2021ರ ಐಪಿಎಲ್‌ನಲ್ಲಿ ಎಂಎಸ್ ಧೋನಿ ನಿರ್ಮಿಸಲಿರುವ ದಾಖಲೆಗಳ ಸಂಪೂರ್ಣ ಪಟ್ಟಿ

ನವದೆಹಲಿ: 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಕೆಟ್ಟ ಪ್ರದರ್ಶನ ನೀಡಿತ್ತು ನಿಜ. ಆದರೆ ಈ ಬಾರಿ ಸಿಎಸ್‌ಕೆ ಬಲಿಷ್ಠ ವಾಪಸ್ಸಾತಿ ನೀಡುವ ಎಲ್ಲಾ ಸಾಧ್ಯತೆಗಳಿವೆ. ಈ ಸೀಸನ್‌ನಲ್ಲಿ ಸಿಎಸ್‌ಕೆಯ ಪ್ರಮುಖ ಆಲ್ ರೌಂಡರ್, ಬೆಸ್ಟ್ ಫೀಲ್ಡರ್ ಸುರೇಶ್ ರೈನಾ ಆಡುತ್ತಿದ್ದಾರೆ. ಕನ್ನಡಿಗ ರಾಬಿನ್ ಉತ್ತಮ ಬಲವೂ ಸಿಎಸ್‌ಕೆ ಪರವಾಗಿದೆ.
ಕಳೆದ ವರ್ಷ ಅನೇಕ ದಿನಗಳ ಕಾಲ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದ ಸಿಎಸ್‌ಕೆ ನಾಯಕ ಎಂಎಸ್ ಧೋನಿಯಿಂದಲೂ ಉತ್ತಮ ಪ್ರದರ್ಶನ ಬಂದಿರಲಿಲ್ಲ. ಈ ಬಾರಿ ಸಿಎಸ್‌ಕೆ ಬೇಗನೆ ಅಭ್ಯಾಸ ಆರಂಭಿಸಿತ್ತು. ಹೀಗಾಗಿ ಧೋನಿ ಆಟವೂ ಹೆಚ್ಚು ನಿರೀಕ್ಷೆ ಮೂಡಿಸಿದೆ.
14ನೇ ಆವೃತ್ತಿಯಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಉತ್ತಮ ಪ್ರದರ್ಶನ ನೀಡಿದರೆ ಅವರ ಹೆಸರಿನಲ್ಲಿ ಬಹಳಷ್ಟು ದಾಖಲೆಗಳು ನಿರ್ಮಾಣವಾಗುವುದರಲ್ಲಿವೆ. ಧೋನಿ ನಿರ್ಮಿಸಿರುವ/ನಿರ್ಮಿಸಲಿರುವ ದಾಖಲೆಗಳ ಮಾಹಿತಿ ಇಲ್ಲಿದೆ.

ಆರ್‌ಸಿಬಿ ವಿರುದ್ಧ ಅತ್ಯಧಿಕ ರನ್
* ಎಂಎಸ್ ಧೋನಿ ಇಲ್ಲೀವರೆಗೆ ಒಟ್ಟು 204 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಇದು ಒಬ್ಬ ಆಟಗಾರ ಆಡಿದ ಅತ್ಯಧಿಕ ಐಪಿಎಲ್ ಪಂದ್ಯಗಳೆಂಬ ದಾಖಲೆಗೆ ಕಾರಣವಾಗಿದೆ.
* ಆರ್‌ಸಿಬಿ ವಿರುದ್ಧ ಧೋನಿ 832 ರನ್ ಬಾರಿಸಿದ್ದಾರೆ. ಒಬ್ಬ ಬ್ಯಾಟ್ಸ್‌ಮನ್ ಆರ್‌ಸಿಬಿ ವಿರುದ್ಧ ದಾಖಲಿಸಿರುವ ಅತ್ಯಧಿಕ ರನ್ ಇದು.
* ಐಪಿಎಲ್‌ನಲ್ಲಿ ಧೋನಿ ಒಟ್ಟು 209 ಸಿಕ್ಸರ್ ಬಾರಿಸಿದ್ದಾರೆ. ಇದು ಐಪಿಎಲ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಬಾರಿಸಿದ ಅತೀ ಹೆಚ್ಚು ಸಿಕ್ಸರ್ ಮತ್ತು ಒಟ್ಟಾರೆ 3ನೇ ಅತ್ಯಧಿಕ ಸಿಕ್ಸರ್ ದಾಖಲೆಯಾಗಿದೆ.

ಡೆತ್ ಓವರ್‌ನಲ್ಲಿ ಭರ್ಜರಿ ಸಿಕ್ಸರ್
* ಐಪಿಎಲ್‌ನಲ್ಲಿ 100 ಪಂದ್ಯಗಳನ್ನು ಗೆದ್ದ ಏಕಮಾತ್ರ ನಾಯಕ ದಾಖಲೆಗೆ ಎಂಎಸ್‌ಡಿ ಪಾತ್ರರಾಗಿದ್ದಾರೆ.
* ಮಾಹಿ 13 ಏಪ್ರಿಲ್ 2013ರಿಂದ 14 ಏಪ್ರಿಲ್ 2019ರ ವರೆಗೆ ಸತತ 85 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದರು. ಇದು ಟಿ20ಯಲ್ಲಿ ನಾಯಕನೊಬ್ಬ ಮುನ್ನಡೆಸಿದ 2ನೇ ಅತ್ಯಧಿಕ ಸತತ ಪಂದ್ಯಗಳು. ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗೌತಮ್ ಗಂಭೀರ್ (ಕೋಲ್ಕತ್ತಾ ನೈಟ್ ರೈಡರ್ಸ್) ಸತತ 107 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದರು.
* ಐಪಿಎಲ್ ಡೆತ್ ಓವರ್‌ನಲ್ಲಿ ಅತೀ ಹೆಚ್ಚು ಸಿಕ್ಸರ್ ದಾಖಲೆ ಎಂಎಸ್ ಧೋನಿ ಹೆಸರಿನಲ್ಲಿದೆ. 17-20 ಓವರ್‌ಗಳಲ್ಲಿ ಧೋನಿ ಒಟ್ಟು 141 ಸಿಕ್ಸರ್ ಬಾರಿಸಿದ್ದಾರೆ.

2021ರಲ್ಲಿ ಧೋನಿ ಮಾಡಬಹುದಾದ ದಾಖಲೆಗಳು
* ಧೋನಿ ವಿಕೆಟ್ ಕೀಪರ್ ಆಗಿ ಇನ್ನು ಬರೀ 2 ಔಟ್‌ಗೆ ಕಾರಣರಾದರೆ ಐಪಿಎಲ್‌ನಲ್ಲಿ ಒಟ್ಟು 150 ವಿಕೆಟ್ ಕೀಪಿಂಗ್ ಔಟ್‌ಗಾಗಿ ಧೋನಿ ಕಾರಣರಾಗಲಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಧೋನಿ ಮೊದಲಿಗರಾಗಲಿದ್ದಾರೆ.
* 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಧೋನಿ 179 ರನ್ ಬಾರಿಸಿದರೆ, ಟಿ20ಯಲ್ಲಿ 7000 ರನ್ ಮೈಲಿಗಲ್ಲನ್ನು ಧೋನಿ ಸ್ಥಾಪಿಸಲಿದ್ದಾರೆ.
* ಇನ್ನು 14 ಸಿಕ್ಸರ್‌ಗಳನ್ನು ಬಾರಿಸಿದರೆ ಮಹೇಂದ್ರ ಸಿಂಗ್ ಧೋನಿ ಸಿಎಸ್‌ಕೆ ಆಟಗಾರನಾಗಿ 200 ಸಿಕ್ಸರ್ ಬಾರಿಸಿದ ದಾಖಲೆ ನಿರ್ಮಾಣವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications