ಐಪಿಎಲ್ 2021: ಆರ್‌ಸಿಬಿ ತಂಡಕ್ಕೆ ಕೇನ್ ರಿಚರ್ಡ್ಸನ್ ಸ್ಥಾನಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

ಐಪಿಎಲ್ 2021ನೇ ಆವೃತ್ತಿಯ ಎರಡನೇ ಚರಣದ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಮತ್ತೊಂದು ಸೇರ್ಪಡೆಯನ್ನು ಮಾಡಿಕೊಂಡಿದೆ. ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಈ ಸ್ಥಾನಕ್ಕೆ ಇಂಗ್ಲೆಂಡ್‌ನ ವೇಗಿಯನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ ಆರ್‌ಸಿಬಿ ಫ್ರಾಂಚೈಸಿ. ಇಂಗ್ಲೀಷ್ ವೇಗದ ಬೌಲರ್ ಜಾರ್ಜ್ ಗಾರ್ಟನ್ ಅವರೊಂದಿಗೆ ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಿಗಾಗಿ ಒಪ್ಪಂದವನ್ನು ಮಾಡಿಕೊಂಡಿದೆ ಆರ್‌ಸಿಬಿ.
ಈ ಬಗ್ಗೆ ಬೆಂಗಳೂರು ಮೂಲದ ಫ್ರಾಂಚೈಸಿ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. "ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇಂಗ್ಲೀಷ್ ವೇಗದ ಬೌಲರ್ ಜಾರ್ಜ್ ಗಾರ್ಟನ್ ಅವರೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಐಪಿಎಲ್‌ನ ಉಳಿದ ಪಂದ್ಯಗಳಿಗೆ ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ಅಲಭ್ಯವಾಗುತ್ತಿದ್ದು ಅವರ ಸ್ಥಾನಕ್ಕೆ ಬದಲಿಯಾಗಿ ಐಪಿಎಲ್ 2021ರ ಉಳಿದ ಪಂದ್ಯಗಳಿಗೆ ಆರ್‌ಸಿಬಿ ತಂಡದೊಂದಿಗೆ ಆಡಲಿದ್ದಾರೆ" ಎಂದು ಈ ಪ್ರಕಟಣೆಯಲ್ಲಿ ಫ್ರಾಂಚೈಸಿ ಮಾಹಿತಿ ನೀಡಿದೆ.
ಎಡಗೈ ವೇಗದ ಬೌಲರ್ ಆಗಿರುವ ಜಾರ್ಜ್ ಗಾರ್ಟನ್ ಈವರೆಗೆ 38 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 20.06ರ ಸರಾಸರಿಯಲ್ಲಿ ಜಾರ್ಜ್ ಗಾರ್ಟನ್ 44 ವಿಕೆಟ್ ಸಂಪಾದಿಸಿದ್ದಾರೆ. ಬ್ಯಾಟ್ಸ್‌ಮನ್ ಆಗಿ ಜಾರ್ಜ್ ಗಾರ್ಟನ್ 20.77 ಸರಾಸರಿಯನ್ನು ಹೊಂದಿದ್ದು 124.66 ಸ್ಟ್ರೈಕ್‌ರೇಟ್ ಹೊಂದಿದ್ದಾರೆ.
ಈ ಮೂಲಕ ಜಾರ್ಜ್ ಐಪಿಎಲ್‌ಗೆ ಪದಾರ್ಪನೆ ಮಾಡಲಿದ್ದಾರೆ. ಈ ಸೇರ್ಪಡೆಯ ಮೂಲಕ ಆರ್‌ಸಿಬಿ ನಾಲ್ವರು ಬದಲಿ ಆಟಗಾರರನ್ನು ಸೇರಿಸಿಕೊಂಡಿದ್ದು ಎಲ್ಲಾ ಸ್ಥಾನಗಳನ್ನು ಭರ್ತಿ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications