ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಹೆಚ್ಚಿನ ಬದಲಾವಣೆಯಿಲ್ಲ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2021ರ ಹರಾಜಿಗೂ ಮುನ್ನ ಇಂದು ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಅನೇಕ ತಂಡಗಳಲ್ಲಿ ಬದಲಾವಣೆ ಕಂಡು ಬಂದಿದೆ. ಐಪಿಎಲ್ 2021 ಅಧಿಕೃತ ಹರಾಜು ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಏನೆಲ್ಲ ಬದಲಾವಣೆಯಾಗಿದೆ ನೋಡೋಣ...
2016ರ ಐಪಿಎಲ್ ಚಾಂಪಿಯನ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಪ್ರಮುಖ ಬದಲಾವಣೆಯಾಗಿಲ್ಲ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ನಾಯಕರನ್ನಾಗಿ ಮುಂದುವರೆಸಲಾಗಿದೆ. ವಿದೇಶಿ ಆಟಗಾರರ ಪೈಕಿ ಫಾಬಿಯಾನ್ ಅಲೆನ್ ಹಾಗೂ ಬಿನ್ನಿ ಸ್ಟಾನ್ಲೇಕ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ತಂಡದ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿರುವ ಹೈದರಾಬಾದ್ ತನ್ನ ಜೋಳಿಗೆಯಲ್ಲಿ 10,75 ಕೋಟಿ ರು ಮೊತ್ತ ಮಾತ್ರ ಹೊಂದಿದೆ. ಕಳೆದ ಐಪಿಎಲ್ ನಲ್ಲಿ ಪ್ಲೇ ಆಫ್ ತಲುಪಿದರೂ ಫೈನಲ್ ತಲುಪಲಾಗಿರಲಿಲ್ಲ.
ತಂಡದಲ್ಲಿ ಉಳಿದ ಆಟಗಾರರು: ಡೇವಿಡ್ ವಾರ್ನರ್(ನಾಯಕ), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಜಾನಿ ಬೈರ್ಸ್ಟೋ, ವೃದ್ಧಿಮಾನ್ ಸಹಾ, ಶ್ರೀವತ್ಸ್ ಗೋಸ್ವಾಮಿ, ಪ್ರಿಯಂ ಗರ್ಗ್, ವಿರಾಟ್ ಸಿಂಗ್, ರಶೀದ್ ಖಾನ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮ, ಮಿಚೆಲ್ ಮಾರ್ಷ್, ಜಾಸನ್ ಹೋಲ್ಡರ್, ಅಬ್ದುಲ್ ಸಮದ್, ಟಿ ನಟರಾಜನ್, ಖಲೀಲ್ ಅಹ್ಮದ್, ಸಂದೀಪ್ ಶರ್ಮ, ಬಸಿಲ್ ಥಂಪಿ, ಶಾಬಾಜ್ ನದೀಂ, ಸಿದ್ದಾರ್ಥ್ ಕೌಲ್, ಭುವನೇಶ್ವರ್ ಕುಮಾರ್
ತಂಡದಿಂದ ಹೊರಹಾಕಲ್ಪಟ್ಟವರು: ಬಿಲ್ಲಿ ಸ್ಟಾನ್ಲೇಕ್, ಫಾಬಿಯನ್ ಅಲೆನ್, ಸಂಜಯ್ ಯಾದವ್, ಬಿ ಸಂದೀಪ್, ವೈ ಪೃಥ್ವಿರಾಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications