕೊಂಡಿದ್ದಾರೆ. ಇನ್ನುಳಿದಂತೆ ಕೊಳ್ಳುವಿಕೆಯ ಮೂಲಕ ಆರ್‌ಸಿಬಿ ತಂಡವನ್ನು ಬಲಿಷ್ಠಗೊಳಿಸಿಕೊಳ್ಳಲಿದೆ.

ಉಳಿಸಿಕೊಂಡಿರುವ ಆಟಗಾರರ ಪಟ್ಟಿ
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಯುಜ್ವೇಂದ್ರ ಚಾಹಲ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಆಡಮ್ ಜಂಪಾ, ಶಹಬಾಜ್ ಅಹ್ಮದ್, ಜೋಶ್ ಫಿಲಿಪ್, ಕೇನ್ ರಿಚರ್ಡ್ಸನ್, ಪವನ್ ದೇಶಪಾಂಡೆ.

ಬಿಟ್ಟುಕೊಟ್ಟಿರುವ ಆಟಗಾರರ ಪಟ್ಟಿ
ಕ್ರಿಸ್ ಮೋರಿಸ್, ಆ್ಯರನ್ ಫಿಂಚ್, ಮೊಯೀನ್ ಅಲಿ, ಇಸುರು ಉದಾನಾ, ಡೇಲ್ ಸ್ಟೇನ್, ಶಿವಮ್ ದೂಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಮನ್, ಪಾರ್ಥಿವ್ ಪಟೇಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications