Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ರಾಯಲ್ ಚಾಲೆಂಜರ್ಸ್ ಪರ ಜಾರ್ಜ್ ಗಾರ್ಟನ್ ಪಾದಾರ್ಪಣೆ

IPL 2021: George Garton makes his debut for Royal Challengers Bangalore

ದುಬೈ: ಇಂಗ್ಲೆಂಡ್ ಯುವ ಬೌಲರ್ ಜಾರ್ಜ್ ಗಾರ್ಟನ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪಾದಾರ್ಪಣೆ ಮಾಡಿದ್ದಾರೆ. ಬುಧವಾರದ (ಸೆಪ್ಟೆಂಬರ್ 29) ಐಪಿಎಲ್ 43ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗಾರ್ಟನ್ ಕಣಕ್ಕಿಳಿದಿದ್ದಾರೆ.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನ ನಡೆದ ಪಂದ್ಯದಲ್ಲಿ 24ರ ಹರೆಯದ ಎಡಗೈ ಮಧ್ಯಮ ವೇಗಿ ಆರ್‌ಸಿಬಿ ಪರ ಮೈದಾನಕ್ಕೆ ಇಳಿದಿದ್ದಾರೆ. ಗಾರ್ಟನ್ ಅವರು ಇಂಗ್ಲೆಂಡ್ ಅಂಡರ್ 19, ಸಸೆಕ್ಸ್, ಇಂಗ್ಲೆಂಡ್ ಲಯನ್ಸ್, ಬಾಂಗ್ಲಾ ಟೈಗರ್ಸ್, ಸದರ್ನ್ ಬ್ರೇವ್ ತಂಡಗಳ ಪರ ಆಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.

1
50848

ಆಡಿರುವ 10 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ಪಂದ್ಯಗಳನ್ನು ಗೆದ್ದು 12 ಪಾಯಿಂಟ್ಸ್‌, -0.359 ನೆಟ್‌ರನ್‌ ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ. 10ರಲ್ಲಿ 4 ಪಂದ್ಯಗಳನ್ನು ಗೆದ್ದಿರುವ ರಾಜಸ್ಥಾನ್ ರಾಯಲ್ಸ್ 8 ಅಂಕ, -0.369 ರೇಟಿಂಗ್‌ ಪಾಯಿಂಟ್ಸ್‌ನೊಂದಿಗೆ 7ನೇ ಸ್ಥಾನದಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI
ವಿರಾಟ್ ಕೊಹ್ಲಿ (ಸಿ), ದೇವದತ್ ಪಡಿಕ್ಕಲ್, ಶ್ರೀಕರ್ ಭಾರತ್ (ವಿಕೆ), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್.
ಬೆಂಚ್: ಕೈಲ್ ಜೇಮೀಸನ್, ದುಷ್ಮಂತ ಚಮೀರಾ, ಸಚಿನ್ ಬೇಬಿ, ನವದೀಪ್ ಸೈನಿ, ಪವನ್ ದೇಶಪಾಂಡೆ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ವಾನಿಂದು ಹಸರಂಗ, ಸುಯಾಶ್ ಪ್ರಭುದೇಸಾಯಿ, ಟಿಮ್ ಡೇವಿಡ್, ಆಕಾಶ್ ದೀಪ್

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI
ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (c & wk), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್.
ಬೆಂಚ್: ತಬ್ರೇಜ್ ಶಮ್ಸಿ, ಶ್ರೇಯಸ್ ಗೋಪಾಲ್, ಡೇವಿಡ್ ಮಿಲ್ಲರ್, ಮನನ್ ವೊಹ್ರಾ, ಕೆಸಿ ಕರಿಯಪ್ಪ, ಗ್ಲೆನ್ ಫಿಲಿಪ್ಸ್, ಶಿವಂ ದುಬೆ, ಓಶಾನೆ ಥಾಮಸ್, ಮಯಾಂಕ್ ಮಾರ್ಕಂಡೆ, ಅನುಜ್ ರಾವತ್, ಜೆರಾಲ್ಡ್ ಕೋಟ್ಜಿ, ಕುಲ್ದಿಪ್ ಯಾದವ್, ಆಕಾಶ್ ಸಿಂಗ್, ಜಯದೇವ್ ಉನಾದ್ಕತ್.

Story first published: Thursday, September 30, 2021, 10:00 [IST]
Other articles published on Sep 30, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+